ಚಿನ್ನದ ಬೆಲೆಯಲ್ಲಿ ಮಹಾ ಕುಸಿತ; ವಾರದ ಮೊದಲ ದಿನವೇ ಗೋಲ್ಡ್‌ ರೇಟ್‌ 5950 ರುಪಾಯಿ ಡೌನ್! ಕೈಗೆಟುಕುವ ಬೆಲೆಗೆ ಇಂದಿನ ಗೋಲ್ಡ್ ರೇಟ್

Published : Mar 23, 2026, 11:01 AM IST

ಬೆಂಗಳೂರು: ಚಿನ್ನ ಖರೀದಿಸುವ ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಕಾದುಕುಳಿತವರಿಗೆ ಇದು ಗುಡ್ ನ್ಯೂಸ್. ವಾರದ ಮೊದಲ ದಿನ ಸೋವಾರವಾದ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಮಾರ್ಚ್ 23ರಂದು ಗೋಲ್ಡ್ ರೇಟ್ ಎಷ್ಟಿದೆ ನೋಡೋಣ ಬನ್ನಿ 

PREV
16
ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಕುಸಿತ

ಯುಗಾದಿ ಹಾಗೂ ರಂಜಾನ್ ಬಳಿಕವೂ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಮುಂದುವರೆದಿದೆ. ಕಳೆದ ಆರು ದಿನಗಳಿಂದಲೂ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇದು ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರ ಪಾಲಿಗೆ ಸಿಹಿಸುದ್ದಿ ಎನಿಸಿಕೊಂಡಿದೆ.

26
ಯುದ್ದ ಭೀತಿಯ ನಡುವೆ ಚಿನ್ನದ ಬೆಲೆಯಲ್ಲಿ ಮಹಾ ಕುಸಿತ

ಒಂದು ಕಡೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಗನಮುಖಿಯಾಗುತ್ತಿದ್ದೆ. ಇರಾನ್-ಇಸ್ರೇಲ್ ಯುದ್ದ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಹೀಗಿರುವಾಗಲೇ ನಿರಂತವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದು ಸಾಮಾನ್ಯ ವರ್ಗದ ಆಭರಣ ಖರೀದಿಸುವವರು ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

36
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 5950 ರುಪಾಯಿ ಕುಸಿತ

ಹೌದು, ಮಾರ್ಚ್ 23ರ ಇಂದು 24 ಕ್ಯಾರಟ್ ಒಂದು ಗ್ರಾಮ್‌ ಚಿನ್ನದ ಮೇಲೆ ಬರೋಬ್ಬರಿ 595 ರುಪಾಯಿ ಇಳಿಕೆಯಾಗಿದ್ದು, ಒಂದು ಗ್ರಾಮ್‌ಗೆ 14,002 ರುಪಾಯಿಗಳಾಗಿದೆ. ಈ ಮೂಲಕ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 5950 ರುಪಾಯಿ ಇಳಿಕೆಯಾಗಿದೆ.

46
22 ಕ್ಯಾರಟ್ 10 ಗ್ರಾಮ್ ಮೇಲೆ 5450 ರುಪಾಯಿ ಕುಸಿತ

ಇನ್ನೊಂದೆಡೆ ಆಭರಣ ಚಿನ್ನವೆಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಮಹಾಕುಸಿತವಾಗಿದೆ. ಪ್ರತಿ ಗ್ರಾಮ್ 22 ಕ್ಯಾರಟ್ ಚಿನ್ನದ ಮೇಲೆ 545 ರುಪಾಯಿ ಇಳಿಕೆಯಾಗಿದ್ದು, ಇಂದು ಒಂದು ಗ್ರಾಮ್ ಚಿನ್ನದ ಬೆಲೆ 12,835 ರುಪಾಯಿಗಳಾಗಿದೆ. ಇನ್ನು 10 ಗ್ರಾಮ್ 22 ಕ್ಯಾರಟ್ ಚಿನ್ನದ ಮೇಲೆ 5450 ರುಪಾಯಿ ಇಳಿಕೆಯಾಗಿದೆ.

56
ಕಳೆದ 10 ದಿನಗಳಲ್ಲಿ ಭಾರೀ ಬೆಲೆ ಕುಸಿತ

ಕಳೆದ 10 ದಿನಗಳಲ್ಲಿ 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 19640 ರುಪಾಯಿ ಇಳಿಕೆಯಾಗಿದೆ. ಇನ್ನು ಇದೇ ವೇಳೆ 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 18,000 ರುಪಾಯಿ ಇಳಿಕೆಯಾಗಿದೆ.

66
ಬೆಳ್ಳಿ ಬೆಲೆಯಲ್ಲಿ 15,000 ರುಪಾಯಿ ಕುಸಿತ

ಇನ್ನು ಚಿನ್ನದ ಜತೆಜತೆಗೆ ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತವಾಗಿದ್ದು, ಇಂದು ಒಂದೇ ದಿನ ಒಂದು ಕೆಜಿ ಬೆಳ್ಳಿ ಮೇಲೆ ಬರೋಬ್ಬರಿ 15,000 ರುಪಾಯಿ ಕುಸಿತವಾಗಿದೆ. ಈ ಮೂಲಕ ಇಂದು ಒಂದು ಕೆಜಿ ಬೆಳ್ಳಿ ಬೆಲೆ 2,30,000 ರುಪಾಯಿಗಳಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories