ಜಾಮ್‌ನಗರದ ತಾಪ ಹೆಚ್ಚಿಸಿದ ರಿಹಾನ್ನಾ ಡಾನ್ಸ್‌: ಇವಳೇನು ಚಡ್ಡಿ ಹಾಕಿಲ್ವಾ ಎಂದ ನೆಟ್ಟಿಜೆನ್ಸ್

First Published | Mar 3, 2024, 1:05 PM IST

ಮುಕೇಶ್ ಅಂಬಾನಿ ಕೊನೆ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ನಡೆದಿದೆ.  ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲಿ ಎಲ್ಲಿ ನೋಡಿದರಲ್ಲಿ ಈ ಸಮಾರಂಭದ ಅದ್ದೂರಿ ದೃಶ್ಯಾವಳಿಯ ತುಣುಕುಗಳೇ ಸಿಗುತ್ತಿವೆ. 

ಮುಕೇಶ್ ಅಂಬಾನಿ ಕೊನೆ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ನಡೆದಿದೆ.  ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲಿ ಎಲ್ಲಿ ನೋಡಿದರಲ್ಲಿ ಈ ಸಮಾರಂಭದ ಅದ್ದೂರಿ ದೃಶ್ಯಾವಳಿಯ ತುಣುಕುಗಳೇ ಸಿಗುತ್ತಿವೆ. 

ಮಾರ್ಕ್ ಜೂಕರ್‌ಬರ್ಗ್, ಬಿಲ್‌ಗೇಟ್ಸ್‌ ಸೇರಿದಂತೆ ಜಗತ್ತಿನ ಉದ್ಯಮ ಲೋಕದ ಬಹುತೇಕ ಗಣ್ಯರು ಹಾಲಿವುಡ್ ಬಾಲಿವುಡ್ ತಾರೆಯರು ಈ ಸಮಾರಂಭದಲ್ಲಿ ಭಾಗಿಯಾಗಿ ಭಾರತೀಯ ಶೈಲಿಯ ಭೋಜನದ ಜೊತೆ ಅತಿಥ್ಯ ಸ್ವೀಕರಿಸಿದ್ದಾರೆ, ಕೆಲವರು ಅದ್ಭುತ ನೃತ್ಯ ಪ್ರದರ್ಶನವನ್ನೂ ನೀಡಿದ್ದಾರೆ. ಅದರಲ್ಲೂ ಜನರ ಹುಚ್ಚೆಬ್ಬಿಸುವಂತೆ ಮಾಡಿದ್ದು, ಪಾಪಾ ಗಾಯಕಿ ರಿಹಾನ್ನಾ ಪ್ರದರ್ಶನ.

Tap to resize

ರಿಹಾನ್ನಾ  ತನ್ನ ಸರ್ವಕಾಲಿಕ ಹಿಟ್ ಹಾಡುಗಳಾದ ರೂಡ್ ಬಾಯಿ, ಪೋರ್ ಇಟ್ ಅಪ್ ಹಾಗೂ ಡೈಮಂಡ್ ಮುಂತಾದ ಹಾಡುಗಳನ್ನು ಹಾಡುವ ಮೂಲಕ ಸಖತ್ ಆಗಿ ಪ್ರದರ್ಶನ ನೀಡಿದ್ದಾರೆ. ರಿಹಾನ್ನಾ ಪ್ರದರ್ಶನದ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 

ಇನ್ನು ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಕೂಡ ರಿಹನ್ನಾ ಜೊತೆ ಬಿಂದಾಸ್ ಆಗಿ ಮೈ ಕುಣಿಸಿದ್ದು, ಇದನ್ನು ಸ್ವತ ಜಾನ್ವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಈ ಮಹಿಳೆ ದೇವತೆ ಎಂದು ಬರೆದುಕೊಂಡಿದ್ದಾಳೆ. 


