ಏರ್‌ಟೆಲ್‌ನಿಂದ ವರ್ಷಪೂರ್ತಿ ನೆಮ್ಮದಿ ನೀಡುವ ಎರಡು ಹೊಸ ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್‌

Published : Dec 01, 2025, 08:57 AM IST

ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಎರಡು ಹೊಸ ಬಜೆಟ್ ಸ್ನೇಹಿ ವಾರ್ಷಿಕ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಸೆಕೆಂಡರಿ ಸಿಮ್ ಅನ್ನು ವರ್ಷಪೂರ್ತಿ ಸಕ್ರಿಯವಾಗಿಡಲು ಬಯಸುವವರಿಗೆ ಉತ್ತಮವಾಗಿದ್ದು,  ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ನೀಡುತ್ತವೆ.

PREV
16
ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್

ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಫರ್ ನೀಡಿದೆ. ಸೆಕೆಂಡರಿ ಸಿಮ್ ಆಕ್ಟಿವ್ ಆಗಿಟ್ಟುಕೊಳ್ಳಲು ಈ ಪ್ಲಾನ್ ಜೇಬಿಗೆ ಹಿತಕರವಾಗಿಲಿದೆ. ಹಲವರಿಗೆ ಸೆಕೆಂಡರಿ ಸಿಮ್ ಆಕ್ಟಿವ್ ಮಾಡಿಟ್ಟುಕೊಳ್ಳಲು ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ದೊಡ್ಡ ಹೊರೆಯಾಗಿದೆ. ಈ ಸಮಸ್ಯೆಯನ್ನು ಕೊನೆಗೊಳಿಸಲು ಏರ್‌ಟೆಲ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಕೈಗೆಟುಕುವ ಪ್ಲಾನ್‌ಗಳನ್ನು ನೀಡುತ್ತಿದೆ.

26
TRAI ನಿಯಮ

ಇತ್ತೀಚೆಗೆ TRAI ನಿಯಮಗಳ ಪ್ರಕಾರ, ಏರ್‌ಟೆಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಯೋಜನೆಗಳನ್ನು ನೀಡಲು ಸೂಚಿಸಲಾಗಿದೆ. ಅದರಂತೆ ಏರ್‌ಟೆಲ್ ಎರಡು ಪ್ರಮುಖ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಯಾರಿಗೆ ಈ ಪ್ಲಾನ್ ಲಾಭ ಅಂತ ನೋಡೋದಾದ್ರೆ

* ಇನ್‌ಕಮಿಂಗ್ ಮತ್ತು ಔಟ್ ಗೋಯಿಂಗ್ ಕಾಲ್‌ಗಳಿಗೆ ಮಾತ್ರ ಸಿಮ್ ಬಳಸುವ ಗ್ರಾಹಕರಿಕೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ

* ಹೆಚ್ಚು ಡೇಟಾ ಬಳಸದ ಗ್ರಾಹಕರು

* ಒಮ್ಮೆ ರೀಚಾರ್ಜ್ ಮಾಡಿಸಿದ್ರೆ ಒಂದು ವರ್ಷ ಚಿಂತೆ ಇರಲ್ಲ

36
Airtel Rs.1849 Recharge Plan

ಏರ್‌ಟೆಲ್ ರೂ 1849 ರೀಚಾರ್ಜ್ ಪ್ಲಾನ್. ಇದು ಅತ್ಯಂತ ಕಡಿಮೆ ಬೆಲೆಯ ವರ್ಷದ ಪ್ಲಾನ್ ಆಗಿದೆ. ಈ ಪ್ಲಾನ್ ಯಾವೆಲ್ಲಾ ಪ್ರಯೋಜನಗಳನ್ನು ಹೊಂದಿದೆ ಎಂಬುದರ ಮಾಹಿತಿ ಇಲ್ಲಿದೆ

ವ್ಯಾಲಿಡಿಟಿ: 365 ದಿನ (1 ವರ್ಷ)

  • ಕರೆ: ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟಿಟೆಡ್ ಕಾಲ್ ಮಾಡಬಹುದು. ರೋಮಿಂಗ್ ಶುಲ್ಕಗಳಿಲ್ಲ.
  • SMS: ಒಟ್ಟು 3,600 ಉಚಿತ SMS.
  • ಹೆಚ್ಚುವರಿ ಆಫರ್: ಉಚಿತ ಹಲೋ ಟ್ಯೂನ್ಸ್

ಈ ಯೋಜನೆಯಲ್ಲಿ ಯಾವುದೇ 'ಡೇಟಾ' ಸೇರಿಸಲಾಗಿಲ್ಲ. ನಿಮಗೆ ಇಂಟರ್ನೆಟ್ ಸೇವೆ ಅಗತ್ಯವಿದ್ದರೆ, ನೀವು ಪ್ರತ್ಯೇಕ ಡೇಟಾ ಆಡ್-ಆನ್ ಅನ್ನು ಖರೀದಿಸಬಹುದು. ಈ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ.

