MNC ಕೆಲಸ ಬಿಟ್ಟು ಟೀ ಮಾರಿ ಲಕ್ಷ ಸಂಪಾದಿಸುತ್ತಿರುವ ಎಂಜಿನಿಯರ್

First Published Sep 4, 2020, 7:10 PM IST

ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿ ತನ್ನ ಕೆಲಸ ಬಿಟ್ಟು ರಸ್ತೆಯಲ್ಲಿ ಚಹಾ ಮಾರಾಟ ಮಾಡಬಹುದು ಎಂದು ಯಾರಾದರೂ ಊಹಿಸಲು ಸಾಧ್ಯನಾ? ಆದರೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ವಾಸಿಸುವ ಯುವಕ ಇದಕ್ಕೆ ಉದಾಹರಣೆ. ಎಂಜಿನಿಯರಿಂಗ್ ಪದವಿ ನಂತರ ಕಂಪನಿಯಲ್ಲಿ ಒಳ್ಳೆ ಕೆಲಸವಿದ್ದರೂ ಸಂತೋಷವಾಗಿರಲಿಲ್ಲ. ಬೇರೆ ಏನಾದರೂ ಮಾಡಲು ಬಯಸಿದ್ದ ಅವರು ಎಂಜಿನಿಯರ್ ಚೈವಾಲಾ ಎಂಬ ಗಾಡಿಯನ್ನು ಪ್ರಾರಂಭಿಸಿದ್ದರು.ಇದರಿಂದ ಬರುವ ಆದಾಯವನ್ನು ತಿಳಿದರೆ, ನೀವೂ ಬಹುಶಃ ನಿಮ್ಮ ಕೆಲಸವನ್ನು ಬಿಟ್ಟು ಚಹಾ ಮಾರಾಟ ಪ್ರಾರಂಭಿಸುತ್ತೀರಿ.

ಈ ದಿನಗಳಲ್ಲಿ ಎಂಜಿನಿಯರ್ ಚಾಯಿವಾಲಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ಇನ್ಸ್ಟಾಗ್ರಾಮ್‌ನಿಂದ ಫೇಸ್ಬುಕ್‌ ವರೆಗೆ ಅವರ ಬಗ್ಗೆ ಚರ್ಚೆಯನ್ನು ಕಾಣಬಹುದು. ಇದರಲ್ಲಿ, ಒಬ್ಬ ವ್ಯಕ್ತಿಯು ಟೀ ತಯಾರಿಸುತ್ತಿದ್ದಾನೆ ಮತ್ತು ಅಂಗಡಿಯ ಹೆಸರು ಎಂಜಿನಿಯರ್ ಚಾಯ್‌ವಾಲಾ.
undefined
ಎಂಜಿನಿಯರ್ ಚಾಯಿವಾಲಾನ ನಿಜವಾದ ಹೆಸರು ಅಂಕಿತ್ ನಾಗ್ವಾಂಶಿ. ಮಧ್ಯಪ್ರದೇಶದ ಚಿಂದ್ವಾರ ನಿವಾಸಿ. ಈ ಸಾಫ್ಟ್‌ವೇರ್ ಎಂಜಿನಿಯರಿಂಗ್ ಅನೇಕ ಕಂಪನಿಗಳೊಂದಿಗೆ ಕೆಲಸ ಮಾಡಿದ ಅನುಭವವಿದೆ.
undefined
ಅಂಕಿತ್ ಯಾವಾಗಲೂ ತನ್ನ ಸ್ವಂತ ವ್ಯವಹಾರವನ್ನು ಮಾಡಲು ಬಯಸುತ್ತಿದ್ದ. ಅನೇಕ ಕಂಪನಿಗಳಲ್ಲಿ ಉತ್ತಮ ಕೆಲಸ ಹೊಂದಿದ್ದರು ಆದರೆ ಮನಸ್ಸಿರಲಿಲ್ಲ. ಅಂಕಿತ್ ವ್ಯಾಪಾರ ಮಾಡಲು ಬಯಸಿದ್ದರು ಆದರೆ ಯಾವ ವ್ಯವಹಾರದಲ್ಲಿ ಇನ್ವೇಸ್ಟ್‌ ಮಾಡಬೇಕೆಂದು ತಿಳಿದಿರಲಿಲ್ಲ.
undefined
ಅಂಕಿತ್ ಪ್ರಕಾರ, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಆಗಾಗ್ಗೆ ಕಚೇರಿಯ ಹೊರಗೆ ಚಹಾ ಕುಡಿಯಲು ಹೋಗುತ್ತಿದ್ದರು. ಒಂದು ದಿನ ಒಳ್ಳೆಯ ಚಹಾ ಸಿಕ್ಕಿರೆ, ಕೆಲವೊಮ್ಮೆ ಟೀ ಕೆಟ್ಟದಾಗಿರುತ್ತಿತ್ತು. ಚಹಾ ಕುಡಿಯಲು ಅನೇಕ ಜನರು ಅಲ್ಲಿಗೆ ಬರುವುದನ್ನು ಆತ ಗಮನಿಸುತ್ತಿದ್ದನು. ಅಂತಹ ಪರಿಸ್ಥಿತಿಯಲ್ಲಿ, ಚಹಾ ವ್ಯಾಪಾರವನ್ನು ಮಾಡಬಹುದು ಎಂದು ಯೋಚಿಸಿ ಅಂಕಿತ್‌.
undefined
ಆದರೆ , ಎಂಜಿನಿಯರ್ ಚಹಾವನ್ನು ಮಾರಾಟ ಮಾಡಿದರೆ ಸಮಾಜ ಏನು ಹೇಳುತ್ತದೆ? ಇದನ್ನು ಯೋಚಿಸಿ ಸ್ವಲ್ಪ ಸಮಯ ತೆಗೆದುಕೊಂಡರು. ಕೊನೆಗೆ ಅಂಕಿತ್ ಈ ವಿಷಯವನ್ನು ತಮ್ಮ ಕುಟುಂಬದೊಂದಿಗೆ ಚರ್ಚಿಸಿದಾಗ. ಅವರು ಸಹ ಒಪ್ಪಿದರು.
undefined
ಸಮಾಜ ಮತ್ತು ಜನರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದ ಅಂಕಿತ್ ಎಂಜಿನಿಯರ್ ಚೈವಾಲಾವನ್ನು ಪ್ರಾರಂಭಿಸಿದರು. ನಾನು ಎಂಜಿನಿಯರ್, ಆದರೆ ತನ್ನ ಕೆಲಸದಲ್ಲಿ ಆರಾಮ ಆಗಿರಲಿಲ್ಲ. ನನಗೆ ಚಹಾ ಕೂಡ ಇಷ್ಟ. ಸರಿಯಾದ ಚಹಾಸಿಗಲಿಲ್ಲ. ಆದ್ದರಿಂದನನ್ನ ಕೆಲಸವನ್ನು ಬಿಟ್ಟು ಜನರಿಗೆ ಚಹಾವನ್ನು ನೀಡುತ್ತಿದ್ದೇನೆ ಎಂದು ಎಂದು ತಮ್ಮ ಟೀ ಸ್ಟಾಲ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ,
undefined
ನೀವು ಅಂಕಿತ್‌ನ ಆದಾಯದ ಬಗ್ಗೆ ಕೇಳಿದರೆ ಆಶ್ಚರ್ಯ ಪಡುವುದು ಗ್ಯಾರಂಟಿ, ಪ್ರತಿದಿನ ಸುಮಾರು 300 ಕಪ್ ಚಹಾವನ್ನು ಮಾರುತ್ತಾರೆ. ಚಹಾ ವ್ಯವಹಾರದಿಂದ ಪ್ರತಿ ತಿಂಗಳು ಒಂದೂವರೆಯಿಂದ ಎರಡು ಲಕ್ಷದವರೆಗೆ ಗಳಿಸುತ್ತೇನೆ ಎಂದು ಅಂಕಿತ್ ಸ್ವತಃ ಹೇಳಿದ್ದಾರೆ. ಈ ಆದಾಯ ಎಂಜಿನಿಯರಿಂಗ್ ಉದ್ಯೋಗದಲ್ಲಿ ಸಹ ಇರಲಿಲ್ಲ. ಅವರು ಅಂದು ರಿಸ್ಕ್‌ ತೆಗೆದುಕೊಂಡರು ಮತ್ತು ಇಂದು ಚರ್ಚೆಯಲ್ಲಿದ್ದಾರೆ.
undefined
click me!