ತೇಜಪತ್ರೆಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ, ಈ ಭಾಗದ ರೈತರು ಈ ಬೆಳೆಯತ್ತ ಮುಖ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 20 ವರ್ಷಗಳ ಹಿಂದೆ ತೇಜಪತ್ರೆಯನ್ನು ಬೆಳೆಯುತ್ತಿರಲಿಲ್ಲ. ಆದರೆ ಇಂದು, ಉತ್ತರ ದಿನಾಜ್‌ಪುರ ರಾಜ್ಯದ ತೇಜಪತ್ರೆ ಉತ್ಪಾದನೆಯ ಕೇಂದ್ರವಾಗಿದೆ. ಇದು 400 ಕೋಟಿ ರೂಪಾಯಿಯ ಉದ್ಯಮವಾಗಿದ್ದು, ಕ್ವಿಂಟಾಲ್‌ಗೆ 5,000 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.
29
ಎಷ್ಟು ಜನರು ಬೆಳೆಯುತ್ತಿದ್ದಾರೆ?
ಪುರುಷರು ದಾಲ್ಚಿನ್ನಿ ಮರಗಳನ್ನು ಬೆಳೆಸಿ, ಕೊಯ್ಲು ಮಾಡುತ್ತಾರೆ, ಮಹಿಳೆಯರು ಎಲೆಗಳನ್ನು ಕೊಂಬೆಗಳಿಂದ ಬೇರ್ಪಡಿಸಿ, ಒಣಗಿಸುವ ಕೆಲಸ ಮಾಡುತ್ತಾರೆ. ಉತ್ತರ ದಿನಾಜ್‌ಪುರದಲ್ಲಿ 80% ರೈತರು ದಾಲ್ಚಿನ್ನಿ ಬೆಳೆಯುತ್ತಿದ್ದಾರೆ. 64% ಮಹಿಳೆಯರು ಎಲೆಗಳನ್ನು ಬೇರ್ಪಡಿಸುವ ಮತ್ತು ಒಣಗಿಸುವ ಕೆಲಸದಲ್ಲಿ ಮಾಡುತ್ತಾರೆ. ಎಲೆಗಳನ್ನು ಬೇರ್ಪಡಿಸಲು, ಕತ್ತರಿಸಲು ಎಂದು ಬೇರೆ ಬೇರೆ ಹಣ ಫಿಕ್ಸ್ ಮಾಡಿದ್ದಾರಂತೆ.
39
ಬಂದ ಆದಾಯ ಎಷ್ಟು?
2007ರಲ್ಲಿ, ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಬೆಳೆಗಳ ಬದಲು ತೇಜಪತ್ರೆ (ಬೇ ಲೀಫ್) ಬೆಳೆಯಲು ನಿರ್ಧಾರ ಮಾಡಿದರು. ಇದು ಅವರ ಲೈಫ್ ಬದಲು ಮಾಡಿತು. 650 ಮರಗಳಿಂದ ವರ್ಷಕ್ಕೆ 80-90 ಕ್ವಿಂಟಾಲ್ ತೇಜಪತ್ರೆ ಸಿಗುತ್ತದೆ, ಪ್ರತಿ ಮೂರು ವರ್ಷಕ್ಕೆ 5 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.
ಕಡಿಮೆ ನಿರ್ವಹಣೆ ಮಾಡುವುದರ ಜೊತೆಗೆ ನಿರಂತರ ಬೇಡಿಕೆ ಇರುವ ಬೆಳೆಯಾಗಿದೆ. 2020ರಲ್ಲಿ 240 ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗುತ್ತಿದ್ದ ದಾಲ್ಚಿಯನ್ನು, ಕಳೆದ ವರ್ಷ 318 ಹೆಕ್ಟೇರ್‌ಗೆ ವಿಸ್ತರಿಸಲಾಗಿತ್ತು. 769 ಮೆಟ್ರಿಕ್ ಟನ್‌ನಿಂದ 2024-25ರಲ್ಲಿ 1019 ಮೆಟ್ರಿಕ್ ಟನ್‌ಗೆ ಉತ್ಪಾದನೆಯೂ ಏರಿದೆ. ಸುಮಾರು 10,000 ಜನರು ಈ ಉದ್ಯಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿದ್ದಾರೆ.
59
ದಾಲ್ಚಿನ್ನಿ ಕೃಷಿ ಹೇಗೆ ಮಾಡ್ತಾರೆ?
