ಹಾಳಾದ ನೋಟುಗಳನ್ನು ಬದಲಾಯಿಸಿ
ನಾವು ಯಾರ ಜೊತೆಗಾದರೂ ವ್ಯವಹಾರ ಮಾಡುವಾಗ ಹಾಳಾದ ನೋಟುಗಳು ಸಿಗುವುದು ಸಾಮಾನ್ಯ. ಹಾಳಾದ ರೂಪಾಯಿ ನೋಟುಗಳನ್ನು ನಿಭಾಯಿಸುವುದು ಕಿರಿಕಿರಿ ಉಂಟುಮಾಡಬಹುದು. ಇದರಿಂದ ಹಣಕಾಸಿನ ನಷ್ಟವಾಗುತ್ತದೆ. ಆದರೆ, RBIಯ ನಿಯಮಗಳ ಪ್ರಕಾರ ಹಾಳಾದ ನೋಟುಗಳನ್ನು ಬ್ಯಾಂಕುಗಳು ಕಡ್ಡಾಯವಾಗಿ ಬದಲಾವಣೆ ಮಾಡಿಕೊಡಬೇಕು. ಹಣ ಕಳೆದುಕೊಳ್ಳದೆ ಹಳೆಯ ಅಥವಾ ಬೇರೆ ನೋಟುಗಳನ್ನು ಬದಲಾಯಿಸುವ ಬಗ್ಗೆ ಇಲ್ಲಿದೆ ಮಾಹಿತಿ.
ಹಾಳಾದ ನೋಟು ಬದಲಾವಣೆ
RBI ನಿಯಮಗಳ ಪ್ರಕಾರ, ಹಾಳಾದ ನೋಟುಗಳನ್ನು ಬ್ಯಾಂಕುಗಳು ಬದಲಾಯಿಸಬೇಕು. ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ನೋಟುಗಳನ್ನು ಬದಲಾಯಿಸಬಹುದು. ಬ್ಯಾಂಕ್ ಈ ಸೇವೆಯನ್ನು ನಿರಾಕರಿಸುವಂತಿಲ್ಲ. ನೀವು RBI ಕಚೇರಿಗೂ ಹೋಗಬಹುದು. ಆದರೆ, ಕೆಲವು ಮಿತಿಗಳಿವೆ. ಒಬ್ಬ ವ್ಯಕ್ತಿ ಒಂದೇ ಬಾರಿಗೆ 20 ನೋಟುಗಳನ್ನು ₹5,000 ಮೌಲ್ಯದವರೆಗೆ ಬದಲಾಯಿಸಬಹುದು.
ಹಳೆ ನೋಟುಗಳ ಬದಲಾವಣೆ
ನೀವು ಹೆಚ್ಚು ನೋಟುಗಳನ್ನು ಕೊಟ್ಟರೆ ಅಥವಾ ಮಿತಿ ಮೀರಿದರೆ, ಬ್ಯಾಂಕ್ ನಿಮ್ಮ ಕೋರಿಕೆಯನ್ನು ತಿರಸ್ಕರಿಸಬಹುದು. ATMಗಳಲ್ಲಿ ಹಾಳಾದ ನೋಟುಗಳು ಸಿಗುವುದು ಸಾಮಾನ್ಯ. ATMನಲ್ಲಿ ಹರಿದು ನೋಟು ಸಿಕ್ಕಿದ ತಕ್ಷಣ ಬ್ಯಾಂಕ್‌ಗೆ ಹೋಗಿ ಲಿಖಿತ ದೂರು ನೀಡಬೇಕು.