Credit Card ಬಿಲ್, ಕೊಂಚ ಯಾಮಾರಿದ್ರೂ ಬೀಳುತ್ತೆ ಬಡ್ಡಿ: ಈ ನಿಯಮ ನಿಮಗೆ ಗೊತ್ತಿರಲಿ!

First Published | Sep 15, 2020, 5:32 PM IST

ಇಂದು ಅನೇಕ ಮಂದಿ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಕ್ಯಾಶ್ ಅಥವಾ ಅಕೌಂಟ್‌ನಲ್ಲಿ ಹಣ ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದಾಗಿದೆ. ಒಂದು ವೇಎ ಯಾರಾದರೂ ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸಿ ಹಣ ಪಾವತಿ ಕನಿಷ್ಟ ಮಾಡುತ್ತಾರೆಂದಾದರೆ ನಿಮಗೆ ಭಾರೀ ನಷ್ಟವಾಗುತ್ತದೆ. ಹೌದು ನೀವು ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗೇ ಕ್ರೆಡಿಟ್ ಕಾರ್ಡ್ ನಿಯಮ ತಿಳಿದುಕೊಳ್ಳುವುದು ಅತ್ಯಗತ್ಯ.
 

ಕಡಿಮೆ ಪಾವತಿಯಿಂದ ಹೆಚ್ಚು ಹೊರೆ!|ಒಂದು ವೇಳೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್‌ ಮೂಲಕ ಹತ್ತು ಸಾವಿರ ರೂಪಾಯಿ ಖರ್ಚು ಮಾಡುತ್ತೀರಿ ಹಾಗೂಬಿಲ್‌ ಪಾವತಿಸುವ ವೇಳೆ 500 ರೂ. ಮಿನಿಮಮ್ ಅಮೌಂಟ್ ಡ್ಯೂ ಮಾಡುವ ಆಯ್ಕೆ ಬಂದರೆ ನೀವು ತೊಂದರೆಯಲ್ಲಿದ್ದೀರಿ. ಕ್ರೆಡಿಟ್ ಕಾರ್ಡ್‌ ಬಳಸಲು ಮೂರು ಆಯ್ಕೆಗಳಿವೆ.
undefined
ಎಷ್ಟು ಮೊತ್ತಕ್ಕೆ ಬಡ್ಡಿ?: ಕ್ರೆಡಿಟ್ ಕಾರ್ಡ್‌ನಲ್ಲಿ ಮೊದಲ ಆಯ್ಕೆ ಸಂಪೂರ್ಣ ಹಣ ಪಾವತಿಸುವುದು. ಎರಡನೇ ಆಯ್ಕೆಯಲ್ಲಿ ಕನಿಷ್ಟ ಬೆಲೆ ಪಾವತಿ ಅಂದರೆ ಶೇ. 5ರಷ್ಟು ಪಾವತಿಸಬೇಕಾಗುತ್ತದೆ. ಹೀಗಿರುವಾಗ ಮಿನಿಮಮ್ ಅಮೌಂಟ್‌ ಡ್ಯೂ ಫೇಸ್‌ನಲ್ಲಿ ಉಳಿದ ಶೇ. 95ರಷ್ಟು ಹಣಕ್ಕೆ ಬಡ್ಡಿ ತಗುಲುತ್ತದೆ.
undefined