ದಾಲ್ಚಿನ್ನಿ ಎಲೆಗಳನ್ನು ಆಹಾರದಲ್ಲಿ ಬಳಸುವುದರ ಜೊತೆಗೆ, ಕೊಂಬೆಗಳನ್ನು ಪುಡಿಮಾಡಿ, ಎಲೆಗಳನ್ನು ನೈಸರ್ಗಿಕ ಬಣ್ಣವಾಗಿ ಬಳಸಲಾಗುತ್ತದೆ. ತೇಜಪತ್ರೆ ಮರಗಳು ಎಂದಿಗೂ ಹಸಿರಾಗಿರುತ್ತವೆ, 2-3 ವರ್ಷಗಳಲ್ಲಿ ಬೆಳೆಯುತ್ತವೆ. ಒಂದು ಮರ ವರ್ಷಕ್ಕೆ 15-20 ಕೆ.ಜಿ. ಎಲೆಗಳನ್ನು 25 ವರ್ಷಗಳವರೆಗೆ ಕೊಡುತ್ತದೆ. ರೈತರು ಅವರ ತೋಟವನ್ನು ವ್ಯಾಪಾರಿಗಳಿಗೆ 3 ವರ್ಷಗಳಿಗೆ ಗುತ್ತಿಗೆಗೆ ನೀಡುತ್ತಾರೆ. ವ್ಯಾಪಾರಿಗಳು ಕೊಯ್ಲು, ಒಣಗಿಸುವಿಕೆ, ಪ್ಯಾಕಿಂಗ್, ಸಾಗಾಟ ಎಲ್ಲವನ್ನೂ ನೋಡಿಕೊಳ್ತಾರೆ. ಇದರಿಂದ ರೈತರಿಗೆ ಜಾಸ್ತಿ ಕೆಲಸ ಇರೋದಿಲ್ಲ.
69
ಕೊಯ್ಲು ಯಾವಾಗ?
ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ತೇಜಪತ್ರೆಯ ಕೊಯ್ಲು ಮಾಡಲಾಗುತ್ತದೆ. ಪ್ರತಿ 6-8 ತಿಂಗಳಿಗೊಮ್ಮೆ, ಕೆಲವೊಮ್ಮೆ ವರ್ಷಕ್ಕೆ ಎರಡು ಬಾರಿ ಕೊಯ್ಲು ಮಾಡಲಾಗುವುದು. ಎಲೆಗಳನ್ನು 3-4 ದಿನ ಒಣಗಿಸುತ್ತಾರೆ. ಮಳೆಗಾಲದಲ್ಲಿ, ಎಲೆಗಳನ್ನು ಪ್ಲಾಸ್ಟಿಕ್ ಶೀಟ್‌ಗಳಿಂದ ಮುಚ್ಚುವುದರಿಂದ ಹೆಚ್ಚಿನ ಶ್ರಮ ಬೇಕು.
79
ಬೇರೆ ಬೆಳೆಯನ್ನು ಬೆಳೆಯಲಾಗತ್ತೆ
ಈ ಮರಗಳ ಮಧ್ಯೆ ಆಲೂಗಡ್ಡೆ, ಕಾಳುಗಳನ್ನು ಕೂಡ ಬೆಳೆಯಲಾಗಿದೆಯಂತೆ. ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ಕೆಲ ರೈತರು ಹೇಳಿದ್ದಾರೆ.
89
ಎಲ್ಲೆಲ್ಲಿ ರಫ್ತು ಮಾಡ್ತಾರೆ?
ದಾಲ್ಚಿನ್ನಿಯನ್ನು A, B, C ಗುಣಮಟ್ಟದ ಶ್ರೇಣಿಗಳಾಗಿ ವಿಭಾಗ ಮಾಡಲಾಗಿದೆ. A ಗುಣಮಟ್ಟದ ಎಲೆಗಳನ್ನು ಗಲ್ಫ್ ರಾಷ್ಟ್ರಗಳಿಗೆ, B ಮತ್ತು C ಗುಣಮಟ್ಟದ ಎಲೆಗಳನ್ನು ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿಯಂತಹ ಭಾರತದಲ್ಲಿರುವ ನಗರಗಳಿಗೆ ರಫ್ತು ಮಾಡುತ್ತಾರೆ. ಕೊಯ್ಲು, ಪ್ಯಾಕಿಂಗ್ ಮಾಡುವುದು, ನೀರಾವರಿ ಕೊಡುವುದು, ಗೊಬ್ಬರ ಹಾಕುವುದು, ಕೀಟನಾಶಕಗಳಿಗೆ ಸೇರಿ ಕ್ವಿಂಟಾಲ್‌ಗೆ 2,600 ರೂಪಾಯಿ ಖರ್ಚಾಗುತ್ತದೆ ಎಂದು ಒಬ್ಬ ವ್ಯಾಪಾರಿ ಹೇಳುತ್ತಾರೆ.
99
ಆದಾಯ ಎಷ್ಟು?
ಸಾಂಪ್ರದಾಯಿಕ ಬೆಳೆಗಳಾದ ಭತ್ತವು ವರ್ಷಕ್ಕೆ 30,000-40,000 ರೂಪಾಯಿ ಆದಾಯ ನೀಡುತ್ತಿತ್ತು. ಆದರೆ ತೇಜಪತ್ರೆ ಕೃಷಿಯಿಂದ ಆದಾಯ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ಆರ್ಥಿಕ ಅಭಿವೃದ್ಧಿ ಆಗಿದೆ.