ಬ್ಯಾಂಕ್‌ನಿಂದ ರೈತರವರೆಗೆ: ಜನವರಿ 2026ರಿಂದ ಬದಲಾಗುತ್ತಿರುವ ಪ್ರಮುಖ ನಿಯಮಗಳು

Published : Dec 23, 2025, 12:16 PM IST

2026ರ ಆರಂಭದಿಂದ, 8ನೇ ವೇತನ ಆಯೋಗ, ಬ್ಯಾಂಕ್ ಬಡ್ಡಿದರ, ಪಿಎಂ ಕಿಸಾನ್ ಯೋಜನೆ, ಮತ್ತು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಹಣಕಾಸಿನ ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳು ರೈತರು, ಸರ್ಕಾರಿ ನೌಕರರು ಮತ್ತು ಸಾಮಾನ್ಯ ನಾಗರಿಕರ ಮೇಲೆ ನೇರ ಪರಿಣಾಮ ಬೀರಲಿವೆ.

PREV
19
ಹಣಕಾಸಿನ ನೀತಿ

2026 ಆರಂಭವಾಗುತ್ತಿದ್ದಂತೆ ಕೆಲವು ಪ್ರಮುಖ ಹಣಕಾಸಿನ ನೀತಿಗಳು ಬದಲಾಗಲಿವೆ. ಈ ಹೊಸ ಬದಲಾವಣೆಗಳು ನೇರವಾಗಿ ರೈತರು, ಯುವ ಜನತೆ, ವೇತನದಾರರ ಮೇಲೆ ಪರಿಣಾಮ ಬೀರಲಿವೆ. ಇದೇ ರೀತಿ ಸಾಮಾಜಿಕ ಬಳಕೆ ನಿರ್ಬಂಧ, ಇಂಧನ ಬೆಲೆ ಸೇರಿದಂತೆ ಹಲವು ನಿಯಮಗಳನ್ನು ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

29
ಬದಲಾವಣೆ 1

ಕ್ರೆಡಿಟ್ ಸ್ಕೋರ್ ಪ್ರತಿ 15 ದಿನಗಳಿಗೊಮ್ಮೆ ಅಪ್‌ಡೇಟ್ ಮಾಡಲಾಗುತ್ತಿದೆ. ಇದೀಗ ಕ್ರೆಡಿಟ್ ಬ್ಯೂರೋಗಳು ಪ್ರತಿ ವಾರಕ್ಕೊಮ್ಮೆ ಗ್ರಾಹಕರ ಹಣಕಾಸಿನ ಅಂಕಿ ಅಂಶಗಳು, ಕ್ರೆಡಿಟ್ ಸ್ಕೋರ್ ನವೀಕರಣ ಮಾಡಲಾಗುತ್ತದೆ. ಇದು ಹೊಸ ವರ್ಷದಲ್ಲಾಗುತ್ತಿರುವ ಪ್ರಮುಖ ಬದಲಾವಣೆಯಾಗಿದೆ.

39
ಬದಲಾವಣೆ 2

SBI, PNB ಮತ್ತು HDFC ಸೇರಿದಂತೆ ಹಲವು ಬ್ಯಾಂಕ್‌ಗಳು ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಈ ದರ ಇಳಿಕೆ ಸಾಲದ ಮೇಲಿನ ಬಡ್ಡಿದರದ ಮೇಲೆ ನೇರ ಪರಿಣಾಮ ಬೀರಲಿದೆ. ಇದರ ಜೊತೆಯಲ್ಲಿ ಫಿಕ್ಸಡ್ ಡೆಪಾಸಿಟ್ ಮೇಲಿನ ನವೀಕರಣಗೊಂಡ ಬಡ್ಡಿದರಗಳು 2026 ಜನವರಿಯಿಂದ ಅನ್ವಯವಾಗಲಿವೆ.

49
ಬದಲಾವಣೆ 3

ಬ್ಯಾಂಕ್‌ಗಳು ಡಿಜಿಟಲ್ ಸ್ಕ್ಯಾಮ್ ತಡೆಯುವ ನಿಟ್ಟಿನಲ್ಲಿ UPI ಮತ್ತು ಡಿಜಿಟಲ್ ಪೇಮೆಂಟ್‌ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಗ್ರಾಹಕರು ಕಡ್ಡಾಯವಾಗಿ PAN-Aadhaar ಲಿಂಕ್ ಮಾಡಬೇಕು. ಜನವರಿ 1ರಿಂದ ಈ ನಿಯಮ ಕಡ್ಡಾಯವಾಗುವ ಸಾಧ್ಯತೆಗಳಿವೆ. ಲಿಂಕಿಂಗ್ ಪ್ರಕ್ರಿಯೆ ವಿಫಲವಾದ್ರೆ ಹಣಕಾಸಿನ ಸೇವೆಗಳನ್ನು ಬ್ಯಾಂಕ್‌ಗಳು ನಿರ್ಬಂಧಿಸಬಹುದು.

