ವ್ಯಾಪಾರ ಶುರು ಮಾಡ್ಬೇಕು ಅಂತ ಎಲ್ಲರೂ ಅಂದುಕೊಳ್ತಾರೆ. ಆದ್ರೆ ಗೆಲ್ಲೋದು ಕೆಲವರು ಮಾತ್ರ. ಗೆಲ್ಲಬೇಕು ಅಂದ್ರೆ ಹೊಸತನಕ್ಕೆ ಮನಸ್ಸು ಮಾಡಬೇಕು. ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ದುಡಿಯೋ ಒಂದು ಸೂಪರ್ ಐಡಿಯಾ ಇಲ್ಲಿದೆ ನೋಡಿ.
ತೆಂಗಿನ ಚಿಪ್ಪು ಅಂದ್ರೆ ತ್ಯಾಜ್ಯ ಅಂತ ತಿಳ್ಕೊಂಡಿದ್ದೀವಿ. ಆದ್ರೆ ಅದ್ರಲ್ಲೂ ದುಡ್ಡಿದೆ. ಪರಿಸರ ಸ್ನೇಹಿ ಈ ವ್ಯಾಪಾರಕ್ಕೆ ಹೆಚ್ಚು ಹೂಡಿಕೆ ಬೇಕಾಗಿಲ್ಲ. ಚಿಪ್ಪಿನಿಂದ ಏನು ಮಾಡೋದು? ಹೇಗೆ ಶುರು ಮಾಡೋದು? ಎಷ್ಟು ಲಾಭ ಬರುತ್ತೆ? ಎಲ್ಲಾ ಇಲ್ಲಿದೆ.
25
ಚಿಪ್ಪಿನಿಂದ ಏನು ಮಾಡೋದು?
ಚಿಪ್ಪಿನಿಂದ ಕರಕುಶಲ, ಅಲಂಕಾರಿಕ ವಸ್ತುಗಳು, ಊದಿನಕಡ್ಡಿ ಪುಡಿ, ಬಟ್ಟಲು, ಲೋಟ, ಚಮಚ ಮುಂತಾದವುಗಳನ್ನು ತಯಾರಿಸಬಹುದು. ಇವುಗಳಿಗೆ ಭಾರೀ ಬೇಡಿಕೆ ಇದೆ.
35
ವ್ಯಾಪಾರ ಹೇಗೆ ಶುರು ಮಾಡೋದು?
ಮೊದಲು ಬೇಡಿಕೆ ಇರೋ ವಸ್ತುಗಳ ಬಗ್ಗೆ ತಿಳ್ಕೊಳ್ಳಿ. ಹೋಟೆಲ್, ದೇವಸ್ಥಾನಗಳಲ್ಲಿ ಚಿಪ್ಪು ಸಿಗುತ್ತೆ. ಯಂತ್ರಗಳು ಬೇಕಾಗುತ್ತೆ. MSME, GST, ಪರವಾನಗಿ ಪಡೆಯಬೇಕು.