Profitable Formulas: ತಿಂಗಳಿಗೆ ₹20-30 ಸಾವಿರ ಸಂಬಳಕ್ಕಿಂತ ಹೆಚ್ಚು ಗಳಿಸಲು 4 ಲಾಭದಾಯಕ ಸೂತ್ರಗಳು

Published : Jun 19, 2025, 11:19 AM ISTUpdated : Jun 19, 2025, 12:18 PM IST

ತಿಂಗಳಿಗೆ ₹20-30 ಸಾವಿರ ಸಂಬಳಕ್ಕಿಂತ ಹೆಚ್ಚು ಗಳಿಸಲು ನಾಲ್ಕು ಉದ್ಯಮಗಳನ್ನು ಪರಿಗಣಿಸಬಹುದು. ಈ ಉದ್ಯಮಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದು, ಉತ್ತಮ ಆದಾಯವನ್ನು ಗಳಿಸಲು ಸಹಾಯ ಮಾಡುತ್ತವೆ.

PREV
16

ಯಾವುದೇ ಖಾಸಗಿ ಕೆಲಸ ಮಾಡಿದ್ರೆ ತಿಂಗಳಿಗೆ 20 ರಿಂದ 30 ಸಾವಿರ ರೂಪಾಯಿ ಸಂಬಳ ಸಿಗಬಹುದು. 20-30 ಸಾವಿರ ಸಂಬಳ ಪಡೆಯಲು 9 ರಿಂದ 10 ಗಂಟೆ ಕೆಲಸ ಮಾಡಬೇಕು. ಇಡೀ ದಿನ ಒಂದೇ ಕೆಲಸ ಮಾಡೋದರಿಂದ ಹೆಚ್ಚುವರಿ ಆದಾಯ ಇಲ್ಲದಂತಾಗುತ್ತದೆ. ಅನಿವಾರ್ಯವಾಗಿ ಎಲ್ಲದಕ್ಕೂ ಸಂಬಳದ ಮೇಲೆ ಅವಲಂಬಿತರಾಗಬೇಕಾಗುತ್ತದೆ.

26

ನೀವು ಸಹ ತಿಂಗಳಿಗೆ 20-30 ಸಾವಿರ ಸಂಬಳ ಕೆಲಸ ಮಾಡುತ್ತಿದ್ದೀರಾ? ಹಾಗಿದ್ರೆ ಒಮ್ಮೆ ಈ ನಾಲ್ಕು ಕೆಲಸಗಳನ್ನು ಮಾಡಿನೋಡಿ. ಆರು ತಿಂಗಳಲ್ಲಿಯೇ ಕೆಲಸದ ಹುಡುಕಾಟವನ್ನು ಮರೆತು ಹೋಗುತ್ತದೆ. ಅಷ್ಟೇ ಅಲ್ಲ ನೀವೇ ಬೇರೆಯವರಿಗೆ ಕೆಲಸ ನೀಡುವ ಹಂತಕ್ಕೆ ಬೆಳೆಯುತ್ತೀರಿ.

36

1.ಟೀ/ತಿಂಡಿ ಮಾರಾಟ ಅಥವಾ ಕ್ಲೌಡ್ ಕಿಚನ್

ಭಾರತದಲ್ಲಿ ಟೀ, ಫಾಸ್ಟ್‌ ಫುಡ್ ಮತ್ತು ಬಗೆ ಬಗೆಯ ತಿಂಡಿಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಜನಸಂದಣಿಯುಳ್ಳ ಪ್ರದೇಶದಲ್ಲಿ ಸಣ್ಣದಾದ ಹೋಟೆಲ್ ಆರಂಭಿಸುವ ಮೂಲಕ ಒಳ್ಳೆಯ ಹಣ ಸಂಪಾದಿಸಬಹುದಾಗಿದೆ. ಕನಿಷ್ಠ 20 ಸಾವಿರ ರೂ.ಗಳಿಂದ ಈ ವ್ಯವಹಾರ ಆರಂಭಿಸಬಹದಾಗಿ. ಕೇವಲ ಆನ್‌ಲೈನ್ ಮುಖಾಂತರವೂ ನಿಮ್ಮ ಆಹಾರ ಮಾರಾಟ ಮಾಡಬಹುದಾಗಿದೆ.

46

2.ಸೀಸನಲ್ ಬ್ಯುಸಿನೆಸ್

ವರ್ಷದ 12 ತಿಂಗಳು ಉತ್ತಮ ಆದಾಯ ನಿಮ್ಮದಾಗಬೇಕಾದ್ರೆ ಋತುಮಾನಕ್ಕೆ ತಕ್ಕಂತೆ ನಿಮ್ಮ ಮಾರಾಟದ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುತ್ತಿರಬೇಕು. ಹಬ್ಬಗಳ ಸಂದರ್ಭದಲ್ಲಿ ಅದಕ್ಕೆ ಬೇಕಾಗುವ ಪೂಜಾ ಪರಿಕರ, ರಕ್ಷಾ ಬಂಧನಕ್ಕೆ ರಾಖಿ, ದೀಪಾವಳಿಗೆ ದೀಪ ಮತ್ತು ಪಟಾಕಿ, ಈದ್ ವೇಳೆ ಡ್ರೈ ಫ್ರೂಟ್ಸ್ ಮಾರಾಟ ಮಾಡಬೇಕು. ಗ್ರಾಹಕರ ಬೇಡಿಕೆಗನುಗುಣವಾಗಿ ವ್ಯಾಪಾರದಲ್ಲಿ ಬದಲಾವಣೆ ತಂದ್ರೆ ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿ ನಿಮ್ಮದಾಗುತ್ತದೆ.

56

3.ಕರಕುಶುಲ ಪ್ರದಾರ್ಥ

ಇಂದು ಕರಕುಶಲ ವಸ್ತುಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ದುಬಾರಿಯಾದ್ರೂ ಜನರು ಕರಕುಶಲ ವಸ್ತುಗಳನ್ನು ಖರೀದಿಸಲು ಬಯಸುತ್ತಾರೆ. ಇದೇ ರೀತಿ ಹಳೆ ಶೈಲಿಯ ಆಭರಣಗಳ ಮಾರಾಟ ಸಹ ಒಳ್ಳೆಯ ಆದಾಯ ನೀಡುತ್ತದೆ. ವಿಭಿನ್ನ ಶೈಲಿಯ ಆಭರಣಗಳು, ಕರಕುಶಲ ಸಾಮಾನುಗಳು, ಹ್ಯಾಂಡ್‌ಬ್ಯಾಗ್‌ಗಳು ಉತ್ತಮ ಬೇಡಿಕೆಯನ್ನು ಹೊಂದಿವೆ.

66

4.ಸ್ಟೇಶನರಿ, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ

ಜನಸಂದಣಿ, ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ಸ್ಟೇಶನರಿ, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ ಮಾಡಬಹುದು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಸ್ತುಗಳು, ಮೊಬೈಲ್ ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡಬಹುದು. ಇದರ ಜೊತೆ ಝೆರಾಕ್ಷ್ ಯಂತ್ರವನ್ನಿಟ್ಟು ಹಣ ಸಂಪಾದನೆ ಮಾಡಬಹುದು.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories