ಅನಂತ್- ರಾಧಿಕಾ ನಿಶ್ಚಿತಾರ್ಥಕ್ಕೆ ಉಂಗುರ ತಂದವರು ಅಂಬಾನಿ ಕುಟುಂಬಕ್ಕೆ ಅದೃಷ್ಟವಂತೆ, ಯಾರವರು ಗೆಸ್‌ ಮಾಡಿ!

Published : Feb 26, 2024, 03:12 PM IST

ಅಂಬಾನಿ ಕುಟುಂಬದ ಕೊನೆಯ ಕುಡಿ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಮದುವೆಗೆ 2  ತಿಂಗಳಿಗೂ ಮುನ್ನ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿದೆ. ಇವರಿಬ್ಬರ ನಿಶ್ಚಿತಾರ್ಥದ ದಿನ ಉಂಗುರ ತಂದುಕೊಟ್ಟವರು ಅಂಬಾನಿ ಕುಟುಂಬಕ್ಕೆ ಅದೃಷ್ಠವಂತೆ. ಯಾರವರು ಇಲ್ಲಿದೆ ಮಾಹಿತಿ.

PREV
16
ಅನಂತ್- ರಾಧಿಕಾ ನಿಶ್ಚಿತಾರ್ಥಕ್ಕೆ ಉಂಗುರ ತಂದವರು ಅಂಬಾನಿ ಕುಟುಂಬಕ್ಕೆ ಅದೃಷ್ಟವಂತೆ, ಯಾರವರು ಗೆಸ್‌ ಮಾಡಿ!

ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿಯೊಂದಿಗೆ ವಿವಾಹವಾಗಲಿದ್ದಾರೆ. ಅನಂತ್ ಮತ್ತು ರಾಧಿಕಾ ಕಳೆದ ವರ್ಷ ರಾಜಸ್ಥಾನದಲ್ಲಿ ಸಾಂಪ್ರದಾಯಿಕ ಗುಜರಾತಿ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡರು. ಜುಲೈ 12ರಂದು ಮುಂಬೈನಲ್ಲಿ ಅದ್ಧೂರಿ ವಿವಾಹ ನಡೆಯಲಿದೆ. ಅದಕ್ಕೂ ಮುನ್ನ ಮಾರ್ಚ್ ನಲ್ಲಿ ವಿವಾಹಪೂರ್ವ ಸೆಲೆಬ್ರೇಷನ್‌ ನಡೆಯಲಿದೆ.

26

ಆದರೆ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥಕ್ಕೆ ಉಂಗುರ ತಂದವರು ಯಾರು ಗೊತ್ತಾ?  ದಂಪತಿಗೆ ಉಂಗುರವನ್ನು ಹೊತ್ತ ಸದಸ್ಯ ಅಂಬಾನಿ ಕುಟುಂಬಕ್ಕೆ ಅದೃಷ್ಟ ಎಂದು ಪರಿಗಣಿಸಲಾಗಿದೆ. ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ವರನ ಸಹೋದರಿ ಇಶಾ ಅಂಬಾನಿ ಪಿರಮಾಲ್ ಅವರು ಉಂಗುರವನ್ನು ಹೊಂದಿರುವ ವ್ಯಕ್ತಿಯನ್ನು ಪರಿಚಯಿಸುತ್ತಿದ್ದಾರೆ. 

36

ಇಶಾ ಅಂಬಾನಿ ಪಿರಮಾಲ್  ಕರೆದ ತಕ್ಷಣ, ಅವರ ಸಾಕು ನಾಯಿ ಪ್ರವೇಶಿಸುತ್ತದೆ. ಅಂಬಾನಿ ಕುಟುಂಬದ ಮುದ್ದಿನ ನಾಯಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥದ ಉಂಗುರವನ್ನು ತಂದಿತ್ತು. ನಾಯಿಯ ಕುತ್ತಿಗೆಗೆ ಕೆಂಪು ಸ್ಕಾರ್ಫ್ ಕಟ್ಟಲಾಗಿತ್ತು, ಅದಕ್ಕೆ ನಿಶ್ಚಿತಾರ್ಥದ ಉಂಗುರವನ್ನು ಕಟ್ಟಲಾಗಿತ್ತು. ನಾಯಿಯು ವೇದಿಕೆಯನ್ನು ತಲುಪಿದಾಗ, ಅನಂತ್ ಅಂಬಾನಿ ನಿಶ್ಚಿತಾರ್ಥದ ಉಂಗುರವನ್ನು ಹೊರತೆಗೆದರು. 

46

ಇನ್ನು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗನ ನಿಶ್ಚಿತಾರ್ಥದಲ್ಲಿ ನೃತ್ಯ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸದ್ಯ ಅನಂತ್-ರಾಧಿಕಾ ವಿವಾಹ ಪೂರ್ವ ಸಮಾರಂಭಕ್ಕೆ ಸಜ್ಜಾಗಿದ್ದಾರೆ. ವಿವಾಹ ಪೂರ್ವ ಸಮಾರಂಭವು ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3 ರ ನಡುವೆ ನಡೆಯಲಿದೆ. ಅದಕ್ಕಾಗಿ ತಯಾರಿ ನಡೆಯುತ್ತಿದೆ.

56

ಈ ವಿವಾಹ ಪೂರ್ವ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್  ಅಮೀರ್ ಖಾನ್ ಮತ್ತು ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.  ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರೊಂದಿಗೆ ವಿವಾಹ ಪೂರ್ವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

66

ಮಾತ್ರವಲ್ಲ ವಿಶೇಷ ಆಹ್ವಾನಿತರಷ್ಟೇ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಲಿದ್ದು, ಸುಮಾರು 1000 ಗಣ್ಯರು ಇರಲಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಡೋಬ್ ಸಿಇಒ ಶಾಂತನು ನಾರಾಯಣ್, ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಮತ್ತು ವಾಲ್ಟ್ ಡಿಸ್ನಿ ಸಿಇಒ ಬಾಬ್ ಇಗರ್ ಸೇರಿದಂತೆ ಭಾರತೀಯ ಉದ್ಯಮಿಗಳು ಕೂಡ ಭಾಗವಹಿಸಲಿದ್ದಾರೆ.

Read more Photos on
click me!

Recommended Stories