ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಅಮೆಜಾನ್ ಮಹತ್ವದ ಹೆಜ್ಜೆ; ಹೂಡಿಕೆ ಮಾಡ್ತಿರೋ ಹಣವೆಷ್ಟು?

Published : Jun 20, 2025, 03:34 PM IST

ಅಮೆಜಾನ್ ಭಾರತದಲ್ಲಿ ಹೂಡಿಕೆ ಮಾಡಲಿದೆ. ಇದರಿಂದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗಾವಕಾಶ, ರಫ್ತು ಅವಕಾಶಗಳು ಹೆಚ್ಚಾಗಲಿವೆ. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲಿದೆ.

PREV
16
ಭಾರತದಲ್ಲಿ ಅಮೆಜಾನ್

ಅಮೆಜಾನ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ನಗರದ ಜನರಿಗೆ ಮಾತ್ರವಲ್ಲ, ಗ್ರಾಮೀಣ ಜನರಿಗೂ ಸಮಯಕ್ಕೆ ಸರಿಯಾಗಿ ಸಾಮಾನುಗಳನ್ನ ತಲುಪಿಸುವ ಅಮೆಜಾನ್ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಇದರಿಂದ ನೂರಾರು ಹಳ್ಳಿಗಳ ಮೂಲಸೌಕರ್ಯ ಸುಧಾರಿಸಿ, ಸಾವಿರಾರು ಗ್ರಾಮಸ್ಥರಿಗೆ ಉದ್ಯೋಗ ಸಿಗಲಿದೆ.

26
2 ಸಾವಿರ ಕೋಟಿ ಹೂಡಿಕೆ

ಈ ವರ್ಷ ₹2 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಅಮೆಜಾನ್ ಘೋಷಿಸಿದೆ. ಈ ಹಣವನ್ನು ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಸುಧಾರಿಸಲು, ಕಾರ್ಮಿಕರ ಹಿತರಕ್ಷಣೆಗೆ ಮತ್ತು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುವುದು ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.

36
ಉದ್ಯೋಗಾವಕಾಶಗಳು

ಅಮೆಜಾನ್ ತನ್ನ ಫಿಲ್‌ಮೆಂಟ್ ಸೆಂಟರ್‌ಗಳು, ಸಾರ್ಟೇಶನ್ ಹಬ್‌ಗಳು ಮತ್ತು ವಿತರಣಾ ಜಾಲವನ್ನು ವಿಸ್ತರಿಸುವುದರಿಂದ ಹಲವು ರಾಜ್ಯಗಳಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಅಮೆಜಾನ್‌ನ 'ಸಂಭವ್ ವೆಂಚರ್ ಫಂಡ್' ಮೂಲಕ ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೂಡಿಕೆ ಹೆಚ್ಚಾಗಲಿದೆ. ಇದುಖಾಸಗಿ ಮತ್ತು ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಲಿದೆ.

46
ರಫ್ತು ಅವಕಾಶ:

ಭಾರತದಿಂದ ₹6,66,000 ಕೋಟಿ ಮೌಲ್ಯದ ಸರಕುಗಳನ್ನು ವಿತರಣೆ ಮತ್ತು ರಫ್ತು ಮಾಡುವ ಗುರಿಯನ್ನು 2030ರ ವೇಳೆಗೆ ತಲುಪುವ ಯೋಜನೆಯಿದೆ ಎಂದು ಅಮೆಜಾನ್ ತಿಳಿಸಿದೆ. ಬಟ್ಟೆ, ಕರಕುಶಲ ವಸ್ತುಗಳು, ಆಭರಣಗಳು, ಆಯುರ್ವೇದ/ಮೂಲಿಕೆ ಉತ್ಪನ್ನಗಳು ಮತ್ತು ಡಿಜಿಟಲ್ ಸಾಧನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅಮೆಜಾನ್ ಅವಕಾಶ ಕಲ್ಪಿಸಲಿದೆ. ಗ್ರಾಮೀಣ ಉತ್ಪಾದಕರು ಮತ್ತು MSMEಗಳಿಗೆ ಇದು ವರದಾನವಾಗಲಿದೆ.

56
ಗ್ರಾಮೀಣರಿಗೆ ಲಾಭಗಳು

ಹೊಸ ಫಿಲ್‌ಮೆಂಟ್ ಮತ್ತು ವಿತರಣಾ ಕೇಂದ್ರಗಳು ಹೆಚ್ಚಾಗಿ ನಗರಗಳ ಸಮೀಪದ ಹಳ್ಳಿಗಳಲ್ಲಿ ಸ್ಥಾಪನೆಯಾಗಲಿವೆ. ಇದರಿಂದ ಗ್ರಾಮೀಣ ಉದ್ಯೋಗ ಹೆಚ್ಚಾಗುತ್ತದೆ. ಪ್ಯಾಕಿಂಗ್, ಲೋಡಿಂಗ್, ಮತ್ತು ವಿತರಣೆಯಂತಹ ಕೆಲಸಗಳು ಗ್ರಾಮೀಣ ಯುವಕರಿಗೆ ಹೆಚ್ಚಾಗಿ ದೊರೆಯಲಿವೆ. ಮಹಿಳೆಯರಿಗೂ ಸುರಕ್ಷಿತ ವಾತಾವರಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ.

66
ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ
  • ಸುರಕ್ಷಿತ ಕೆಲಸದ ವಾತಾವರಣ ಮತ್ತು ಕಲ್ಯಾಣ ಯೋಜನೆಗಳ ಮೂಲಕ ಗ್ರಾಮೀಣ ಜೀವನ ಮಟ್ಟ ಸುಧಾರಿಸುತ್ತದೆ.
  • ಇಂಟರ್ನೆಟ್ ಮತ್ತು ಡಿಜಿಟಲ್ ಸಾಧನಗಳ ಮೂಲಕ ಕೌಶಲ್ಯ ಅಭಿವೃದ್ಧಿ, ಗ್ರಾಹಕ ಸೇವೆಯಂತಹ ಉದ್ಯೋಗಗಳು ಸೃಷ್ಟಿಯಾಗುತ್ತವೆ.
  • ರಸ್ತೆ, ಕಟ್ಟಡ, ಗೋದಾಮುಗಳಂತಹ ನಿರ್ಮಾಣಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ.

ಇಂತಹ ಹೂಡಿಕೆಗಳು ಭಾರತದ ಹಳ್ಳಿಗಳನ್ನು ಜಾಗತಿಕ ಮಟ್ಟದ ಆರ್ಥಿಕ ಕೇಂದ್ರಗಳನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿವೆ ಎಂದು ಹೇಳಬಹುದು.

Read more Photos on
click me!

Recommended Stories