ಆಗಸ್ಟ್ 2ರಂದು ಫ್ರೆಂಡ್‌ಶಿಪ್ ಡೇ ಆಚರಿಸಲಾಗುತ್ತಿದೆ. ಇದೀಗ ಸ್ನೇಹಿತರ ದಿನಾಚರಣೆಗೆ ಏರ್‌ಟೆಲ್ ಭರ್ಜರಿ ಆಫರ್ ಘೋಷಿಸಿದೆ. ವಿನೂತನ ಹಾಗೂ ಪ್ರೀತಿಯ ಗೆಳೆಯ ಗೆಳತಿಯರಿಗಾಗಿ ಬಿಡುಗಡೆ ಮಾಡಿದ ಈ ಆಫರ್‌ನ ಸೌಲಭ್ಯವೇನು?
ಆಗಸ್ಟ್ ತಿಂಗಳ ಮೊದಲ ಭಾನುವಾರ ಫ್ರೆಂಡ್‌ಶಿಪ್ ಡೇ. ಈ ಬಾರಿ ಆಗಸ್ಟ್ 2 ರಂದು ಫ್ರೆಂಡ್‌ಶಿಪ್ ಡೇ ಸಂಭ್ರಮ. ವಿಶ್ವದೆಲ್ಲೆಡೆ ಸ್ನೇಹಿತರ ದಿನಾಚರಣೆ ತಯಾರಿಗಳು ನಡೆಯುತ್ತದೆ.ಪ್ರೀತಿಯ ಗೆಳೆಯರಿಗೆ ಗಿಫ್ಟ್ ಸೇರಿದಂತೆ ಹಲವು ಅಚ್ಚರಿಗಳನ್ನು ನೀಡುತ್ತಾರೆ. ಇದೀಗ ಫ್ರೆಂಡ್‌ಶಿಫ್ ಡೇ ಮತ್ತಷ್ಟು ಸ್ಮರಣೀಯವಾಗಿಸಲು ಏರ್‌ಟೆಲ್ ಹೊಸ ಆಫರ್ ಜಾರಿಗೆ ತಂದಿದೆ.
25
ರೀಚಾರ್ಜ್‌ಗೆ ಪ್ರೀತಿಯ ಸ್ಪರ್ಶ
ಗ್ರಾಹಕರು ಫ್ರೆಂಡ್‌ಶಿಪ್ ಡೇ ಆಫರ್ ಮೂಲಕ ಸ್ನೇಹಿತರಿಗೆ ಡಿಜಿಟಲ್ ಫ್ರೆಂಡ್‌ಶಿಪ್ ಬ್ಯಾಂಡ್ ಕಳುಹಿಸಿ ಶುಭಕೋರುವ ವಿಶೇಷ ಆಫರ್ ಜಾರಿಗೆ ತಂದಿದೆ. ಗ್ರಾಹಕರು ಏರ್ ಟೆಲ್ ಆ್ಯಪ್ ಮೂಲಕ ತಮ್ಮ ಸ್ನೇಹಿತರ ಪ್ರೀಪೇಯ್ಡ್ ಸಂಖ್ಯೆಗೆ ರೀಚಾರ್ಜ್ ಮಾಡುವ ಜೊತೆಗೆ, ಅವರಿಗೆ ವಿಶೇಷವಾದ ಡಿಜಿಟಲ್ ಫ್ರೆಂಡ್ ಶಿಪ್ ಬ್ಯಾಂಡ್ ಕಳುಹಿಸಿ ಶುಭ ಕೋರಬಹುದಾಗಿದೆ. ದೈನಂದಿನ ಸಾಮಾನ್ಯ ರೀಚಾರ್ಜ್ ಪ್ರಕ್ರಿಯೆಗೆ ಪ್ರೀತಿಯ ಸ್ಪರ್ಶ ನೀಡುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ.
