ಗೂಗಲ್ ಪೇ, ಫೋನ್‌ಪೇ ವಿರುದ್ಧ ಸ್ಪರ್ಧೆಗೆ ಭಾರತದ ಸಣ್ಣ ಸಣ್ಣ ಯುಪಿಐ ಆ್ಯಪ್ ರೆಡಿ, NPCI ಸೂಚನೆ!

First Published Mar 6, 2024, 5:14 PM IST

ಗೂಗಲ್ ಪೇ, ಫೋನ್‌ಪೇ ಪಾವತಿ ಆ್ಯಪ್‌ಗಳು ಭಾರತದಲ್ಲಿ ಬಹುತೇಕ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದರ ಜೊತೆಗೆ ಇತರ ಹಲವು ದಿಗ್ಗಜ ಕಂಪನಿಗಳು ಯುಪಿಐ ಪಾವತಿ ಸೇವೆ ನೀಡುತ್ತಿದೆ. ಇದೀಗ ಈ ಆ್ಯಪ್‌ಗಳಿಗೆ ಸ್ಪರ್ಧೆ ನೀಡಲು ಭಾರತದ ಸಣ್ಣ ಸಣ್ಣ ಆ್ಯಪ್‌ಗಳು NPCI ಅನುಮತಿ ಕೇಳಿದೆ. ಇದು ಹೊಸ ಕ್ರಾಂತಿ ಸೃಷ್ಟಿಸುತ್ತಾ? ಅಥವಾ ಅಪಾಯಾಕಾರಿಯೇ? NPCI ಹೇಳುವುದೇನು?

ಭಾರತದಲ್ಲಿನ ಡಿಜಿಟಲ್ ಪಾವತಿ ವ್ಯವಸ್ಥೆ ವಿಶ್ವದಲ್ಲೇ ಭಾರಿ ಜನಪ್ರಿಯಗೊಂಡಿದೆ. ಹಲವು ದೇಶಗಳು ಭಾರತಕ್ಕೆ ಆಗಮಿಸಿ ಈ ಕುರಿತು ಅಧ್ಯಯನ ನಡೆಸಿದೆ. ಭಾರತದ ಯುಪಿಐ ಪಾವತಿ  ವಿಶ್ವಕ್ಕೆ ಮಾದರಿಯಾಗಿದೆ.
 

ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ಆ್ಯಪ್ ಸೇವೆ ಭಾರತದಲ್ಲಿ ಲಭ್ಯವಿದೆ. ಇವೆಲ್ಲವೂ ಭಾರತೀಯ ಪೇಮೆಂಟ್ಸ್  ನ್ಯಾಷನಲ್ ಕಾರ್ಪೋರೇಶನ್(NPCI) ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಿದೆ. 

ಭಾರತದಲ್ಲಿರುವ ದಿಗ್ಗಜ ಯುಪಿಐ ಸೇವೆ ನೀಡುತ್ತಿರುವ ಆ್ಯಪ್‌ಗಳಿಗೆ ಸೆಡ್ಡು ಹೊಡೆಯಲು ಸಣ್ಣ ಸಣ್ಣ ಯುಪಿಐ ಆ್ಯಪ್‌ಗಳು NPCI ಅನುಮತಿಗಾಗಿ ಕಾಯುತ್ತಿದೆ. ಈ ಮೂಲಕ ಹೊಸ ಕ್ರಾಂತಿ ಮಾಡಲು ಸಜ್ಜಾಗಿದೆ.
 

ಸಣ್ಣ ಸಣ್ಣ ಯುಪಿಐ ಪಾವತಿ ಆ್ಯಪ್‌ಗಳು ಭಾರತದ ಡಿಜಿಟಲ್ ಪಾವತಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಆದರೆ ಈ ಸಣ್ಣ ಆ್ಯಪ್‌ಗಳ ಮಾರ್ಕೆಟಿಂಗ್ ಬಂಡವಾಳ ಅತೀ ಕಡಿಮೆ ಕಾರಣ ಹೆಚ್ಚು ಪ್ರಚಾರ ಪಡೆಯದೆ ಕೊನೆಗೆ ಸೇವೆ ಸ್ಥಗಿತಗೊಳ್ಳುವ ಪರಿಸ್ಥಿತಿಗಳು ಎದುರಾಗುತ್ತದೆ ಎಂದು   NPCI ಹೇಳಿದೆ.

ಫೋನ್‌ಪೇ , ಗೂಗಲ್ ಪೇ, ಪೇಟಿಎಂ ಯುಪಿಐ ಆ್ಯಪ್‌ಗಳು ಭಾರತದ ಶೇಕಡಾ 95 ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಇದರ ಜೊತೆಗೆ ದಿಗ್ಗಜ ಕಂಪನಿಗಳಾದ ಅಮೇಜಾನ್ ಪೇ, ಬಜಾಜ್ ಪೇ, ಜುಪಿಟರ್, ಸ್ಲೈಸ್, ನವಿ ಟೆಕ್ನಾಲಜಿ, ಟಾಟಾ ನ್ಯೂ ಯುಪಿಐ ಸೇವೆ ನೀಡುತ್ತಿದ್ದರೂ ಮಾರುಕಟ್ಟೆ ಪಾಲು ತೀರಾ ಕಡಿಮೆ.
 

ಇದನ್ನು ಹೊರತುಪಡಿಸಿ ಹೊಸ ಹೊಸ ಆ್ಯಪ್‌ಗಳು ಯುಪಿಐ ಪಾವತಿಗೆ ಮುಂದಾಗಿದೆ.  NPCI ಅನುಮತಿ ಕೇಳಿದೆ, ಕೆಲ ಕಂಪನಿಗಳು ಅನುಮತಿ ಪಡೆದು ಯುಪಿಐ ಸೇವೆ ಆರಂಭಿಸಿದೆ. ಆದರೆ ಬಂಡವಾಳ ಕೊರತೆಯಿಂದ ಯಾರಿಗೂ ತಿಳಿಯದಾಗಿದೆ ಎಂದು  NPCI ಹೇಳಿದೆ.
 

ಸಣ್ಣ ಸಣ್ಣ ಯುಪಿಐ ಆ್ಯಪ್‌ಗಳು ಲಾಂಚ್ ಆದ ಬಳಿಕ ಸಣ್ಣ ಬದಲಾವಣೆ, ಸುರಕ್ಷತಾ ಫೀಚರ್ಸ್ ಭದ್ರಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ದೀರ್ಘ ಕಾಲ ಉಳಿಯಲು ಸವಾಲುಗಳು ಎದುರಾಗುತ್ತದೆ ಎಂದು  NPCI ಹೇಳಿದೆ
 

NPCI ಭಾರತದದಲ್ಲಿ ಯುಪಿಐ ಪಾವತಿಗೆ ಕಟ್ಟು ನಿಯಮ ಜಾರಿಗೊಳಿಸಿದೆ. ಗ್ರಾಹಕರ ಸುರಕ್ಷತೆ, ವೈಯುಕ್ತಿಕ ಮಾಹಿತಿ, ಡೇಟಾ ಸೋರಿಕೆ ಸೇರಿದಂತೆ ಹಲವು ಆತಂಕಗಳು ಇದರ ಹಿಂದಿರುವ ಕಾರಣ ನೀತಿಗಳು ಕಠಿಣವಾಗಿದೆ. 
 

click me!