ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಲವು ಐಷಾರಾಮಿ ಕಾರು, ಪ್ರೈವೇಟ್ ಜೆಟ್, ವಿಹಾರ ನೌಕೆ ಸೇರಿದಂತೆ ಎಲ್ಲಾ ಲಕ್ಷುರಿ ವಸ್ತುಗಳು ಜೆಫ್ ಬಳಿ ಇವೆ. ಆದರೆ ಏಕಾಏಕಿ ಕಸ್ಟಮ್ಸ್ ಅಧಿಕಾರಿಗಳು ಜೆಫ್ ಬೆಜೋಸ್ ವಿಹಾರ ನೌಕೆ ಮೇಲೆ ದಾಳಿ ಮಾಡಿದ್ದಾರೆ. ಆದರೆ ದಾಳಿ ವೇಳೆ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ.
ಜೆಫ್ ಬೆಜೋಸ್ ಅವರ ಬರೋಬ್ಬರಿ 500 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಿಹಾರ ನೌಕೆ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ನೌಕೆಯಲ್ಲಿ ಜೆಫ್ ಗರ್ಲ್‌ಫ್ರೆಂಡ್ ಲೌರೆನ್ ಸ್ಯಾನ್‌ಶೆಝ್ ಸೂರ್ಯ ಸ್ನಾನ ಮಾಡುತ್ತಿರುವಾಗಲೇ ಈ ದಾಳಿ ನಡೆದಿದೆ. ದಿಢೀರ್ ಅಧಿಕಾರಿಗಳನ್ನು ಕಂಡು ಜೆಫ್ ಗೆಳತಿಗೆ ಇರಿಸುಮುರಿಸು ಉಂಟಾಗಿದೆ.
ಸೈಂಟ್ ಬಾರ್ತ್ಲೆಮಿ ದ್ವೀಪದಲ್ಲಿ ಜೆಫ್ ಬೆಜೋಸ್ ಗೆಳತಿ ಲೌರೆನ್ ವಿಹಾರದಲ್ಲಿದ್ದರು. ಹೊಸ ವರ್ಷದ ರಾತ್ರಿ ದಿನ ಸಂಭ್ರಮ ಆರಂಭಗೊಳ್ಳುತ್ತಿದ್ದಂತೆ ಈ ದಾಳಿ ನಡೆದಿದೆ. ಬರೋಬ್ಬರಿ 3 ಗಂಟೆಗಳ ಕಾಲ ಅಧಿಕಾರಿಗಳು ಇಡೀ ವಿಹಾರ ನೌಕೆಯನ್ನು ತಡಕಾಡಿದ್ದಾರೆ. ದಾಖಲೆ ಸೇರಿದಂತೆ ಹಲವು ಮಾಹಿತಿ ಪರಿಶೀಲಿಸಿದ್ದಾರೆ.
ನೌಕೆಯಲ್ಲಿ ಲೌರೆನ್ ತಮ್ಮ ಸಮಯ ಕಳೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸನ್‌ಬಾತ್‌ನಲ್ಲಿದ್ದ ಕಾರಣ ಲೌರೆನ್ ಅಧಿಕಾರಿಗಳ ದಾಳಿಯಿಂದ ಕೊಂಚ ಅಸಮಾಧಾನಗೊಂಡಿದ್ದಾರೆ. ಆದರೆ ಜೆಫ್ ಸಿಬ್ಬಂಧಿಗಳು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಧಿಕಾರಿಗಳು 3 ಗಂಟೆ ಪರಿಶೋಧನೆ ಬಳಿಕ ತೆರಳಿದ್ದಾರೆ. ಅಧಿಕಾರಿಗಳ ದಾಳಿ ಮುಗಿದ ಬಳಿಕ ನ್ಯೂ ಇಯರ್ ಪಾರ್ಟಿ ಆರಂಭಗೊಂಡಿದೆ.
ಕಸ್ಟಮ್ಸ್ ಅಧಿಕಾರಿಗಳ ದಾಳಿ ವೇಳೆ ಜೆಫ್ ಬೆಜೋಸ್ ಈ ನೌಕೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪರಿಶೋಧನೆ ಸೇರಿದಂತೆ ದಾಳಿಗೆ ಯಾವುದೇ ಅಡೆ ತಡೆ ಎದುರಾಗಿಲ್ಲ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಇದು ಸಾಮಾನ್ಯ ದಾಳಿಯಾಗಿದೆ. 6 ತಿಂಗಳು ಅಥವಾ 3 ತಂಗಳಿಗೊಮ್ಮೆ ಈ ರೀತಿ ರೂಟಿನ್ ದಾಳಿ ನಡೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.