ಉದ್ಯಮಿ ಅನಿಲ್ ಅಂಬಾನಿ (Anil Ambani) ಮತ್ತು ಅವರ ಪತ್ನಿ ಟೀನಾ ಅಂಬಾನಿ (Tina Ambani) ಬ್ಯುಸಿನೆಸ್ ಜಗತ್ತಿನ ಫೇಮಸ್ ಜೋಡಿಗಳಲ್ಲಿ ಒಬ್ಬರು. ಈ ವರ್ಷದ ಫೆಬ್ರವರಿಯಲ್ಲಿ, ಹೊಸ ಸದಸ್ಯ, ಅಂದರೆ ಸೊಸೆ ಕ್ರಿಶಾ ಶಾ (khrisha Shah ) ಅವರ ಮನೆಗೆ ಪ್ರವೇಶಿಸಿದ್ದಾರೆ. ಕ್ರಿಶಾ ಅವರು ಟೀನಾ ಅವರ ಹಿರಿಯ ಮಗ ಅನ್ಮೋಲ್ ಅಂಬಾನಿ (Anmol Ambani) ಅವರನ್ನು ಫೆಬ್ರವರಿ 21, 2022 ರಂದು ವೈಭವದಿಂದ ವಿವಾಹವಾದರು. ಟೀನಾ ಅವರ ಸೊಸೆ ಕ್ರಿಶಾ ತುಂಬಾ ಸುಂದರವಾಗಿದ್ದಾರೆ ಮತ್ತು ಹೆಚ್ಚು ಪ್ರಚಾರದಲ್ಲಿರಲು ಇಷ್ಟಪಡುವುದಿಲ್ಲ. ಅದೇ ಸಮಯದಲ್ಲಿ, ಇತ್ತೀಚೆಗೆ ಪತಿ ಅನ್ಮೋಲ್ ಅವರೊಂದಿಗೆ ಕ್ರಿಷಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ಆಗಿರುವ ಫೋಟೋಗಳಲ್ಲಿ ಪತಿ ಮತ್ತು ಹೆಂಡತಿ ರೋಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದಂಪತಿಗಳು ಸೋಫಾದಲ್ಲಿ ಕುಳಿತು ಪರಸ್ಪರರ ಕೈಗಳನ್ನು ಹಿಡಿದಿರುವುದನ್ನು ಫೋಟೋಗಳಲ್ಲಿ ಕಾಣಬಹುದು.
28
ಟೀನಾ ಅಂಬಾನಿ ಅವರ ಸೊಸೆ ಕ್ರಿಶಾ ಷಾ ಲವ್ನೋಟ್ಫಿಯರ್ ಎಂಬ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದಾರೆ. ಅವರಿಗೆ ಸಮಾಜಸೇವೆಯಲ್ಲಿ ಬಹಳ ಆಸಕ್ತಿ.
38
ಕ್ರಿಶಾ ಷಾ ಯೋಗ್ಯ ಪದವಿ ಪಡೆದಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಸಾಮಾಜಿಕ ನೀತಿ ಮತ್ತು ಅಭಿವೃದ್ಧಿಯಲ್ಲಿ ಪಿಜಿ ಮಾಡಿದ್ದಾರೆ.
48
ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಶಾ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ದಂಪತಿಗಳು 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥದಲ್ಲಿ ತಾಯಿ ಟೀನಾ ಅಂಬಾನಿ ಅವರ ಉಂಗುರವನ್ನು ಅನ್ಮೋಲ್ ಕ್ರಿಶಾ ಧರಿಸುವಂತೆ ಮಾಡಿದ್ದು ಕೆಲವೇ ಜನರಿಗೆ ತಿಳಿದಿದೆ.
58
ಲೈಮ್ ಲೈಟ್ ನಿಂದ ದೂರ ಉಳಿದಿರುವ ಟೀನಾ ಅಂಬಾನಿ ಸೊಸೆ ಕ್ರಿಶಾ ಶಾ ತುಂಬಾ ಸ್ಟೈಲಿಶ್ ಆಗಿದ್ದಾರೆ. ಕ್ರಿಶಾ ಷಾ ಬ್ಉಸಿನೆಸ್ ವುಮನ್ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರು ತನ್ನ ಸಹೋದರ ಮಿಶಾಲ್ ಷಾ ಜೊತೆಗೆ DYSCO ಎಂಬ ಕಂಪನಿಯನ್ನು ನಡೆಸುತ್ತಾರೆ. ಅದರ ಸ್ಥಾಪಕಿಯೂ ಹೌದು.
68
ಕ್ರಿಶಾ ಮತ್ತು ಅನೋಲ್ ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಈ ಸಮಯದಲ್ಲಿ, ಟೀನಾ ಅಂಬಾನಿ ಮತ್ತು ಅವರ ಸೊಸೆಯ ನಡುವಿನ ಉತ್ತಮ ಬಾಂಧವ್ಯದ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
78
ಮದುವೆಯಲ್ಲಿ, ಕ್ರಿಶಾ ಷಾ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು, ಅದರೊಂದಿಗೆ ಅವರು ಬೆಳ್ಳಿಯ ಬಣ್ಣದ ಆಭರಣಗಳನ್ನು ಧರಿಸಿದ್ದರು. ಅವರ ಮದುವೆಯ ಫೋಟೋಗಳು ಕೂಡ ವೈರಲ್ ಆಗಿವೆ.
88
ಒಂದು ಕಾಲದಲ್ಲಿ ಬಾಲಿವುಡ್ ನಟಿಯಾಗಿದದ ಟೀನಾ ಮುನಿಮ್ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಸಂಜಯ್ ದತ್, ರಿಷಿ ಕಪೂರ್ ಮತ್ತು ರಾಜೇಶ್ ಖನ್ನಾ ಸೇರಿದಂತೆ ಹಲವು ತಾರೆಯರೊಂದಿಗೆ ತೆರೆ ಹಂಚಿಕೊಂಡರು.