59
ಬದಲಾವಣೆ 4

ಸಿಮ್ ಪರಿಶೀಲನೆ ನಿಯಮಗಳನ್ನು (SIM verification Rules) ಮತ್ತಷ್ಟು ಕಠಿಣಗೊಳಿಸುವ ಸಾಧ್ಯತೆಗಳಿವೆ. ವಿಶೇಷವಾಗಿ ವಾಟ್ಸಪ್, ಟೆಲಿಗ್ರಾಂ ಮತ್ತು ಸಿಗ್ನಲ್ ಅಂತಹ ಪ್ಲಾಟ್‌ಫಾರಂಗಳಲ್ಲಿ ಸಿಮ್ ಪರಿಶೀಲನೆ ಕಠಿಣವಾಗಲಿದ್ದು, ಈ ನಿಯಮ ಆನ್‌ಲೈನ್ ಸ್ಕ್ಯಾಮ್ ಮತ್ತು ದುರುಪಯೋಗ ತಡೆಯುವ ಉದ್ದೇಶವನ್ನು ಹೊಂದಿದೆ.

69
ಬದಲಾವಣೆ 5

ಆಸ್ಟ್ರೇಲಿಯಾ ಮತ್ತು ಮಲೇಶಿಯಾದಲ್ಲಿ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿಷೇಧಿಲಾಗಿದೆ. ಇದೀಗ ಇದೇ ಮಾದರಿಯ ಕಾನೂನುಗಳನ್ನು ತರಲು ಹಲವು ರಾಷ್ಟ್ರಗಳು ಚಿಂತನೆ ನಡೆಸುತ್ತಿದೆ. ಇದರಲ್ಲಿ ಭಾರತವೂ ಸಹ ಒಂದಾಗಿದೆ.

79
ಬದಲಾವಣೆ 6

ಇಂದು ದೇಶದ ಹಲವು ನಗರಗಳು ವಾಯುಮಾಲಿನ್ಯ ಸಂಕಷ್ಟಕ್ಕೆ ಸಿಲುಕುತ್ತಿವೆ. ಅದರಲ್ಲಿಯೂ ದೆಹಲಿ, ನೋಯ್ಡಾ ಅಂತಹ ನಗರಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಮಟ್ಟಕ್ಕೆ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಬಳಕೆಯ ವಾಹನಗಳ ಸಂಚಾರದ ಮೇಲೆ ಕೆಲ ನಿಬಂಧನೆ ವಿಧಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

89
ಬದಲಾವಣೆ 7

1ನೇ ಜನವರಿ 2026ರಿಂದ ಎಂಟನೇ ವೇತನ ಆಯೋಗ ಆರಂಭಗೊಳ್ಳಲಿದೆ. ಡಿಸೆಂಬರ್ ಅಂತ್ಯಕ್ಕೆ (ಡಿಸೆಂಬರ್ 31, 2025) ಏಳನೇ ವೇತನ ಆಯೋಗ ಅಂತ್ಯವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಹೊಸ ವೇತನ ರಚನೆಗಳು ಲಭ್ಯವಾಗಲಿವೆ. ಜನವರಿಯಿಂದಲೇ ನೌಕರರ ತುಟ್ಟಿ ಭತ್ಯೆ (Dearness allowance- DA) ಹೆಚ್ಚಳವಾಗಲಿದೆ. ದಿನಗೂಲಿ ನೌಕರರ ವೇತನ ಹೆಚ್ಚಾಗುವ ನಿರೀಕ್ಷೆಗಳಿವೆ.

ಇದನ್ನೂ ಓದಿ: ಚಿನ್ನ-ಬೆಳ್ಳಿ ಖರೀದಿ ಇನ್ನೂ ಕನಸಿನ ಮಾತು; ಆದ್ರೂ ಒಂದ್ಸಾರಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಬೆಲೆ ನೋಡಿ

99
ಬದಲಾವಣೆ 8

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಉತ್ತರ ಪ್ರದೇಶ ಸರ್ಕಾರ ವಿಶೇಷ ಗುರುತಿನ ಚೀಟಿ ನೀಡಿದೆ. ಈ ಐಡಿ ಇಲ್ಲದೇ ರೈತರ ಖಾತೆಗೆ ಹಣ ಕ್ರೆಡಿಟ್ ಆಗಲಾರದು. ಪ್ರಧಾನ ಮಂತ್ರಿ ಕಿಸಾನ್ ಬೆಳೆ ವಿಮಾ ಯೋಜನೆಯಡಿಯಲ್ಲಿ, ಕಾಡು ಪ್ರಾಣಿಗಳಿಂದ ಬೆಳೆ ಹಾನಿಗೊಳಗಾದ ರೈತರು ಈಗ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ವಿಮಾ ಪ್ರಯೋಜನಗಳನ್ನು ಪಡೆಯಲು ನಷ್ಟವನ್ನು 72 ಗಂಟೆಗಳ ಒಳಗೆ ರೈತರು ವರದಿ ಮಾಡಬೇಕು.

ಇದನ್ನೂ ಓದಿ: ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories