ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಲಿದೆ. ಇದೀಗ ಆರ್ಥಿಕ ತಜ್ಞರ ತಂಡ ಗುಡ್ ನ್ಯೂಸ್ ನೀಡಿದೆ. ದೀಪಾವಳಿಗೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ಸೂಚಿಸಿದೆ.
ಚಿನ್ನದ ದುಬಾರಿ ಪಟ್ಟ ಕಳಚುತಾ? ಆರ್ಥಿಕ ತಜ್ಞರು ಮಹತ್ವದ ಸೂಚನೆಯೊಂದು ನೀಡಿದ್ದಾರೆ. ಈ ಬಾರಿ ದೀಪಾವಳಿ ವೇಳೆಗೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಲಿದೆ ಎಂದಿದ್ದಾರೆ. ಸದ್ಯ ಚಿನ್ನದ ಬೆಲೆ ನಿಧಾನವಾಗಿ ಇಳಿಕೆಯಾಗುತ್ತಿದೆ. ದೀಪಾವಳಿ ವೇಳೆಗೆ ಗಣನೀಯ ಇಳಿಕೆಯೊಂದಿಗೆ ಗ್ರಾಹಕರ ಕೈಸೇರಲಿದೆ ಎಂದು ಆರ್ಥಿಕ ತಜ್ಞರು ಸೂಚಿಸಿದ್ದಾರೆ. ಸದ್ಯ ಇಳಿಕೆಯಸ ಪ್ರಮಾಣ, ಚಿನ್ನದ ಬೆಲೆ ಇಳಿಕೆ ಕಾರಣಗಳನ್ನು ತಜ್ಞರು ಸೂಚಿಸಿದ್ದಾರೆ.
25
ಅಕ್ಟೋಬರ್ 21ರಷ್ಟು ಚಿನ್ನದ ಬೆಲೆಯಲ್ಲಿ ಆದ ಇಳಿಕೆ ಎಷ್ಟು
ಇಂದು (ಅ.21) ಚಿನ್ನದ ಬೆಲೆ ಇಳಿಕೆಯತ್ತ ಸಾಗಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಶೇಕಡಾ 0.03ರಷ್ಟು ಇಳಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 1,46,482 ರೂಪಾಯಿ ಆಗಿದೆ. ಇದಕ್ಕೂ ಮೊದಲು ಚಿನ್ನ ಮಾರುಕಟ್ಟೆಯಲ್ಲಿ ಮುಕ್ತಾಯದ ವ್ಯಾಪಾರ ವೇಳೆ 1,46,519 ರೂಪಾಯಿಗೆ ವಹಿವಾಟು ಮುಗಿಸಿತ್ತು.
35
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆ
ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 0.3ರಷ್ಟು ಇಳಿಕೆಯಾಗಿದೆ.ಪ್ರತಿ ಔನ್ಸ್ಗೆ $4,128.92 ಆಗಿತ್ತು. ಚಿನ್ನ ನಿಧಾನವಾಗಿ ಬೆಲೆಯ ಭಾರ ಇಳಿಸುತ್ತಿದೆ. ಇದಕ್ಕೆ ಕಾರಣಗಳು ಸ್ಪಷ್ಟವಾಗಿದೆ.
ದೀಪಾವಳಿ, ದಾಂತೇರಸ್ ವೇಳೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಕಲಿದೆ. ಈ ವೇಳೆ ಚಿನ್ನದ ಬೇಡಿಕೆ ಭಾರತದಲ್ಲಿ ಹೆಚ್ಚಾಗಲಿದೆ. ಆದರೂ ಬೆಲೆ ಕೈಗೆಟುಕಲಿದೆ ಎಂದು ತಜ್ಞರು ಸೂಚಿಸಿದ್ದಾರೆ. ಆದರೆ ದೀಪಾವಳಿ, ದಾಂತೇರಸ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಲಿದೆ. ಮದುವೆ ಸೀಸನ್ ಸೇರಿದಂತೆ ಇತಲ ಕೆಲ ಕಾರಣಗಳಿಂದ ಚಿನ್ನದ ಬೇಡಿಕೆ ಹೆಚ್ಚಾಗಲಿದೆ ಎಂದು ತಜ್ಞರೂ ಸೂಚಿಸಿದ್ದಾರೆ.
55
ಚಿನ್ನದ ಬೆಲೆ ಇಳಿಕೆಗೆ ಕಾರಣವೇನು
ಹೌಥಿ ಬಂಡುಕೋರರು ಸೌದಿ ಅರೆಬಿಯಾ ಹಲವೆಡೆ ದಾಳಿ ಮಾಡುತ್ತಿದ್ದಾರೆ. ತೈಲ ಘಟಕ, ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ದಾಳಿಯಾಗಿದೆ. ಜಲಸಂಧಿಗಳಲ್ಲಿ ತೈಲ ಹಡಕುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಿಂದ ತೈಲ ಬೆಲೆ ಏರಿಕೆಯಾಗುತ್ತದೆ. ಪರಿಣಾಣ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹಣದುಬ್ಬರ ನಿಯಂತ್ರಿಸಲು ಬಡ್ಡಿ ದರ ಏರಿಕೆ ಮಾಡಿದರೆ ಹೂಡಿಕೆದಾರರು ರಿಟರ್ನ್ಸ್ ಮೇಲೆ ಹೂಡಿಕೆ ಹೆಚ್ಚು ಮಾಡುತ್ತಾರೆ. ಇದರಿಂದ ಚಿನ್ನ ಮೇಲಿನ ಹೂಡಿಕೆ ಕಡಿಮೆಯಾಗಲಿದೆ ಎಂದು ತಜ್ಞರು ಸೂಚಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.