75th Independence Day ತ್ರಿವರ್ಣ ಧ್ವಜದ ರಂಗಿನಲ್ಲಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ
First Published | Aug 15, 2022, 4:50 PM ISTಆಗಸ್ಟ್ 15 ರಂದು ನಮ್ಮ ದೇಶ ಸ್ವಾತಂತ್ರ್ಯದ 75 ವರ್ಷಗಳನ್ನು (75th Independence Day) ಪೂರೈಸಿದ ಸಂತೋಷದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಹಬ್ಬದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜಾರೋಹಣ ಹಮ್ಮಿಕೊಳ್ಳಲು ಕೇಂದ್ರ ಸರಕಾರ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿತ್ತು. ಈ ಸಂದರ್ಭದಲ್ಲಿ ದೇಶದ ಅತಿದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಕೂಡ ತ್ರಿವರ್ಣ ಧ್ವಜದ ಬೆಳಕಿನಿಂದ ಡೆಕೊರೇಟ್ ಮಾಡಲಾಗಿತ್ತು. ಆಂಟಿಲಿಯಾವನ್ನು ಬಹಳ ಸುಂದರವಾಗಿ ಅಲಂಕರಿಸಿದ್ದು, ಅಂಬಾನಿ ಅರಮನೆ ತ್ರಿವರ್ಣ ಧ್ವಜದ ಬೆಳಕಿನಲ್ಲಿ ಬೆಳಗುತ್ತಿರುವ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.