ವೀಕೆಂಡ್‌ಗೆ ಗೋಲ್ಡನ್ ಧಮಾಕಾ; ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆ

ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಬೆಳ್ಳಿ ದರವೂ ಕಡಿಮೆಯಾಗಿದೆ. ಮದುವೆ ಸೀಸನ್ ಹತ್ತಿರವಿರುವಾಗ, ಬಜೆಟ್‌ನಲ್ಲಿ ಚಿನ್ನ ಖರೀದಿಸಲು ಇದು ಸಕಾಲ.

Drop in gold prices 5th April 2025 A golden opportunity for weekend shopping mrq

ವೀಕೆಂಡ್ ಬಂದ್ರೆ ಶಾಪಿಂಗ್ ಮಾಡೋದು ಹಲವರ ಅಭ್ಯಾಸ. ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ, ಇಂದು ದರ ಇಳಿಕೆಯಾಗಿದೆ. ಚಿನ್ನದ ಜೊತೆ ಜೊತೆಯಲ್ಲಿ ಬೆಳ್ಳಿ ದರವೂ ಕಡಿಮೆಯಾಗಿದೆ. ಸಂಬಳವಾದ ಮೊದಲ ವೀಕೆಂಡ್‌ ಇದಾಗಿದ್ದು, ಚಿನ್ನವನ್ನು ಮನೆಗೆ ಬರಮಾಡಿಕೊಳ್ಳಿ.

ಮದುವೆ ಸೀಸನ್ ಆರಂಭವಾಗಿದ್ದು, ಜನರು ಚಿನ್ನ ಖರೀದಿಸಲು ಹಣ ಉಳಿತಾಯ ಮಾಡಿಕೊಂಡಿರುತ್ತಾರೆ. ಬೆಲೆ ಕಡಿಮೆಯಾಗೋದನ್ನು ಕಾಯುತ್ತಿರುತ್ತಾರೆ. ಇಂದು ದರ ಇಳಿಕೆಯಾಗಿದ್ದು, ನಿಮ್ಮ ಬಜೆಟ್‌ನಲ್ಲಿ ಎಷ್ಟು ಚಿನ್ನ ಸಿಗುತ್ತೆ ಅಂತ ನೋಡಿಕೊಳ್ಳಿ. 


ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 8,399 ರೂಪಾಯಿ
8 ಗ್ರಾಂ: 67,192 ರೂಪಾಯಿ
10 ಗ್ರಾಂ: 83,990 ರೂಪಾಯಿ
100 ಗ್ರಾಂ: 8,39,900 ರೂಪಾಯಿ

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,163 ರೂಪಾಯಿ
8 ಗ್ರಾಂ: 73,304 ರೂಪಾಯಿ
10 ಗ್ರಾಂ: 91,630 ರೂಪಾಯಿ
100 ಗ್ರಾಂ: 9,16,300 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 83,990 ರೂಪಾಯಿ, ಮುಂಬೈ: 83,990 ರೂಪಾಯಿ, ದೆಹಲಿ: 84,140 ರೂಪಾಯಿ, ಕೋಲ್ಕತ್ತಾ: 83,990 ರೂಪಾಯಿ, ಬೆಂಗಳೂರು: 83,990 ರೂಪಾಯಿ, ಹೈದರಾಬಾದ್: 83,990 ರೂಪಾಯಿ, ಪುಣೆ: 83,990 ರೂಪಾಯಿ

ದೇಶದಲ್ಲಿಂದು ಬೆಳ್ಳಿ ಬೆಲೆ 

ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. 
10 ಗ್ರಾಂ: 989  ರೂಪಾಯಿ
100 ಗ್ರಾಂ: 9,890 ರೂಪಾಯಿ
1000 ಗ್ರಾಂ: 98,900 ರೂಪಾಯಿ

ಎಷ್ಟು ದರ ಇಳಿಕೆ?
ಇಂದು 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿಗಳಷ್ಟು ಇಳಿಕೆಯಾಗಿದೆ. ಹಾಗೆ 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇಂದು ಒಳ್ಳೆಯ ದಿನವಾಗಿದೆ. 

Latest Videos

vuukle one pixel image
click me!