35
ಫ್ರೆಂಡ್‌ಶಿಪ್ ಬ್ಯಾಂಡ್ ಆಯ್ಕೆ ಮಾಡಿ
ಈ ಫ್ರೆಂಡ್‌ಶಿಪ್ ಬ್ಯಾಂಡ್ ಶುಭಾಶಯಕ್ಕಾಗಿ ಗ್ರಾಹಕರು ಏರ್‌ಟೆಲ್ ಆ್ಯಪ್ ಮೂಲಕ ತಮ್ಮ ಸ್ನೇಹಿತರ ಏರ್‌ಟೆಲ್ ಪ್ರೀಪೇಯ್ಡ್ ಸಂಖ್ಯೆಯನ್ನು ನಮೂದಿಸಿ, ಸೂಕ್ತವಾದ ಪ್ರಿಪೇಡ್ ಪ್ಲಾನ್ ಆಯ್ಕೆ ಮಾಡಿ ರೀಚಾರ್ಜ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಳಿಕ ತಮ್ಮ ಗೆಳೆತನದ ಸ್ವರೂಪಕ್ಕೆ ಹೊಂದುವಂತಹ ವಿವಿಧ ಟೈಟಲ್‌ನ ಡಿಜಿಟಲ್ ಫ್ರೆಂಡ್ ಶಿಪ್ ಬ್ಯಾಂಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದರಲ್ಲಿ ಜಿಮ್ ಬಡ್ಡಿ, ಮೀಮ್ ಡೀಲರ್, ಗೆಡಿ ಪಾರ್ಟ್ ನರ್, ಫುಡಿ ಫ್ರೆಂಡ್, ಗಾಸಿಪ್ ಸ್ಪಿಲ್ಲಿಂಗ್ ಮತ್ತು ಫ್ರೀ ಥೆರಪಿಸ್ಟ್ ಎಂಬಿತ್ಯಾದಿ ಫನ್ನಿ ಬ್ಯಾಂಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಆಯ್ಕೆ ಮಾಡಿದ ಡಿಜಿಟಲ್ ಬ್ಯಾಂಡ್ ಅನ್ನು ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ತಕ್ಷಣವೇ ಸ್ನೇಹಿತರಿಗೆ ಕಳುಹಿಸಬಹುದು. ಎಸ್‌ಎಂಎಸ್ ಮೂಲಕ ಕಳುಹಿಸುವಾಗ ಶುಭಾಶಯದ ಜೊತೆಗೆ ಕಳುಹಿಸಿದವರ ಹೆಸರೂ ಸೇರ್ಪಡೆಯಾಗಲಿದ್ದು, ಸಂದೇಶಕ್ಕೆ ವೈಯಕ್ತಿಕ ಮೆರುಗು ನೀಡಲಿದೆ.
55
ಫ್ರೆಂಡ್‌ಶಿಪ್ ಬ್ಯಾಂಡ್‌ಗೆ ಡಿಜಿಟಲ್ ಸ್ಪರ್ಶ
ಇಷ್ಟೇ ಅಲ್ಲದೆ, ಈ ಬ್ಯಾಂಡ್ ಪಡೆದ ಸ್ನೇಹಿತರು ಸಹ ಅಭಿಯಾನದ ಪುಟದ ಮೂಲಕ ತಮ್ಮ ಇತರ ಸ್ನೇಹಿತರಿಗೆ ಬ್ಯಾಂಡ್ ಹಾಗೂ ರೀಚಾರ್ಜ್ ಉಡುಗೊರೆ ನೀಡಿ ಈ ಸರಪಳಿಯನ್ನು ಮುಂದುವರಿಸಬಹುದಾಗಿದೆ. ಹಿಂದಿನ ಕಾಲದಲ್ಲಿ ಕೈಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಸಾಂಪ್ರದಾಯಿಕ ಆಚರಣೆಗೆ ಇಂದಿನ ಡಿಜಿಟಲ್ ಜಗತ್ತಿಗೆ ತಕ್ಕಂತೆ ಏರ್ ಟೆಲ್ ಹೊಸ ರೂಪ ನೀಡಿದೆ. ಸಾಮಾನ್ಯ ರೀಚಾರ್ಜ್ ಅನ್ನು ನೆನಪಿನಲ್ಲಿ ಉಳಿಯುವಂತಹ ಆಚರಣೆಯನ್ನಾಗಿ ಪರಿವರ್ತಿಸಿರುವ ಈ ಅಭಿಯಾನವು, ಸ್ನೇಹಿತರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.