Latest Videos


ಶೇ. 40ರವರೆಗೆ ಬಡ್ಡಿ ನೀಡಬೇಕಾಗುತ್ತದೆ: ಮಿನಿಮಮ್ ಅಮೌಂಟ್ ಡ್ಯೂ ಸೌಲಭ್ಯ ಕ್ರೆಡಿಟ್ ಕಾರ್ಡ್‌ ಕಂಪನಿಗಳು ನೀಡುತ್ತವೆ. ಇದರಡಿಯಲ್ಲಿ ಇಡೀ ಮೊತ್ತದ ಬದಲು ಅದರ ಶೇ. 5ರಷ್ಟು ಪಾವತಿಸಬಹುದು. ಆದರೆ ಮುಂದಿನ ಬಿಲ್ಲಿಂಗ್ ಪಾವತಿ ಸಮಯದಲ್ಲಿ ಶೇ. 3-4 ಬಡ್ಡಿ ಜೊತೆ ಸೇರಿ ಬರುತ್ತದೆ. ಇದು ಒಂದು ವರ್ಷದಲ್ಲಿ ಶೇ. 40ಕ್ಕಿಂತ ಅಧಿಕವಾಗಬಹುದು.
undefined
ದಂಡ ಬೀಳಬಹುದು: ಕ್ರೆಡಿಟ್ ಕಾರ್ಡ್‌ ಎಷ್ಟು ಬಳಸತ್ತೀರೋ ಬಿಲ್ ಕೂಡಾ ಅಷ್ಟೇ ಬರುತ್ತದೆ. ಅನೇಕ ಬಾರಿ ಜನರು ಸಂಪೂರ್ಣ ಮೊತ್ತ ಪಾವತಿಸುವುದು ಬಿಡಿ ಮಿನಿಮಮ್ ಪೇಮೆಂಟ್ ಕೂಡಾ ಮಾಡಲು ಪರದಾಡುತ್ತಾರೆ. ಹೀಗಿರುವಾಗ ಒಂದು ಸಾವಿರ ರೂ. ದಂಡ ಪಾವತಿಸುವ ಪರಿಸ್ಥಿತಿಯೂ ಬರಬಹುದು.
undefined
ಸಂಪೂರ್ಣ ಮೊತ್ತ ಪಾವತಿಸಲೇಬೇಕು:ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಬಳಸುತ್ತೀರೆಂದಾದರೆ ಬಿಲ್ ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ. ಮಿನಿಮಮ್ ಪೇಮೆಂಟ್‌ ಸೌಲಭ್ಯದಿಂದ ನಷ್ಟವಾಗುವುದು ಖಚಿತ. ಯಾಕೆಂರೆ ಮಿನಿಮಮ್ ಪೇಮೆಂಟ್ ಮಾಡುವುದರಿಂದ ಉಳಿದ ಮೊತ್ತ ಮುಂದಿನ ಬಿಲ್‌ನಲ್ಲಿ ಸೇರಿಸಿ ನೀಡುತ್ತಾರೆ. ಅದಕ್ಕೂ ಬಡ್ಡಿ ಹಾಕುತ್ತಾರೆ.
undefined
ಬಿಲ್ಲಿಂಗ್ ಅವಧಿ ಏನು?: ಒಂದು ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್‌ ಬಿಲ್ ಪ್ರತಿ ತಿಂಗಳ 10ನೇ ತಾರೀಕಿನಂದು ಬರುತ್ತಿದ್ದರೆ, ಹೊಸ ತಿಂಗಳ 11ನೇ ತಾರೀಕಿನಂದು ಆರಂಭವಾಗಿ, ಮುಂದಿನ ತಿಂಗಳ 10ನೇ ತಾರೀಕಿನವರೆಗೆ ಇರುತ್ತದೆ. ಈ ಅವಧಿಯಲ್ಲಿ ಮಾಡುವ ನಿಮ್ಮ ವ್ಯವಹಾರ ಬಿಲ್‌ನಲ್ಲಿ ತೋರಿಸಲಾಗುತ್ತದೆ. ಇದರಲ್ಲಿ ಶಾಪಿಂಗ್‌ನಿಂದ ಹಿಡಿದು ಕ್ಯಾಶ್ ವಿತ್‌ಡ್ರಾ, ಪೇಮೆಂಟ್ ಹಾಗೂ ಇತರ ಖರ್ಚೂ ಸೇರುತ್ತದೆ.
undefined
click me!