ಅಂದು ದುಶ್ಮನ್, ಇಂದು ದೋಸ್ತಿ : 5 ವರ್ಷಗಳ ಬಳಿಕ ಚೀನಾಕ್ಕೆ ಮಣೆ ಹಾಕಲು ಭಾರತದ ಚಿಂತನೆ?

Published : Jan 09, 2026, 11:18 AM IST

ಗಲ್ವಾನ್ ಸಂಘರ್ಷದ ನಂತರ ಸರ್ಕಾರಿ ಕಾಂಟ್ರ್ಯಾಕ್ಟ್‌ಗಳಿಂದ ನಿಷೇಧಕ್ಕೊಳಗಾಗಿದ್ದ ಚೀನಾ ಕಂಪನಿಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರ 5 ವರ್ಷಗಳ ಬಳಿಕ ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧವನ್ನು ಪುನಃಸ್ಥಾಪಿಸುವ ಸಾಧ್ಯತೆಯನ್ನು ಸೂಚಿಸುತ್ತಿದೆ.

PREV
15
ಗಲ್ವಾನ್‌ ಸಂಘರ್ಷ ಬಳಿಕ ಭಾರತದಿಂದ ನಿರ್ಬಂಧ

ನವದೆಹಲಿ: ಮಾನಸ ಸರೋವರ ಯಾತ್ರೆ ಪುನರಾರಂಭ, ನೇರ ವಿಮಾನ ಸೇವೆ ಮತ್ತೆ ಶುರುವಾದ ಬೆನ್ನಲ್ಲೇ ಇದೀಗ ಭಾರತ-ಚೀನಾ ನಡುವಿನ ವಾಣಿಜ್ಯ ಸಂಬಂಧವೂ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಗೋಚರಿಸುತ್ತಿದೆ.

25
ಐದು ವರ್ಷಗಳ ಹಿಂದಿನ ನಿರ್ಬಂಧ

ಭಾರತದ ಸರ್ಕಾರಿ ಕಾಂಟ್ರ್ಯಾಕ್ಟ್‌ಗಳಿಗೆ ಬಿಡ್‌ ಮಾಡುವ ಸಂಬಂಧ ಚೀನಾ ಕಂಪನಿಗಳ ಮೇಲೆ ಹಾಕಲಾಗಿದ್ದ ಐದು ವರ್ಷಗಳ ಹಿಂದಿನ ನಿರ್ಬಂಧವನ್ನು ಇದೀಗ ಕೇಂದ್ರ ಸರ್ಕಾರ ರದ್ದುಪಡಿಸವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

35
ವಾಣಿಜ್ಯ ಸಂಬಂಧ ಪುನಸ್ಥಾಪನೆ?

ಈ ಮೂಲಕ ಐದು ವರ್ಷಗಳ ಹಿಂದಿನ ಗಲ್ವಾನ್‌ ಸಂಘರ್ಷ ಬಳಿಕ ಹದಗೆಟ್ಟಿದ್ದ ವಾಣಿಜ್ಯ ಸಂಬಂಧ ಪುನಸ್ಥಾಪನೆಗೆ ಮುಂದಾಗಿದೆ. 2020ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಭವಿಸಿದ್ದ ಗಲ್ವಾನ್‌ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವಿನ ವ್ಯಾಪಾರ-ವಹಿವಟು ಹದಗೆಟ್ಟಿತ್ತು. ಚೀನಾದ ಕಂಪನಿಗಳ ಮೇಲೆ ಭಾರತ ಹಲವು ನಿರ್ಬಂಧಗಳನ್ನು ಹೇರಿತ್ತು.

45
ಚೀನಾ ಕಂಪನಿ

ಭಾರತದಲ್ಲಿ 67.45 ಲಕ್ಷ ಕೋಟಿ ರು. ವೆಚ್ಚದ ಸರ್ಕಾರಿ ಟೆಂಡರ್‌ಗಳಿಂದ ಚೀನಾ ಕಂಪನಿಗಳನ್ನು ದೂರವಿಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಇತ್ತೀಚೆಗಷ್ಟೇ 1,900 ಕೋಟಿ ಮೌಲ್ಯದ ರೈಲು ಯೋಜನೆಯಿಂದ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ಕಂಪನಿಯನ್ನು ಹೊರಗಿಡಲಾಗಿತ್ತು.

ಇದನ್ನೂ ಓದಿ: 250 ಕೋಟಿ ಮೌಲ್ಯದ 53.5 ಎಕರೆ ಭೂಮಿ ಅಕ್ರಮ ಮಾರಾಟ; ಇನ್ಪೋಸಿಸ್‌ನಿಂದ ಮೊದಲ ಪ್ರತಿಕ್ರಿಯೆ

55
ನಿರ್ಬಂಧ ತೆರವಿನ ಕುರಿತು ಚಿಂತನೆ

ಆದರೆ ಚೀನಾ ಕಂಪನಿಗಳ ಮೇಲಿನ ನಿರ್ಬಂಧದಿಂದಾಗಿ ವಿದ್ಯುತ್‌ ಯೋಜನೆಗಳಿಗೆ ಅಗತ್ಯವಿದ್ದ ಉಪಕರಣಗಳನ್ನು ಚೀನಾದಿಂದ ತರಿಸಲೂ ಸಮಸ್ಯೆಯಾಗಿತ್ತು. ಆದರೆ ಇತ್ತೀಚೆಗೆ ಅಮೆರಿಕದ ಬದಲಾಗಿರುವ ನಿಲುವಿನ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯವು ಚೀನಾ ಕಂಪನಿಗಳ ಮೇಲಿನ ನಿರ್ಬಂಧ ತೆರವಿನ ಕುರಿತು ಚಿಂತನೆ ನಡೆಸಿದೆ. ಈ ಕುರಿತ ಅಂತಿಮ ನಿರ್ಧಾರ ಪ್ರಧಾನಿ ತೆಗೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: Infosys: 250 ಕೋಟಿ ಮೌಲ್ಯದ ಭೂಮಿ ಅಕ್ರಮ ಮಾರಾಟ; ಇನ್ಫೋಸಿಸ್‌ಗೆ ಶಾಕ್ ನೀಡಿದ ರಾಜ್ಯ ಸರ್ಕಾರ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories