ಸದ್ದು ಗದ್ದಲವಿಲ್ಲದೇ ಶಾಕ್ ನೀಡಿದ Jio, Airtel, Vi; ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದೇಗೆ?

Published : Jun 19, 2025, 08:11 AM IST

Airtel vs Jio vs Vi: ಭಾರತದ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಹೆಚ್ಚುವರಿ ಹಣ ಪಾವತಿಸುವಂತೆ ಮಾಡಿವೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದೆ.

PREV
16

ಭಾರತದ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಸದ್ದು ಗದ್ದಲವಿಲ್ಲದೇ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿದೆ. ಮೂರು ಖಾಸಗಿ ಕಂಪನಿಗಳ ಈ ನಿರ್ಧಾರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ಬಹುತೇಕರಿಗೆ ಈ ವಿಷಯ ತಿಳಿದಿಲ್ಲ.

26

ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವೆ ತೀವ್ರ ಸ್ಪರ್ಧೆ ಇದೆ. ಆದ್ರೆ ಈಗ ಮೂರು ಕಂಪನಿಗಳು ಜೊತೆಯಾಗಿ ನಿಯಮಗಳ ಬದಲಾವಣೆ ಮಾಡಿಕೊಂಡಿವೆ. ಪರಿಣಾಮ ಗ್ರಾಹಕರು ತಿಳಿಯದಂತೆ ಹೆಚ್ಚುವರಿ ಹಣ ಪಾವತಿಸುವಂತಾಗಿದೆ.

36

ಮೂರು ಖಾಸಗಿ ಟೆಲಿಕಾಂ ಕಂಪನಿಗಳ ಡೇಟಾ ವ್ಯಾಲಿಡಿಟಿಯನ್ನು ಕಡಿಮೆ ಮಾಡಿಕೊಂಡಿವೆ. ಹಾಗಾಗಿ ಗ್ರಾಹಕರು ತಾವು ಎಷ್ಟು ಡೇಟಾ ಬಳಕೆ ಮಾಡುತ್ತಿದ್ದೇವೆ ಮತ್ತು ಅದಕ್ಕೆ ಎಷ್ಟು ಹಣ ನೀಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ.

46

ಬಳಕೆದಾರರು ಪ್ರತ್ಯೇಕವಾಗಿ ಡೇಟಾ ಪ್ಯಾಕ್ ಆಕ್ಟಿವೇಟ್ ಮಾಡಿಕೊಂಡಿದ್ದರೆ ಅದು ನಿಮ್ಮ ಬೇಸಿಕ್ ಪ್ಲಾನ್‌ನ ಅವಧಿಯವರೆಗೆ ವ್ಯಾಲಿಡ್ ಆಗಿರುತ್ತಿತ್ತು. ಉದಾಹರಣೆಗೆ ನಿಮ್ಮ ಬೇಸಿಕ್ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1GB ಡೇಟಾ ಸಿಗುತ್ತಿತ್ತು. ಆದರೂ ಹೆಚ್ಚುವರಿಯಾಗಿ 1GB ಡೇಟಾ ಪ್ಯಾಕ್ ಆಕ್ಟಿವೇಟ್ ಮಾಡಿಕೊಂಡಿದ್ರೆ ಇದು ನಿಮ್ಮ ಮೂಲ ಬೇಸಿಕ್ ಪ್ಲಾನ್‌ನ ವ್ಯಾಲಿಡಿಟಿವರೆಗೆ ಲಭ್ಯವಿರುತ್ತಿತ್ತು.

56

ಹೇಗೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದು?

ಇದರಿಂದ ಬಳಕೆದಾರರು ಪ್ರತ್ಯೇಕವಾಗಿ ರೀಚಾರ್ಜ್ ಮಾಡಿದ ಡೇಟಾ ವೋಚರ್‌ನಲ್ಲಿ ಸ್ವೀಕರಿಸಿದ ಇಂಟರ್ನೆಟ್ ಡೇಟಾವನ್ನು ನೀವು ಸುಲಭವಾಗಿ ಬಳಸಬಹುದು. ಆದ್ರೆ ಈಗ ಸೌಲಭ್ಯವನ್ನು ಮೂರು ಟೆಲಿಕಾಂ ಕಂಪನಿಗಳು ನಿಲ್ಲಿವೆ. ಈ ಕಾರಣದಿಂದಾಗಿ ಪ್ರತ್ಯೇಕವಾಗಿ ರೀಚಾರ್ಜ್ ಮಾಡಿದ ಡೇಟಾ ವೋಚರ್‌ನ ಮಾನ್ಯತೆಯು ಮೂಲ ಯೋಜನೆಯ ಮಾನ್ಯತೆಯವರೆಗೆ ಇರುವುದಿಲ್ಲ. ಇದು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದೆ.

66

ಏನು ಬದಲಾಗಿದೆ?

ಈಗ ಜಿಯೋ, ಏರ್‌ಟೆಲ್ ಮತ್ತು ವಿಐ ತಮ್ಮ ಡೇಟಾ ವೋಚರ್‌ಗಳಿಗೆ ಅಲ್ಪಾವಧಿಯ ವ್ಯಾಲಿಡಿಟಿಯನ್ನು ಅಂದರೆ 1 ದಿನ ಅಥವಾ ಕೆಲವು ಗಂಟೆಗಳ ವ್ಯಾಲಿಡಿಟಿಯನ್ನು ನೀಡುತ್ತಿವೆ. ಈ ಪ್ಲಾನ್‌ಗಳು ಗ್ರಾಹಕರಿಗೆ ಲಾಭದಾಯಕವಾಗಿಲ್ಲ. ಒಂದು ದಿನ ಅಥವಾ ಕೆಲವು ಗಂಟೆಯಲ್ಲಿ ಆ ಡೇಟಾ ಬಳಕೆ ಮಾಡದೇ ಇದ್ದಲ್ಲಿ ಅದು ವ್ಯರ್ಥವಾಗಲಿದೆ.

Read more Photos on
click me!

Recommended Stories