ಜೆಫ್ ಬಿಜೋಸ್ ಹಿಂದಿಕ್ಕಿ ವಿಶ್ವದ ಶ್ರೀಮಂತ ಪಟ್ಟಕ್ಕೇರಿದ ಅರ್ನಾಲ್ಟ್, 3ನೇ ಸ್ಥಾನಕ್ಕೆ ಕುಸಿದ ಮಸ್ಕ್ !

First Published Mar 7, 2024, 5:24 PM IST

ವಿಶ್ವದ ಶ್ರೀಮಂತ ಯಾರು? ಇತ್ತೀಚೆಗಷ್ಟೆ ಎಲಾನ್ ಮಸ್ಕ್ 2ನೇ ಸ್ಥಾನಕ್ಕೆ ಕುಸಿದಿದ್ದರು. ಅಮೇಜಾನ್ ಮುಖ್ಯಸ್ಥ ಜೆಫ್ ಮೊದಲ ಸ್ಥಾನಕ್ಕೇರಿದ್ದರು. ಇದೀಗ ಜೆಫ್ ಬೆಜೋಸ್ ಹಿಂದಿಕ್ಕಿದ ಫ್ರೆಂಚ್ ಉದ್ಯಮಿ ಬೆರ್ನಾರ್ಡ್ ಅರ್ನಾಲ್ಟ್ ಮೊದಲ ಸ್ಥಾನಕ್ಕೇರಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಭಾರಿ ಪೈಪೋಟಿ. ಇದೀಗ ಮಾರ್ಚ್ 2024ರ ಪಟ್ಟಿ ಬಿಡುಗಡೆಯಾಗಿದೆ. ನೂತನ ಪಟ್ಟಿಯಲ್ಲಿ ಫ್ರೆಂಚ್ ಉದ್ಯಮಿ ಬೆರ್ನಾರ್ಡ್ ಅರ್ನಾಲ್ಟ್ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಬ್ಲೂಮ್‌ಬರ್ಗ್ ಬಿಲೇನಿಯರ್ ಇಂಡೆಕ್ಸ್ ಡೇಟಾ ಈ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಬರೋಬ್ಬರಿ 197 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿರುವ  LVMH ಐಷಾರಾಮಿ ಗೂಡ್ಸ್ ಕಂಪನಿ ಮಾಲೀಕ ಬೆರ್ನಾರ್ಡ್ ಅರ್ನಾಲ್ಟ್ ಇದೀಗ ಶ್ರೀಮಂತ ಕಿರೀಟ ಮುಡಿಗೇರಿಸಿದ್ದಾರೆ.

ಜನಪ್ರಿಯ ಲೂಯಿಸ್ ವಿಟಾನ್ ಬ್ರ್ಯಾಂಡ್ ಕೂಡ ಇದೇ  LVMH ಕಂಪನಿಯ ಭಾಗವಾಗಿದೆ. ಅರ್ನಾಲ್ಟ್ ಒಂದೇ ದಿನ ಬರೋಬ್ಬರಿ 197 ಬಿಲಿಯನ್ ಅಮೆರಿಕನ್ ಡಾಲರ್ ಆದಾಯಗಳಿಸುವ ಮೂಲಕ ದಿಡೀರ್ ನಂಬರ್ 1 ಪಟ್ಟಕ್ಕೇರಿದ್ದಾರೆ.
 

ಅರ್ನಾಲ್ಟ್ ಸಾಧನೆಯಿಂದ ಇತ್ತೀಚೆಗಷ್ಟೇ ಮೊದಲ ಸ್ಥಾನಕ್ಕೇರಿದ್ದ ಅಮೇಜಾನ್ ಮುಖ್ಯಸ್ಥ ಜೆಫ್ ಬೆಜೋಸ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 196 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಸುದೀರ್ಘ ದಿನಗಳ ಕಾಲ ಮೊದಲ ಸ್ಥಾನ ಅಲಂಕರಿಸಿದ್ದ ಎಲಾನ್ ಮಸ್ಕ್ ಇಗೀಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. 189 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿರುವ ಮಸ್ಕ್ ಮೊದಲ ಸ್ಥಾನಕ್ಕೆ ಬರಲು ಆದಾಯ ಹೆಚ್ಚಿಸಿಕೊಳ್ಳಬೇಕಿದೆ.
 

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜುಕರ್‌ಬರ್ಗ್ 178 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 148 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿರುವ  5ನೇ ಸ್ಥಾನದಲ್ಲಿದ್ದಾರೆ.
 

ಉದ್ಯಮಿಗಳಾದ ಸ್ಟೀವ್ ಬಾಲ್ಮರ್, ವಾರೆನ್ ಬಫೆಟ್, ಲ್ಯಾರಿ ಎಲಿಸನ್, ಲ್ಯಾರಿ ಪೇಜ್ ಹಾಗೂ ಸರ್ಗೆ ಬ್ರಿನ್ ವಿಶ್ವದ ಶ್ರೀಮಂತರ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
 

click me!