ಭಾರತದಲ್ಲಿ ₹5000, ₹10000 ನೋಟುಗಳು ಚಲಾವಣೆಯಲ್ಲಿದ್ದವು: ಇಲ್ಲಿವೆ ನೋಡಿ ಹಳೆಯ ನೋಟುಗಳು!

First Published | Nov 8, 2024, 5:02 PM IST

ಭಾರತದಲ್ಲಿ ಪ್ರಸ್ತುತ 500 ರೂಪಾಯಿ ನೋಟು ಅತಿ ಹೆಚ್ಚಿನ ಮೌಲ್ಯದ ನೋಟು ಆಗಿದೆ. ಆದರೆ ನಮ್ಮ ದೇಶದಲ್ಲಿ ರಿಸರ್ವ್ ಬ್ಯಾಂಕ್‌ನಿಂದ ₹5000 ಮತ್ತು ₹10,000 ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದಿತ್ತು. ಈ ನೋಟುಗಳು ಚಲಾವಣೆಯಲ್ಲಿದ್ದ ಅವಧಿ ಯಾವುದೆಂದು ನಿಮಗೆ ತಿಳಿದಿದೆಯೇ?

ಭಾರತೀಯ ಕರೆನ್ಸಿ

ಭಾರತದ ₹10,000 ನೋಟಿನ ಇತಿಹಾಸವು ದೇಶವು ಸ್ವಾತಂತ್ರ್ಯ ಪೂರ್ವದಿಂದಲೂ ಪ್ರಾರಂಭವಾಗುತ್ತದೆ. 1938 ರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಮೊದಲ ₹10,000 ನೋಟನ್ನು ಬಿಡುಗಡೆ ಮಾಡಿತ್ತು. ಆದರೆ, ಈಗಿನವರು 2016ರ ನೋಟು ಅಮಾನ್ಯೀಕರಣದ ನಂತರ ಪರಿಚಯಿಸಲಾದ ₹2,000 ನೋಟು (ಈಗ ಚಲಾವಣೆಯಿಂದ ಹಿಂಪಡೆಯಲಾಗಿದೆ) ಭಾರತದ ಅತಿ ಹೆಚ್ಚಿನ ಮೌಲ್ಯದ ನೋಟು ಎಂದು ನೆನಪಿಸಿಕೊಳ್ಳುತ್ತಾರೆ.

ಆದರೆ, ₹5,000 ಮತ್ತು ₹10,000 ನೋಟುಗಳು ಭಾರತದ ಹಣಕಾಸು ವ್ಯವಸ್ಥೆಯ ಭಾಗವಾಗಿದ್ದವು. ದೇಶದ ಆರ್ಥಿಕ ಇತಿಹಾಸದಲ್ಲಿ ಈ ನೋಟುಗಳು ಕೂಡ ಚಲಾವಣೆಯಲ್ಲಿ ಇದ್ದವು ಎಂಬುದು ಕೇಳಿದರೆ ನಮಗೆ ಆಶ್ಚರ್ಯವಾಗುತ್ತದೆ.

₹10,000 ನೋಟು: ಸಂಕ್ಷಿಪ್ತ ಇತಿಹಾಸ

ಭಾರತದ ₹10,000 ನೋಟು ಸ್ವಾತಂತ್ರ್ಯಪೂರ್ವದಲ್ಲಿ ಜಾರಿಯಲ್ಲಿತ್ತು. 1938 ರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್  (RBI) ಮೊದಲ ₹10,000 ನೋಟನ್ನು ಬಿಡುಗಡೆ ಮಾಡಿತು. ಸಾಮಾನ್ಯ ನಾಗರಿಕರು ಅಂತಹ ದೊಡ್ಡ ಮೊತ್ತವನ್ನು ವಿರಳವಾಗಿ ಬಳಸುತ್ತಿದ್ದರಿಂದ, ಇದನ್ನು ಪ್ರಾಥಮಿಕವಾಗಿ ವ್ಯವಹಾರಗಳು ಮತ್ತು ವ್ಯಾಪಾರಿಗಳು ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಬಳಸುತ್ತಿದ್ದರು.

Latest Videos


ಆದರೆ ಜನವರಿ 1946 ರಲ್ಲಿ, ಬ್ರಿಟಿಷ್ ಸರ್ಕಾರವು ₹10,000 ನೋಟನ್ನು ಅಮಾನ್ಯಗೊಳಿಸಲು ನಿರ್ಧರಿಸಿತು. ಆದಾಗ್ಯೂ, ₹10,000 ನೋಟನ್ನು 1954 ರಲ್ಲಿ ಮರು ಪರಿಚಯಿಸಲಾಯಿತು ಮತ್ತು ₹5,000 ನೋಟಿನಂತಹ ದೊಡ್ಡ ಮೌಲ್ಯದ ನೋಟುಗಳ ಚಲಾವಣೆ ಮುಂದುವರೆಯಿತು.

ಏಕೆ ಅಮಾನ್ಯೀಕರಣಗೊಂಡಿತು?

₹10,000 ನೋಟಿನ ನಂತರ ಭಾರತ ಸರ್ಕಾರವು ₹5,000 ನೋಟನ್ನು ಕೂಡ ಅಮಾನ್ಯಗೊಳಿಸಲು ನಿರ್ಧರಿಸಿದಾಗ 1978 ರಲ್ಲಿ ಮತ್ತೊಂದು ತಿರುವು ಪಡೆಯಿತು. ಆ ಸಮಯದಲ್ಲಿ, ಈ ಹೆಚ್ಚಿನ ಮೌಲ್ಯದ ನೋಟುಗಳನ್ನು ಸಾರ್ವಜನಿಕರು ವ್ಯಾಪಕವಾಗಿ ಬಳಸುತ್ತಿರಲಿಲ್ಲ. ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ನೇತೃತ್ವದ ಈ ಕ್ರಮವು ಹಣಕಾಸಿನ ಅಕ್ರಮಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿತ್ತು.

ಭಾರತೀಯ ಕರೆನ್ಸಿ

ಕೆಲವು ವರ್ಷಗಳ ಹಿಂದೆ ₹5,000 ಮತ್ತು ₹10,000 ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಚರ್ಚೆಯನ್ನು ಮಡಲಾಯಿತು. ಆದರೆ, RBI ಮಾಜಿ ಗವರ್ನರ್ ರಘುರಾಮ್ ರಾಜನ್ ಈ ಹೆಚ್ಚಿನ ಮೌಲ್ಯದ ನೋಟುಗಳನ್ನು ಹಿಂಪಡೆಯಬಹುದು ಎಂದು ಸೂಚಿಸಿದರು. ಇದರ ನಂತರ ಪುನಃ 2016ರ ನೋಟು ಅಮಾನ್ಯೀಕರಣದ ಸಮಯದಲ್ಲಿ, ಹಳೆಯ ₹500 ಮತ್ತು ₹1000 ನೋಟುಗಳನ್ನು ಹಿಂಪಡೆದಾಗ, ಸರ್ಕಾರವು ₹2,000 ನೋಟನ್ನು ಪರಿಚಯಿಸಿತು.

ಭಾರತೀಯ ರಿಸರ್ವ್ ಬ್ಯಾಂಕ್

ಈ ಹಿಂದಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಪ್ರಕಾರ, ನೋಟು ಅಮಾನ್ಯೀಕರಣದಿಂದ ಉಂಟಾದ ಹಣದ ಕೊರತೆಯನ್ನು ಕಡಿಮೆ ಮಾಡಲು ₹2,000 ನೋಟನ್ನು ಆಯ್ಕೆ ಮಾಡಿದ್ದರು. ಆದಾಗ್ಯೂ, ಮೇ 19, 2023 ರಂದು, RBI ₹2,000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿತು. ಈಗ ದೇಶದಲ್ಲಿ 500 ರೂ. ಮುಖಬೆಲೆಯ ನೋಟು ಅತ್ಯಂತ ಹೆಚ್ಚು ಮೌಲ್ಯದ ನೋಟು ಆಗಿ ದೇಶದಲ್ಲಿ ಚಲಾವಣೆಯಲ್ಲಿದೆ. ಇದರಿಂದ ಕಪ್ಪು ಹಣ ಸಂಗ್ರಹ ಹಾಗೂ ಕಪ್ಪು ಹಣ ಸಾಗಣೆ ಸುಲಭವಾಗು ತಡೆಗಟ್ಟಬಹುದು.

ಒಟ್ಟಾರೆ ₹5,000 ಮತ್ತು ₹10,000 ನೋಟುಗಳು ಈಗ ಭಾರತದ ಆರ್ಥಿಕ ವ್ಯವಸ್ಥೆಯ ಭಾಗವಾಗಿದ್ದವು ಎಂಬುದು ಇತಿಹಾಸವಾಗಿದೆ.

click me!