46
Airtel Rs.2249 Recharge Plan

ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಸ್ವಲ್ಪ ಡೇಟಾ ಬೇಕು ಎಂದು ಬಯಸುವ ಗ್ರಾಹಕರಿಗೆ ಈ ಪ್ಲಾನ್ ಒಳ್ಳೆಯ ಆಯ್ಕೆಯಾಗಲಿದೆ. ಕೆಲವರು ವಾಟ್ಸಪ್‌ ಮಾತ್ರ ಬಳಕೆ ಮಾಡುತ್ತಿರುತ್ತಾರೆ. ಈ ವರ್ಗದ ಬಳಕೆದಾರರು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.

  • ವ್ಯಾಲಿಡಿಟಿ: 365 ದಿನಗಳು.
  • ಕರೆಗಳು: ಅನಿಯಮಿತ ಉಚಿತ ಕರೆಗಳು.
  • ಡೇಟಾ: ಈ ಯೋಜನೆಯು ಒಟ್ಟು 30GB ಹೈ-ಸ್ಪೀಡ್ ಡೇಟಾ ನೀಡುತ್ತದೆ. ಈ ಡೇಟಾವನ್ನು ವರ್ಷದ ಯಾವುದೇ ಸಮಯದಲ್ಲಿ ಬಳಸಬಹುದು.
  • SMS: 3,600 ಉಚಿತ SMS.
  • ಹೆಚ್ಚುವರಿ ಕೊಡುಗೆ: ಉಚಿತ ಹಲೋ ಟ್ಯೂನ್ಸ್.
56
ಭಾರತೀಯ ದೂರಸಂಪರ್ಕ ಉದ್ಯಮ

TRAI ಬಿಡುಗಡೆ ಮಾಡಿದ ಅಕ್ಟೋಬರ್ 2025 ರ ವರದಿಯ ಪ್ರಕಾರ, ಭಾರತದ ದೂರಸಂಪರ್ಕ ಮಾರುಕಟ್ಟೆ ಬೆಳೆಯುತ್ತಲೇ ಇದೆ. ಭಾರತದಲ್ಲಿ ಒಟ್ಟು ದೂರವಾಣಿ ಚಂದಾದಾರರ ಸಂಖ್ಯೆ 123.1 ಕೋಟಿ ತಲುಪಿದೆ. ಇವರಲ್ಲಿ 1.184 ಬಿಲಿಯನ್ ಜನರು ಮೊಬೈಲ್ ಬಳಕೆದಾರರು. ಪ್ಯಾನ್-ಇಂಡಿಯಾ ಸಂಪರ್ಕವು ವಿಸ್ತರಿಸುತ್ತಿರುವುದರಿಂದ ಮೊಬೈಲ್ ಬಳಕೆದಾರರ ಸಂಖ್ಯೆಯು 0.19% ರಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: December Price: ವರ್ಷದ ಕೊನೆ ತಿಂಗಳ ಮೊದಲ ದಿನದಂದು LPG ಸಿಲಿಂಡರ್ ದರದಲ್ಲಿ ಬದಲಾವಣೆ

66
ಏರ್‌ಟೆಲ್

ನೀವು ನಿಮ್ಮ ಏರ್‌ಟೆಲ್ ಸಿಮ್ ಅನ್ನು ಮುಖ್ಯವಾಗಿ ಕೇವಲ ಕರೆಗಳಿಗೆ ಬಳಸುತ್ತಿದ್ದರೆ, ರೂ. 1849 ಯೋಜನೆ ಉತ್ತಮ ಆಯ್ಕೆಯಾಗಿದೆ. ತಿಂಗಳಿಗೆ ಕೇವಲ ರೂ. 154 ನಲ್ಲಿ ನಿಮ್ಮ ಸಿಮ್ ಇಡೀ ವರ್ಷ ಸಕ್ರಿಯವಾಗಿರುತ್ತದೆ. ಹಾಗಾಗಿ ಈ ಎರಡು ಆಫರ್‌ಗಳು ಕೀ ಪ್ಯಾಡ್ ಬಳಕೆದಾರರ ಜೇಬಿಗೆ ಹಿತಕರವಾಗಲಿದೆ.

ಇದನ್ನೂ ಓದಿ: 3 ಸರ್ಕಾರಿ ವಿಮಾ ಕಂಪನಿ ವಿಲೀನಕ್ಕೆ ಕೇಂದ್ರ ಚಿಂತನೆ

Read more Photos on
click me!

Recommended Stories