ಮಾಜಿ ನಟಿ ಆಸಿನ್ ಅವರ ಪತಿ ರಾಹುಲ್ ಶರ್ಮಾ, ಮೊಬೈಲ್ ಫೋನ್ ಕ್ಷೇತ್ರದ ಅತಿದೊಡ್ಡ ಕಂಪೆನಿ ಮೈಕ್ರೋಮ್ಯಾಕ್ಸ್ ಸಹ- ಸಂಸ್ಥಾಪರಾಗಿದ್ದಾರೆ. ಅಂತರಾಷ್ಟ್ರೀಯ ಉತ್ಪನ್ನವನ್ನು ಭಾರತಕ್ಕಡ ತಂದ ಬಳಿಕ ಕೆಲವೇ ವರ್ಷಗಳಲ್ಲಿ ಈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತುಂಬಾ ಜನಪ್ರಿಯತೆ ಪಡೆಯಿತು. ನೋಕಿಯಾ, ಸ್ಯಾಮ್‌ಸಂಗ್ ಗಳಿಗೂ ಪ್ರತಿಸ್ಪರ್ಧೆ ಒಡ್ಡಿ ಉತ್ತಮ ಮಾರಾಟ ಸಾಧಿಸಿತು. ಆಗ ವರ್ಷಕ್ಕೆ 12,000 ಕೋಟಿ ರೂ.ದಿಂದ 15,000 ಕೋಟಿ ರೂ.ಗಳವರೆಗೂ ವ್ಯವಹಾರ ಮಾಡುತ್ತಿತ್ತು. ರಾಹುಲ್ ಹೇಳುವಂತೆ, ವಿಶ್ವದ ಟಾಪ್ 10 ಮೊಬೈಲ್ ಕಂಪನಿಗಳಲ್ಲಿ ಮೈಕ್ರೋಮ್ಯಾಕ್ಸ್ ಕೂಡ ಒಂದಾಗಿತ್ತು. ಈ ಬೆಳವಣಿಗೆಯ ಅವಧಿಯಲ್ಲಿ ಅವರು ನಟಿ ಆಸಿನ್ ಅವರನ್ನು ವಿವಾಹವಾದರು, ನಂತರ ಆಸಿನ್ ಚಲನಚಿತ್ರೋದ್ಯಮದಿಂದ ಹಿಂದೆ ಸರಿದರು.