25 ವರ್ಷದೊಳಗಿನವರಿಗೆ ಉದ್ಯಮಿ ನಿಖಿಲ್ ಕಾಮತ್ ಮಹತ್ವದ ಸಲಹೆ, ಇದು ಹೂಡಿಕೆ, ದೊಡ್ಡ ಹಣದ ಬಗ್ಗೆ ಅಲ್ಲ. ಆದರೆ ಈ ಮಹತ್ವದ ಸಲಹೆ ಪಾಲಿಸಿದರೆ ಉದ್ಯಮದಲ್ಲಿ ಯಶಸ್ಸು ಮಾತ್ರವಲ್ಲ ಹಣ ಹೊಳೆ ಹರಿಯಲಿದೆ ಎಂದಿದ್ದಾರೆ.
ಭಾರತದ ಯುವ ಉದ್ಯಮಿಗಳ ಪೈಕಿ ನಿಖಿಲ್ ಕಾಮತ್ ಮುಂಚೂಣಿಯಲ್ಲಿದ್ದಾರೆ. ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಇದೀಗ 25 ವರ್ಷದೊಳಗಿನವರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಹೌದು, 25 ವರ್ಷದೊಳಗಿನ ಸ್ಟಾರ್ಟ್ಅಪ್ ಸಂಸ್ಥಾಪಕರು, ಉದ್ಯಮಿಗಳಿಗೆ ನಿಖಿಲ್ ಕಾಮತ್ ಸೂಚನೆ ನೀಡಿದ್ದಾರೆ. ಅತೀ ಚಿಕ್ಕ ವಯಸ್ಸಿನ ಯಶಸ್ವಿ ಉದ್ಯಮ ನಡೆಸುವುದು ಮಾತ್ರವಲ್ಲ, ಉತ್ತಮ ಆದಾಯ ಪಡೆಯುವ ಕುರಿತು ಸಲಹೆ ನೀಡಿದ್ದಾರೆ.
25
ಹಣಕಾಸು, ಫಂಡಿಂಗ್ ಸಲಹೆ ಅಲ್ಲ
ಸಾಮಾನ್ಯವಾಗಿ ಸ್ಟಾರ್ಟ್ಅಪ್ ಸಂಸ್ಥಾಪಕರು ಎದುರಿಸುವ ಸಮಸ್ಯೆ ಫಂಡಿಂಗ್. ಆರ್ಥಿಕ ಸಂಪನ್ಮೂಲ ಕೊರತೆ. ಆದರೆ ಯುವ ಉದ್ಯಮಿಗಳಿಗೆ ಹಣ ಸಮಸ್ಯೆಗಿಂತ ಯಾವ ವಿಚಾರವನ್ನು ಪ್ರಮುಖವಾಗಿ ಗಮನಿಸಬೇಕು ಎಂದು ಸೂಚಿಸಿದ್ದಾರೆ. ಹಣಕಾಸು, ಫಂಡಿಂಗ್ ಕುರಿತು ಚಿಂತಿಸುವ ಬದಲು ಸಾಫ್ಟ್ ಸ್ಕಿಲ್ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದಿದ್ದಾರೆ. ಇದಕ್ಕಾಗಿ ಕೆಲ ಸರಳ ಟಿಪ್ಸ್ ನೀಡಿದ್ದಾರೆ.
35
ಸರಳವಾಗಿ ಜನರಿಗೆ ತಿಳಿಸಬೇಕು
ಯುವ ಸ್ಟಾರ್ಟ್ಅಪ್ ಉದ್ಯಮಿಗಳು ಉತ್ಪನ್ನಗಳನ್ನು( Product) ಅತ್ಯಂತ ಕಾಳಜಿ ವಹಿಸಿ ಮಾಡುತ್ತಾರೆ. ಎಲ್ಲಾ ಗಮನಹರಿಸುತ್ತಾರೆ. ಆದರೆ ನಿಮ್ಮ ಉತ್ಪನ್ನಗಳನ್ನು ಜನರಿಗೆ ಅರ್ಥವಾಗದಿದ್ದರೆ, ನೀವು ಉತ್ಪನ್ನವನ್ನು ಸರಳವಾಗಿ ಜನರಿಗೆ ತಿಳಿಸಲು ಸಾಧ್ಯವಾಗದಿದ್ದರೆ ಎಲ್ಲವೂ ವ್ಯರ್ಥವಾಗಲಿದೆ. ನಿಮ್ಮ ಉದ್ಯಮವನ್ನು, ಉತ್ಪನ್ನವನ್ನು ಅತ್ಯಂತ ಆಕರ್ಷಕವಾಗಿ, ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಹೇಳುವಂತೆ ಕಲಿಯಬೇಕು. ಇದು ಉದ್ಯಮಕ್ಕೆ ಮಾತ್ರವಲ್ಲ, ಬದುಕಿಗೂ ಮುಖ್ಯ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ಉದ್ಯಮ ಸಂಸ್ಥಾಪಕರಿಗೆ ಅತೀ ಮುಖ್ಯವಾಗಿ ಸಂವಹನ ಕಲೆ ಇರಬೇಕು. ಭಾಷಣ ಮಾಡಲು ಗೊತ್ತಿರಬೇಕು, ನಿಮ್ಮ ಉದ್ಯಮ, ಉತ್ಪನ್ನಗಳ ಕುರಿತು ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಹೆಮ್ಮೆಯಿಂದ ಯಾವುದೇ ಅಡೆ ತಡೆ ಇಲ್ಲದೆ ಸ್ಪಷ್ಟವಾಗಿ ಹೇಳುವಂತಿರಬೇಕು. ಉದ್ಯಮದಲ್ಲಿ ಸಂವಹನ ಕೂಡ ಅಷ್ಟೇ ಮುಖ್ಯವಾಗುತ್ತದೆ. ನಾನು ಉತ್ತಮ ಭಾಷಣಕಾರ, ಸಂವಹನಕಾರನಾಗಿರಲಿಲ್ಲ. ಬಳಿಕ ತರಬೇತಿ ಪಡೆದಿದ್ದೆ ಎಂದಿದ್ದಾರೆ.
55
ಟೀಕೆಗಳನ್ನು ಎದುರಿಸಲು ಕಲಿಯಿರಿ
ಉದ್ಯಮ ಕ್ಷೇತ್ರದಲ್ಲಿ ಪ್ರಶಂಸೆಗಳಿಂದ ಟೀಕೆಗಳೇ ಹೆಚ್ಚು ಕೇಳುತ್ತದೆ. ಟೀಕೆಗಳನ್ನು ಎದುರಿಸಲು ಕಲಿಯಬೇಕು. ತಾಳ್ಮೆ ಕಳೆದುಕೊಳ್ಳದೆ, ಎಲ್ಲವನ್ನೂ ಎದುರಿಸಬೇಕು. ಈ ವಿಚಾರದಲ್ಲ ಯುವ ಸ್ಟಾರ್ಟ್ಅಪ್ ಉದ್ಯಮಿಗಳು ವಯಸ್ಸಿಗಿಂತ ಹೆಚ್ಚಿನ ಪ್ರಭುದ್ಧತೆ ತೋರಬೇಕು ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ಟೀಕೆಗಳನ್ನು ಎದುರಿಸಲು ಕಲಿಯಿರಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.