ಯಶಸ್ವಿ ವ್ಯಕ್ತಿಗಳು ಫ್ರೀ ಇರುವಾಗ ಏನು ಮಾಡ್ತಾರೆ? ಸಕ್ಸಸ್ ಬೇಕು ಅಂದ್ರೆ ನೀವು ಇದನ್ನೆ ಮಾಡಿ

Published : Dec 22, 2025, 03:42 PM IST

ಯಶಸ್ವಿ ವ್ಯಕ್ತಿಯಾಗುವುದು ಸುಲಭವಲ್ಲ, ಒಬ್ಬ ವ್ಯಕ್ತಿ ಯಶಸ್ವಿಯಾಗಬೇಕು ಅಂದ್ರೆ, ಅವರು ಕಷ್ಟಪಟ್ಟು ಕೆಲಸ ಮಾಡಬೇಕು ನಿಜಾ. ಇದರ ಜೊತೆಗೆ ಯಶಸ್ವಿ ವ್ಯಕ್ತಿಗಳು ಕೆಲವೊಂದು ಹವ್ಯಾಸ, ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳುತ್ತಾರೆ. ಅವುಗಳನ್ನು ಪಾಲಿಸಿದ್ರೆ ನೀವೂ ಯಶಸ್ವಿಯಾಗುವಿರಿ.

PREV
17
ಯಶಸ್ವಿ ವ್ಯಕ್ತಿಗಳು

ಸಾಮಾನ್ಯವಾಗಿ ಯಶಸ್ಸು ದೀರ್ಘ ಕೆಲಸದ ದಿನಗಳಿಂದ ಮಾತ್ರ ಸಿಗೋದಿಲ್ಲ. ಕೆಲಸ ಮುಗಿದ ನಂತರ ಜನರು ಏನು ಮಾಡುತ್ತಾರೆ, ಎನ್ನುವುದರ ಮೇಲೆ ಯಶಸ್ಸು ರೂಪುಗೊಳ್ಳುತ್ತದೆ. ಆಸಕ್ತಿದಾಯಕ ವಿಷಯವೆಂದರೆ ಯಶಸ್ವಿ ಜನರು ಆರಾಮವಾಗಿ ವಿಶ್ರಾಂತಿ ಪಡೆಯೋದಿಲ್ಲ. ಬದಲಾಗಿ ಅವರು ಒಂದಲ್ಲ ಒಂದು ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅವರ ಹವ್ಯಾಸಗಳು ಯಾವುವು ನೋಡೊಣ.

27
ದೇಹವನ್ನು ಮೂವ್ ಮಾಡುತ್ತಾರೆ

ಇದು ಸಿಕ್ಸ್-ಪ್ಯಾಕ್ ಅಬ್ಸ್, ಅಥವಾ ಫಿಟ್‌ನೆಸ್ ಗುರಿಗಳ ಬಗ್ಗೆ ಅಲ್ಲ. ಇದು ನಿಮ್ಮನ್ನು ಸ್ವಲ್ಪ ಬೆವರು ಮತ್ತು ಹೆಚ್ಚು ಉಸಿರಾಡುವಂತೆ ಮಾಡುವ ದೈಹಿಕ ಕೆಲಸವನ್ನು ಮಾಡುವುದರ ಬಗ್ಗೆ. ವ್ಯಾಯಾಮ, ಓಟ, ಈಜು, ಗೇಮ್ಸ್ ಆಡುವುದು ಅಥವಾ ದೀರ್ಘ ನಡಿಗೆ ಕೂಡ ಹೀಗೆ ಒಂದಲ್ಲ ಒಂದು ವಿಧಾನದ ಮೂಲಕ ತಮ್ಮ ದೇಹವನ್ನು ಮೂವ್ ಮಾಡುತ್ತಲೇ ಇರುತ್ತಾರೆ. ದೇಹವನ್ನು ಚಲಿಸುವುದರಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಯೋಚನೆ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ. ಚೆನ್ನಾಗಿ ನಿದ್ರೆ ಮಾಡಲು ಸಹಾಯವಾಗುತ್ತದೆ. ಮಾನಸಿಕ ಒತ್ತಡದಿಂದ ಹೊರ ಬರಲು ಸಹ ಇದು ಸಹಾಯ ಮಾಡುತ್ತದೆ.

37
ಯಾಕೆ ಹೀಗಾಯಿತು ಎಂದು ಯೋಚಿಸುತ್ತಾರೆ

ಜೀವನವನ್ನು ಆತುರದಿಂದ ಕಳೆಯುವ ಬದಲು, ಅವರು ಸ್ವಲ್ಪ ಸಮಯ ಯೋಚಿಸುತ್ತಾರೆ. ಕೆಲವೊಮ್ಮೆ ದಿನಚರಿ ಬರೆಯುವ ಮೂಲಕ, ಕೆಲವೊಮ್ಮೆ ತಲೆಯಲ್ಲಿ ಸಂಭಾಷಣೆಯನ್ನು ಮರುಪ್ರಸಾರ ಮಾಡುವ ಮೂಲಕ ಅಥವಾ ಸಮಸ್ಯೆ ಯಾಕಾಗಿದೆ ಎಂದು ಮತ್ತೆ ಮತ್ತೆ ಯೋಚಿಸಲು ಶುರು ಮಾಡುತ್ತದೆ. ಈ ಅಭ್ಯಾಸವು ನಾಟಕೀಯವಲ್ಲ, ಆದರೆ ಇದು ಪವರ್ ಫುಲ್ ಆಗಿದೆ. ಇದನ್ನು ಮಾಡುವುದರಿಂದ ತಪ್ಪು ಹೇಗಾಯಿತು ಮತ್ತು ಅದರಿಂದ ಹೇಗೆ ಹೊರಕ್ಕೆ ಬರಲು ಸಾಧ್ಯವಾಗುತ್ತದೆ ಎನ್ನುವ ಬಗ್ಗೆ ಯೋಚನೆ ಮಾಡಲು, ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

47
ಹೆಚ್ಚು ಹೆಚ್ಚು ಓದುತ್ತಾರೆ

ಹಲವು ಯಶಸ್ವಿ ಜನರು ಕಾದಂಬರಿ, ಆತ್ಮಚರಿತ್ರೆಗಳು, ಪ್ರಬಂಧಗಳು ಮೊದಲಾದ ಪುಸ್ತಕಗಳನ್ನು ಓದುತ್ತಾರೆ. ಎಲ್ಲವೂ ನಿಮಗೆ ಪಾಠ ಕಲಿಸಬೇಕಾಗಿಲ್ಲ. ಆನಂದಕ್ಕಾಗಿ ಓದುವುದು ಮನಸ್ಸನ್ನು ನಿಧಾನಗೊಳಿಸುತ್ತದೆ, ಸ್ಕ್ರೋಲಿಂಗ್ ಮಾಡೋದರಿಂದ ಮನಸ್ಸು ಶಾಂತವಾಗಿರೋದಿಲ್ಲ, ಆದರೆ ಓದುವುದರಿಂದ ಮೆದುಳು ಆಕ್ಟಿವ್ ಆಗಿರುತ್ತದೆ. ಇದು ಯೋಚನಾ ಲಹರಿಯನ್ನು ವಿಸ್ತರಿಸುತ್ತದೆ .

57
ಇಷ್ಟಪಟ್ಟು ಹೊಸದನ್ನು ಕಲಿಯುತ್ತಾರೆ

ಗೊತ್ತು ಗುರಿ ಇಲ್ಲದೇ ಸುಮ್ ಸುಮ್ನೆ ವಿಡಿಯೋ ಸ್ಕ್ರೋಲ್ ಮಾಡುವುದಕ್ಕೂ ಮತ್ತು ಏನನ್ನಾದರೂ ಸುಧಾರಿಸಲು ಹೊಸದನ್ನು ಕಲಿಯುವದಕ್ಕೆ ದೊಡ್ಡ ಅಂತರವಿದೆ. ಯಶಸ್ವಿ ಜನರು ಬೇರೆ ಬೇರೆ ಕೌಶಲ್ಯಗಳನ್ನು ಕಲಿಯುತ್ತಾರೆ. ಅದು ಸಂವಹನ, ನಾಯಕತ್ವ, ಸೃಜನಶೀಲವಾದದ್ದು ಅಥವಾ ತಮ್ಮನ್ನು ತಾವು ತಿಳಿದುಕೊಳ್ಳುವ ಕಲೆಯ ಕಡೆಗೂ ಸಹ ಅವರು ಹೆಚ್ಚು ಒತ್ತು ನೀಡುತ್ತಾರೆ. ಇದರಿಂದ ಅವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ.

67
ಸದ್ದಿಲ್ಲದೇ ಸೇವೆ ಮಾಡುತ್ತಾರೆ

ಸ್ವಯಂಸೇವೆ, ಮಾರ್ಗದರ್ಶನ, ಸಹಾಯ ಮಾಡುವುದು. ಇದೆಲ್ಲವನ್ನೂ ಸದ್ದಿಲ್ಲದೇ ಮಾಡುತ್ತಿದ್ದರೆ. ಇದರಿಂದ ಮಾನಸಿಕವಾಗಿ ಅವರು ಸ್ಟ್ರಾಂಗ್ ಆಗುತ್ತಾರೆ. ಇದು ನಿಮ್ಮ ಗಮನವನ್ನು ವೈಯಕ್ತಿಕ ಸಾಧನೆಗಳನ್ನು ಮೀರಿ ಬದಲಾಯಿಸುತ್ತದೆ. ಇದನ್ನು ತಮ್ಮ ಜೀವನದ ನಿಯಮಿತ ಭಾಗವನ್ನಾಗಿ ಮಾಡಿಕೊಳ್ಳುವ ಜನರು ಹೆಚ್ಚು ಒತ್ತಡ ರಹಿತರಾಗಿ ಜೀವನ ಮಾಡಲು ಸಾಧ್ಯವಾಗುತ್ತದೆ..

77
ಗುರಿಯ ಬಗ್ಗೆ ಫೋಕಸ್ ಆಗಿರುತ್ತಾರೆ

ಯಶಸ್ವಿ ವ್ಯಕ್ತಿಗಳು ತಮ್ಮ ಗುರಿಯ ಬಗ್ಗೆ ಹೆಚ್ಚು ಫೋಕಸ್ ಆಗಿರುತ್ತಾರೆ. ಅವರು ತಮ್ಮ ಗುರಿ ಸಾಧಿಸಲು ಹೊಸದನ್ನು ಕಲಿಯುತ್ತಾ, ತಮ್ಮ ಗುರಿಯನ್ನು ಪೋಷಿಸುತ್ತಾ ಬರುತ್ತಾರೆ. ಅದು ನಿಧಾನವಾದರೂ ಸರಿ, ಆದರೆ ಶ್ರಮಪಟ್ಟು, ತಮ್ಮ ಗುರಿಯನ್ನು ತಪ್ಪದೇ ಸಾಧಿಸುತ್ತಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories