ಜನಸಂಖ್ಯಾ ನಿಯಂತ್ರಣ ಅಂದಾಕ್ಷಣ ನಮಗೆ ಕಾನೂನು, ನಿಯಮಗಳು ನೆನಪಾಗುತ್ತವೆ. ಆದರೆ, ಕಾಂಡೋಮ್‌ಗಳು ಈ ನಿಟ್ಟಿನಲ್ಲಿ ಸದ್ದಿಲ್ಲದೆ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಇದರ ವ್ಯಾಪಾರ ಸಾವಿರಾರು ಕೋಟಿ ತಲುಪಿದೆ. ಹಾಗಾದರೆ, ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಕಾಂಡೋಮ್ ಮಾರಾಟವಾಗುವ ದೇಶ ಯಾವುದು? ಇಲ್ಲಿದೆ ಮಾಹಿತಿ.
ವಿಶ್ವದಾದ್ಯಂತ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಇದು ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಮತ್ತು ಸಂಪನ್ಮೂಲಗಳ ಕೊರತೆಯಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಕಾಂಡೋಮ್ ಅತ್ಯಂತ ಸುಲಭ ಹಾಗೂ ಕಡಿಮೆ ಖರ್ಚಿನ ಪರಿಹಾರವಾಗಿದೆ. ಕಳೆದ ಕೆಲವು ವರ್ಷಗಳಿಂದ ಏಷ್ಯಾದ ದೇಶಗಳಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗಿದ್ದು, ಕಾಂಡೋಮ್ ಬಳಕೆ ಗಣನೀಯವಾಗಿ ಏರಿಕೆಯಾಗಿದೆ.
26
ಕಾಂಡೋಮ್ ಬಳಕೆಯಲ್ಲಿ ಚೀನಾ ಟಾಪ್
ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಏಷ್ಯಾದಲ್ಲಿ ಚೀನಾ ಅತಿ ಹೆಚ್ಚು ಕಾಂಡೋಮ್ ಬಳಸುತ್ತದೆ. ಚೀನಾದಲ್ಲಿ ಪ್ರತಿ ವರ್ಷ ಸುಮಾರು 5.8 ಬಿಲಿಯನ್ ಯೂನಿಟ್ ಕಾಂಡೋಮ್‌ಗಳು ಬಳಕೆಯಾಗುತ್ತವೆ.
36
ಕಾಂಡೋಮ್ ಬಳಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ!
ಈ ಸಂಖ್ಯೆ ಏಷ್ಯಾದ ಬೇರೆಲ್ಲಾ ದೇಶಗಳಿಗಿಂತ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಟರ್ಕಿ ಮೂರನೇ ಸ್ಥಾನದಲ್ಲಿದೆ.
ಚೀನಾದ ಜನಸಂಖ್ಯೆ ಸುಮಾರು 140 ಕೋಟಿ. ಇವರಲ್ಲಿ 60 ಕೋಟಿಗೂ ಹೆಚ್ಚು ಜನರು ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಜನಸಂಖ್ಯೆಯೇ ಕಾಂಡೋಮ್ ಬೇಡಿಕೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಇನ್ನೊಂದೆಡೆ, ಚೀನಾ ಸರ್ಕಾರ ಸುರಕ್ಷಿತ ಲೈಂಗಿಕತೆ ಮತ್ತು ಲೈಂಗಿಕ ರೋಗಗಳ ತಡೆಗಟ್ಟುವಿಕೆ ಬಗ್ಗೆ ವ್ಯಾಪಕ ಪ್ರಚಾರ ನಡೆಸುತ್ತಿದೆ. ಇದರಿಂದಾಗಿ ಕಾಂಡೋಮ್ ಬಳಕೆಯ ಬಗ್ಗೆ ಇದ್ದ ಸಾಮಾಜಿಕ ಭೀತಿಯೂ ಗಣನೀಯವಾಗಿ ಕಡಿಮೆಯಾಗಿದೆ.
56
ಬಿಲಿಯನ್ ಡಾಲರ್ ಉದ್ಯಮವಾದ ಕಾಂಡೋಮ್
2023ರ ವೇಳೆಗೆ ಚೀನಾದ ಕಾಂಡೋಮ್ ಮಾರುಕಟ್ಟೆಯ ಮೌಲ್ಯ ಸುಮಾರು 3.69 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಿತ್ತು. 2030ರ ವೇಳೆಗೆ ಇದು 7.24 ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ. ಅಂದರೆ, ಮುಂಬರುವ ವರ್ಷಗಳಲ್ಲಿ ಈ ಮಾರುಕಟ್ಟೆ ದ್ವಿಗುಣಗೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಈ ಮಾರುಕಟ್ಟೆ ವಾರ್ಷಿಕವಾಗಿ ಸರಾಸರಿ 10% ಬೆಳವಣಿಗೆ ದಾಖಲಿಸುತ್ತಿದೆ. ಇದರಲ್ಲಿ ಲ್ಯಾಟೆಕ್ಸ್ ಕಾಂಡೋಮ್‌ಗಳ ಪಾಲು 85% ಕ್ಕಿಂತ ಹೆಚ್ಚಿದೆ.
66
ಭಾರತ ಮತ್ತು ಇತರ ಏಷ್ಯಾ ದೇಶಗಳ ಸ್ಥಿತಿ
ಏಷ್ಯಾದ ಎರಡನೇ ಅತಿದೊಡ್ಡ ಕಾಂಡೋಮ್ ಮಾರುಕಟ್ಟೆ ಭಾರತವೇ ಆಗಿದೆ. ಆದರೆ, ಇಲ್ಲಿ ಇನ್ನೂ ಸಾಮಾಜಿಕವಾಗಿ ಈ ಬಗ್ಗೆ ಜಾಗೃತಿ ಮೂಡಿಸುವುದು ಒಂದು ದೊಡ್ಡ ಸವಾಲಾಗಿದೆ. ಸರ್ಕಾರದ ಆರೋಗ್ಯ ಯೋಜನೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳಿಂದಾಗಿ ಬಳಕೆ ನಿಧಾನವಾಗಿ ಹೆಚ್ಚುತ್ತಿದೆ. ಟರ್ಕಿ, ಜಪಾನ್ ಮತ್ತು ದಕ್ಷಿಣ ಏಷ್ಯಾದ ದೇಶಗಳ ನಗರ ಪ್ರದೇಶಗಳಲ್ಲಿಯೂ ಕಾಂಡೋಮ್‌ಗಳಿಗೆ ಬೇಡಿಕೆ ವೇಗವಾಗಿ ಬೆಳೆಯುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.