ನಟ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ, ತಂದೆಯ ಆಸೆಯಂತೆ 'ನುಕಾಸ್ ಕೆಫೆ' ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ. ಅಪ್ಪು ಪ್ರೀತಿಯಿಂದ ಕರೆಯುತ್ತಿದ್ದ 'ನುಕ್ಕಿ' ಎಂಬ ಅಡ್ಡ ಹೆಸರನ್ನೇ ತಮ್ಮ ಬ್ರ್ಯಾಂಡ್‌ಗೆ ಇಟ್ಟಿರುವ ಅವರು, ಮನೆಯಲ್ಲಿಯೇ ಬೇಕರಿ ತಿನಿಸುಗಳನ್ನು ತಯಾರಿಸುತ್ತಿದ್ದಾರೆ.
ಕನ್ನಡಿಗರ ಮನಸ್ಸನ್ನು ಗೆದ್ದು ಅಲ್ಪ ಕಾಲದಲ್ಲಿಯೇ ಕಣ್ಮರೆಯಾದ ಎಲ್ಲರ ಪ್ರೀತಿಯ ಅಪ್ಪು ಅರ್ಥಾತ್ ನಟ ಪುನೀತ್ ರಾಜ್‌ಕುಮಾರ್ ಅವರ ಮಕ್ಕಳು ಅಪ್ಪನಂತೆ ನಟನೆಯ ಹಾದಿ ಹಿಡಿಯಲಿಲ್ಲ. ಬದಲಿಗೆ ಚಿಕ್ಕ ಮಗಳು ವಂದಿತಾ ಪುನೀತ್ ರಾಜ್ (Vanditha Puneeth Rajkumar) ಅಪ್ಪನ ಆಸೆಯನ್ನು ಈಗ ಈಡೇರಿಸಿದ್ದಾರೆ. ಅಪ್ಪ ಅಪ್ಪುವಿನ ಇಚ್ಛೆಯಂತೆ ಬಿಜಿನೆಸ್ ಶುರು ಮಾಡಿದ್ದು, ಇದರ ಇನ್ವಿಟೇಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
26
ಏನಿದು ಬಿಜಿನೆಸ್?
ವಂದಿತಾ ಅವರು ಖುದ್ದು ತಯಾರಿಸುವ ಹೋಮ್ ಬೇಕರಿ ಉದ್ಯಮ ಶುರು ಮಾಡಿದ್ದಾರೆ. ಇದಕ್ಕೆ ನುಕಾಸ್ ಕೆಫೆ' ಎಂದು ಹೆಸರು ಇಟ್ಟಿದ್ದಾರೆ. ಇದಕ್ಕಾಗಿ ಅವರು ಹೊಸ ಮಳಿಗೆ ತೆರೆದಿಲ್ಲ. ಬದಲಿಗೆ ಮನೆಯಲ್ಲಿಯೇ ಬೇಕರಿ ತಿನಿಸುವ ತಯಾರಿಸಿ ಅಗತ್ಯ ಇದ್ದವರಿಗೆ ಕಳುಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇರುವ ಮನೆಯಲ್ಲಿಯೇ ತಾವೇ ಖುದ್ದು ಹೊಸ ಹೊಸ ತಿನಿಸುಗಳನ್ನು ತಯಾರಿಸಿ ಆರ್ಡರ್ ಪಡೆದು ಮಾರಾಟ ಮಾಡುತ್ತಿದ್ದಾರೆ ವಂದಿತಾ ಪುನೀತ್ ರಾಜ್.
36
ಏನಿದು ನುಕಾಸ್?
ನುಕಾಸ್ (Nuka's Backery) ಹೆಸರು ಸ್ವಲ್ಪ ವಿಚಿತ್ರ ಎನ್ನಿಸುವುದು ಉಂಟು. ಆದರೆ ಈ ಹೆಸರಿನ ಹಿಂದೆ ಇರುವುದು ಅಪ್ಪ ಅಪ್ಪುವಿನ ನೆನಪು. ಹೌದು. ವಂದಿತಾ ಅವರನ್ನು ಅಪ್ಪ ಪುನೀತ್ ಸೇರಿದಂತೆ ಕುಟುಂಬಸ್ಥರು ನುಕ್ಕಿ ಎಂದೇ ಕರೆಯುತ್ತಿದ್ದರು. ಇದು ಅವರ ನಿಕ್ ನೇಮ್. ಇದೇ ಹೆಸರನ್ನು ತಮ್ಮ ಬೇಕರಿಗೂ ಇಟ್ಟುಕೊಂಡು ನುಕಾಸ್ ಎಂದು ನಾಮಕರಣ ಮಾಡಿದ್ದಾರೆ ವಂದಿತಾ.
ತಮ್ಮ ಅತ್ತಿಗೆ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರಿಗೆ ಪುನೀತ್ ಅವರು, ಇದೇ ಬಿಜಿನೆಸ್ ಮಾಡಲು ಪ್ರೇರೇಪಿಸಿದ್ದರಂತೆ. ಬೇಕಿಂಗ್ ತುಂಬಾ ಚೆನ್ನಾಗಿ ಮಾಡುವ ಗೀತಾ ಅವರಿಗೆ ಇದನ್ನು ಕಮರ್ಷಿಯಲ್ ಆಗಿ ತೆಗೆದುಕೊಳ್ಳಿ ಎಂದು ಅಪ್ಪು ಸಲಹೆ ಕೊಟ್ಟಿದ್ದರಂತೆ. ಆದರೆ ಆ ಸಮಯದಲ್ಲಿ ಕಮರ್ಷಿಯಲ್ ಆಗಿ ಮಾಡುವುದು ಹೇಗೆ ಎಂದು ತಮಗೆ ತಿಳಿದಿರಲಿಲ್ಲ ಎಂದು ಗೀತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ಆಸೆಯನ್ನು ಈಗ ಪುತ್ರಿ ವಂದಿತಾ ನೆರವೇರಿಸುತ್ತಿದ್ದಾರೆ.
56
ವೆಬ್ಸೈಟ್ ಆರಂಭ
ನುಕಾಸ್ಕೆಫೆ ಡಾಟ್ ಕಾಮ್ ವೆಬ್ಸೈಟ್ ಆರಂಭಿಸಲಾಗಿದ್ದು, ಇದರ ಮೂಲಕ ಆರ್ಡರ್ ಪಡೆದುಕೊಂಡು ವಂದಿತಾ ಬೇಕರಿ ಐಟಮ್ಸ್ ಡೆಲವರಿ ಮಾಡುತ್ತಾರೆ. ಯಾವುದಾದರೂ ಕಾರ್ಯಕ್ರಮ ಇದ್ದಲ್ಲಿ, ಅದರ ಘೋಷವಾಕ್ಯ (ಥೀಮ್) ತಕ್ಕಂತೆ ಬೇಕರಿ ತಿನಿಸುಗಳನ್ನು ಮಾಡಿಕೊಡುವಲ್ಲಿಯೂ ವಂದಿತಾ ನಿಸ್ಸೀಮರು. ಒಬ್ಬರೇ ತಯಾರಿಸುವ ಕಾರಣ, ಆರ್ಡರ್ ಕೊಡುವವರು ಸ್ವಲ್ಪ ಬೇಗನೇ ಕೊಡಬೇಕು ಎನ್ನುವುದು ಅವರ ಮನವಿ.
66
ಶಕ್ತಿಧಾಮದಲ್ಲಿ ಸ್ವಾವಲಂಬನೆ
ಅಂದಹಾಗೆ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರು ಕಟ್ಟಿಬೆಳೆಸಿದ ಶಕ್ತಿಧಾಮದಲ್ಲಿ ಮಹಿಳೆಯರಿಗಾಗಿ ವಿವಿಧ ರೀತಿಯ ತರಬೇತಿ ನೀಡಲಾಗುತ್ತಿದೆ. ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವವರು ಗೀತಾ. ಗೀತಾ ಅವರು ಇಲ್ಲಿಯ ಹೆಣ್ಣುಮಕ್ಕಳನ್ನು ಸ್ವಾವಲಂಬಿ ಮಾಡಲು ಬೇಕಿಂಗ್ ಸೇರಿದಂತೆ ವಿವಿಧ ತರಬೇತಿ ನೀಡುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.