RBIಯ ಹೊಸ ನಿಯಮದ ಪ್ರಕಾರ, ಬ್ಯಾಂಕುಗಳು ಸಿಬಿಲ್‌ಗೆ ಮರುಪಾವತಿಸದ ಗ್ರಾಹಕರ ಪಟ್ಟಿ ಕಳಿಸುವ ಮುನ್ನ ಗ್ರಾಹಕರಿಗೆ ತಿಳಿಸಬೇಕು. ಹೀಗಾಗಿ ಗ್ರಾಹಕರು ತಮ್ಮ ಸಿಬಿಲ್ ಸ್ಕೋರ್ ಹಾಳಾಗುವ ಮುನ್ನ ಎಚ್ಚರಿಕೆ ವಹಿಸಬಹುದು. ಇದಲ್ಲದೆ, ಯಾವುದೇ ಸಂಸ್ಥೆ ಸಿಬಿಲ್ ಸ್ಕೋರ್ ಪರಿಶೀಲಿಸಿದಾಗ, ಆ ಮಾಹಿತಿಯನ್ನು ಗ್ರಾಹಕರಿಗೆ ಮೇಲ್ ಮೂಲಕ ತಿಳಿಸಬೇಕು. ಗ್ರಾಹಕರು ಪ್ರತಿ ವರ್ಷ ಒಂದು ಸಂಪೂರ್ಣ ಕ್ರೆಡಿಟ್ ವರದಿಯನ್ನು ಉಚಿತವಾಗಿ ಪಡೆಯಬಹುದು.
ಗ್ರಾಹಕರಿಗೆ ಅನುಕೂಲವಾಗುವ ಈ ಹೊಸ ನಿಯಮಗಳು ಏಪ್ರಿಲ್ 26, 2024 ರಿಂದ ಜಾರಿಗೆ ಬಂದಿವೆ. ಗ್ರಾಹಕರು ಸಿಬಿಲ್ ಸ್ಕೋರ್ ಬಗ್ಗೆ ದೂರು ನೀಡಿದರೆ, ಸಂಸ್ಥೆಯು 30 ದಿನಗಳಲ್ಲಿ ದೂರು ಪರಿಹರಿಸಬೇಕು. ಇಲ್ಲದಿದ್ದರೆ, ಸಂಸ್ಥೆಯು ಪ್ರತಿ ದಿನಕ್ಕೆ ರೂ.100 ದಂಡ ತೆರಬೇಕಾಗುತ್ತದೆ.