ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್ ಇಂಕ್‌ನ ಸಿಇಒ ಸುಂದರ್ ಪಿಚೈ ವಿಶ್ವದಾದ್ಯಂತ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳಲ್ಲಿ ಒಬ್ಬರು. ಸುಂದರ್ ಪಿಚೈ , 2022 ರಲ್ಲಿ USD 22.6 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟೆಕ್ ಎಕ್ಸಿಕ್ಯೂಟಿವ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
ಇದು ಭಾರತೀಯ ಕರೆನ್ಸಿಯಲ್ಲಿ ಒಟ್ಟು 1854 ಕೋಟಿ ರೂ. ಆಗಿದೆ. ಅಂದರೆ ಸುಂದರ್ ಪಿಚೈ ದಿನಕ್ಕೆ 5 ಕೋಟಿ ರೂ. ಗೂ ಹೆಚ್ಚು ಆದಾಯವನ್ನು ಗಳಿಸುತ್ತಾರೆ. ಐಐಟಿ ಖರಗ್‌ಪುರದಿಂದ ಕೆಮಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿರುವ ಸುಂದರ್ ಪಿಚೈ, 2019ರಲ್ಲಿ ಗೂಗಲ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಸುಂದರ್ ಪಿಚೈ, ಜೂನ್ 10, 1972ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದರು. ಚೆನ್ನೈನಲ್ಲಿ ಬೆಳೆದರು. ಸುಂದರ್ ಪಿಚೈ ಐಐಟಿಯಿಂದ ಬಿಟೆಕ್ ಮುಗಿಸಿ ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ನಂತರ ಅಮೆರಿಕದ ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಮಾಡಿದರು. 2004ರಲ್ಲಿ ಗೂಗಲ್‌ಗೆ ಸೇರಿದರು.
ಸುಂದರ್ ಪಿಚೈ ಪತ್ನಿ ಅಂಜಲಿ ಪಿಚೈ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಜಲಿ ಅವರ ಸಲಹೆಯಿಂದಲೇ ಸುಂದರ್ ಪಿಚೈ ಗೂಗಲ್‌ನ ಸಿಇಒ ಆಗುವುದನ್ನು ಖಾತ್ರಿಪಡಿಸಿಕೊಂಡರು ಎಂಬುದು ಅನೇಕರಿಗೆ ತಿಳಿದಿಲ್ಲ.
ಸುಂದರ್ ಪಿಚೈ, ಮೈಕ್ರೋಸಾಫ್ಟ್‌ಗೆ ಸೇರಲು ಗೂಗಲ್‌ನಿಂದ ಹೊರಬರಲು ಯೋಚಿಸುತ್ತಿದ್ದ ಸಮಯವಿತ್ತು ಆದರೆ ಅಂಜಲಿ ಅವರು ಗೂಗಲ್‌ನಲ್ಲಿ ಉಳಿಯಲು ಸಲಹೆ ನೀಡಿದ್ದರು.
ಆ ನಂತರದ ವರ್ಷಗಳಲ್ಲಿ ಸುಂದರ್ ಪಿಚೈ ಗೂಗಲ್‌ನಲ್ಲಿ ಉನ್ನತ ಸ್ಥಾನಕ್ಕೇರಿದರು. ಪ್ರಸ್ತುತ ದಿನಕ್ಕೆ 5 ಕೋಟಿ ರೂ. ಗೂ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ,
ಅಂಜಲಿ ಪಿಚೈ ಮತ್ತು ಸುಂದರ್ ಪಿಚೈ ಮೊದಲು ಐಐಟಿ ಖರಗ್‌ಪುರದಲ್ಲಿ ಭೇಟಿಯಾದರು. ಆ ನಂತರ ವಿವಾಹವಾದರು. ಲಿಂಕ್ಡ್‌ಇನ್ ಖಾತೆಯ ಪ್ರಕಾರ, ಅಂಜಲಿ ಪಿಚೈ ಇಂಟ್ಯೂಟ್ ಎಂಬ ಸಾಫ್ಟ್‌ವೇರ್ ಕಂಪನಿಯಲ್ಲಿ ಬಿಸಿನೆಸ್ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಜಲಿ ರಾಜಸ್ಥಾನದ ಕೋಟಾದಿಂದ ಬಂದವರು ಮತ್ತು ಸುಂದರ್ ಪಿಚೈ ಅವರಂತೆಯೇ ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಆಕೆಯ ತಂದೆ ಕೋಟಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿ. ಅಂಜಲಿ ಕೂಡ 1999 ರಿಂದ 2002ರ ವರೆಗೆ ಆಕ್ಸೆಂಚರ್‌ನಲ್ಲಿ ಕೆಲಸ ಮಾಡಿದರು.