ಬಿಎಸ್‌ಎನ್‌ಎಲ್ ಬಜೆಟ್ ಫ್ರೆಂಡ್ಲಿ ರೀಚಾರ್ಜ್ ಪ್ಲಾನ್, ಕೇವಲ 147 ರೂ.ನಿಂದ ಆರಂಭ!

First Published | Dec 20, 2024, 11:08 PM IST

ಬಿಎಸ್‌ಎನ್‌ಎಲ್ ಭಾರಿ ಸಂಖ್ಯೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಇದಕ್ಕೆ ಕಾರಣ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್. ಕೇವಲ 153 ರೂಪಾಯಿಯಿಂದ ಬಿಎಸ್‌ಎನ್‌ಎಲ್ ರೀಚಾರ್ಜ್ ಪ್ಲಾನ್ ಆರಂಭಗೊಳ್ಳುತ್ತಿದೆ. ಹೀಗೆ ಡೇಟಾ, ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್ ನೀಡಬಲ್ಲ ಬಜೆಟ್ ಫ್ರೆಂಡ್ಲಿ ಪ್ಲಾನ್  ಇಲ್ಲಿದೆ.

ಜಿಯೋ,ಎರ್ಟೆಲ್, ವೋಡಾಫೋನ್ ಐಡಿಯಾ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳ ರಿಚಾರ್ಜ್ ಮೊತ್ತದಿಂದ ಹಲವರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಿದ್ದಾರೆ. ಇತ್ತ  ಬಿಎಸ್‌ಎನ್‌ಎಲ್‌ ಕೈಗೆಟುಕುವ ದರದಲ್ಲಿ ಹಲವು ಆಫರ್ ನೀಡುತ್ತಿದೆ. ಪ್ರತಿ ದಿನ ಉಚಿತ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್,  ಎಸ್‌ಎಂಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರಿ ಸ್ವಾಮ್ಯದ ಟೆಲಿಕಾಂ ನೀಡುತ್ತಿದೆ.
 

ಕಡಿಮೆ ಬೆಲೆ, ಒಂದು ತಿಂಗಳ ವ್ಯಾಲಿಟಿಡಿಯನ್ನು ಈ ಪ್ಲಾನ್ ನೀಡುತ್ತದೆ. ಈ ಪೈಕಿ 153 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿದರೆ ಗ್ರಾಹಕರಿಗೆ 26 ದಿನ ವ್ಯಾಲಿಟಿಡಿ ಸಿಗಲಿದೆ. ಇನ್ನು ಪ್ರತಿ ದಿನ 1 ಜಿಬಿಯಿಂತೆ ಒಟ್ಟು 26 ಜಿಬಿ ಡೇಟಾ ಸಿಗಲಿದೆ.  ಅನ್‌ಲಿಮಿಟೆಡ್ ಕಾಲ್ ಯಾವುದೇ ನೆಟ್‌ವರ್ಕ್‌ಗೆ ಸಿಗಲಿದೆ. ಇಷ್ಟೇ ಅಲ್ಲ ಪ್ರತಿ ದಿನ 100 ಎಸ್‌ಎಸ್ಎಂಸ್ ಉಚಿತವಾಗಿ ಸಿಗಲಿದೆ.
 

Tap to resize

ಕೇವಲ 147 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ 30 ದಿನ ವ್ಯಾಲಿಟಿಡಿ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಸಿಗಲಿದೆ. 30 ದಿನದಲ್ಲಿ ಒಟ್ಟು 10 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಇನ್ನು 151 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ನಿಮಗೆ 40 ಜಿಬಿ ಡೇಟಾ ಮಾತ್ರ ಸಿಗಲಿದೆ. ಕೇವಲ ಡೇಟಾ ಅವಶ್ಯಕತೆ ಇದ್ದರೆ ಈ ಪ್ಲಾನ್ ರೀಚಾರ್ಜ್ ಮಾಡಿಸಿಕೊಳ್ಳಬಹುದು.

199ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ ಪ್ರತಿ ದಿನ ಅನ್‌ಲಿಮಿಟೆಡ್ ಉಚಿತ ಕಾಲ್ ಸೌಲಭ್ಯ ಲಭ್ಯವಾಗಲಿದೆ. ಜೊತೆಗೆ ಪ್ರತಿ ದಿನ ನಿಮಗೆ 2 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ದಿನದ ಕೋಟಾ ಮುಗಿದ ಬಳಿಕ ಇಂಟರ್ನೆಟ್ ಸ್ಪೀಡ್ 40ಕೆಬಿಪಿಎಸ್ ವೇಗಕ್ಕೆ ಕುಸಿಯಲಿದೆ. ಪ್ರತಿ ದಿನ 100 ಎಸ್‌ಎಂಎಸ್ ಸೌಲಭ್ಯವೂ ಸಿಗಲಿದೆ.
 

ಹೆಚ್ಚು ದಿನ ವ್ಯಾಲಿಟಿಡಿ ಬಯಸುವ ಗ್ರಾಹಕರಿಗೆ ಮತ್ತೊಂದು ಆಫರ್  ಬಿಎಸ್‌ಎನ್‌ಎಲ್‌‌ನಲ್ಲಿ ಲಭ್ಯವಿದೆ. ಕೇವಲ 197 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಬರೋಬ್ಬರಿ 70 ದಿನ ವ್ಯಾಲಿಟಿಡಿ ಸಿಗಲಿದೆ. ಇಷ್ಟು ಮಾತ್ರ ಅಲ್ಲ, ಪ್ರತಿ ದಿನ 2 ಜಿಬಿ ಡೇಟಾ ಆರಂಭಿಕ 15 ದಿನಗಳ ಕಾಲ ಉಚಿತವಾಗಿ ಸಿಗಲಿದೆ. ಇನ್ನು ಆರಂಭಿಕ 15 ದಿನ ಅನ್‌ಲಿಮಿಟೆಡ್ ಕಾಲ್ ಸೌಲಭ್ಯವೂ ಸಿಗಲಿದೆ. ಮೊದಲ 15 ದಿನ 100 ಎಸ್ಎಂಎಸ್ ಸೌಲಭ್ಯವೂ ಸಿಗಲಿದೆ.
 

ಅತೀ ಕಡಿಮೆ ಬೆಲೆಯಲ್ಲಿ  ಬಿಎಸ್‌ಎನ್‌ಎಲ್‌ ರೀಚಾರ್ಜ್ ಪ್ಲಾನ್ ನೀಡುತ್ತಿರುವ ಕಾರಣ ಗ್ರಾಹಕರು ಇದೀಗ  ಬಿಎಸ್‌ಎನ್‌ಎಲ್‌ನತ್ತ ವಾಲುತ್ತಿದ್ದಾರೆ. 2024ರ ಆಗಸ್ಟ್‌ನಿಂದ ಅಕ್ಟೋಬರ್ ತಿಂಗಳಲ್ಲಿ  ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ಗೆ 3.6 ಮಿಲಿಯನ್ ಗ್ರಾಹಕರು ಪೋರ್ಟ್ ಆಗಿದ್ದಾರೆ. ಇದೀಗ 2025ರ ಜನವರಿಯಿಂದ  ಬಿಎಸ್‌ಎನ್‌ಎಲ್‌ 5ಜಿ ಸೇವೆ ನೀಡಲಿದೆ.
 

Latest Videos

click me!