ಈ ಪಾಪ್ ಗಾಯಕಿ ತನ್ನ ಗಾಯನ ಮತ್ತು ವೇದಿಕೆಯಯಲ್ಲಿ ಡಾನ್ಸ್‌ನಿಂದ ಎಲ್ಲರನ್ನೂ ಆಕರ್ಷಿಸಿದ್ದು, ಈ ಅದ್ಭುತ ಪ್ರದರ್ಶನದ ಸೆಟ್ಟಿಂಗ್ ಅನ್ನು ಬಹಳ ಅದ್ದೂರಿಯಾಗಿ ಯೋಜಿಸಲಾಗಿತ್ತು. ರಿಹಾನ್ನಾ ಈ ಅದ್ದೂರಿ ಪ್ರದರ್ಶನಕ್ಕಾಗಿ ಪಾರದರ್ಶಕವೆನಿಸುವ ಮಿರಿ ಮಿರಿ ಮಿಂಚುವ ಸೈಡ್‌ ತೆರೆದಿರುವಂತೆಹ ಬಟ್ಟೆಯನ್ನು ಧರಿಸಿದ್ದರು. 

Rihanna

ತಮ್ಮ ಪ್ರದರ್ಶನದ ನಂತರ ಮಾತನಾಡಿದ ರಿಹಾನ್ನಾ ತನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು, ಇಂತಹ ಒಂದು ಸುಂದರ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ  ಎಂದ ಅವರು ನವಜೀವನಕ್ಕೆ ಕಾಲಿರಿಸಲಿರುವ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು. 

ರಿಹಾನ್ನಾಈ ಸಮಾರಂಭದಲ್ಲಿ ಪ್ರದರ್ಶನ ನೀಡಲು 74 ಸಾವಿರ ಕೋಟಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 29 ರಂದು ಪ್ರದರ್ಶನ ನೀಡುವುದಕ್ಕಾಗಿ ಜಾಮ್ನಾಗರಕ್ಕೆ ತಮ್ಮ ತಂಡದೊಂದಿಗೆ ಆಗಮಿಸಿದ ರಿಹಾನ್ನಾ ಅವರ ಭಾರಿ ಲಗೇಜ್‌ಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದವು

ಇನ್ನು ಸಾಮಾಜಿಕ ಜಾಲತಾಣದಲ್ಲಿ ರಿಹಾನ್ನಾ ಡಾನ್ಸ್ ನೋಡಿದ ಜನ ಆಕೆಯ ಬಟ್ಟೆ ಬಗ್ಗೆ ಕಾಮೆಂಟ್ ಹಾಕಿದ್ದು, ಆಕೆ ಚಡ್ಡಿ ಹಾಕಿಲ್ವಾ ಎಂದೆಲ್ಲಾ ಕೇಳ್ತಿದ್ದಾರೆ.  ರಿಹಾನ್ನಾ ಈ ಪ್ರದರ್ಶನಕ್ಕಾಗಿ ಗಿಳಿ ಹಸಿರು ಬಣ್ಣದ ಪಾರದರ್ಶಕ ಟಾಪ್, ತಿಳಿ ಗುಲಾಬಿ ಬಣ್ಣದ ಪ್ಯಾಂಟ್ ಧರಿಸಿದ್ದರು.

Rihanna

ರಿಹಾನ್ನಾ ತಂಡದಲ್ಲಿ ಡ್ರಮರ್ ಆಗಿ ಕೆಲಸ ಮಾಡುವ ಇರೀಕ್ ಬೂಟ್ಸ್ ಕೂಡ ಈ ಸಮಾರಂಭದ ಬಗ್ಗೆ ಬಹಳ ಖುಷಿ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಎಲ್ಲರೂ ವೀ ಲವ್ ಯೂ ಎಂದು ಕೂಗುವ ಮೂಲಕ ಸ್ವಾಗತಿಸಿದ್ದರು. ನನಗೆ ಇಲ್ಲಿನ ಅತಿಥ್ಯ ಅದರಲ್ಲೂ ವಿಶೇಷವಾಗಿ ಇಲ್ಲಿ ಸರ್ವ್ ಮಾಡಿದ ಫುಡ್ ತುಂಬಾ ಇಷ್ಟವಾಯ್ತು ಎಂದು ಪ್ರತಿಕ್ರಿಯಿಸಿದ್ದಾರೆ.

Latest Videos

click me!