ಮಾರ್ಚ್ 2026: ನಾಳೆಯಿಂದ ಹೊಸ ಆಪ್‌ ಜೊತೆ ಬದಲಾಗಲಿವೆ ನಾಲ್ಕು ಪ್ರಮುಖ ನಿಯಮಗಳು

Published : Feb 28, 2026, 12:17 PM IST

New Financial Rules For March 2026:  ಮಾರ್ಚ್ 2026 ರಿಂದ ನಾಲ್ಕು ಪ್ರಮುಖ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿವೆ. ಹಾಗಾಗಿ ಬದಲಾಗುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ

PREV
15
New Rules For March 2026

New Rules For March 2026: ಪ್ರತಿ ವರ್ಷದಂತೆ ಈ ಬಾರಿಯೂ ಮಾರ್ಚ್‌ನಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಯನ್ನ ಕಾಣಬಹುದು. ಮಾರ್ಚ್ 1ರಿಂದ ಬದಲಾಗುವ ನಿಯಮಗಳು ನೇರವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಬದಲಾಗುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ

25
ಮೊದಲ ಬದಲಾವಣೆ: ಎಲ್‌ಪಿಜಿ ದರ

ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಣೆ ಮಾಡುತ್ತವೆ. ಕಳೆದ ಹಲವು ತಿಂಗಳಿನಿಂದ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ದರದಲ್ಲಿ ವ್ಯತ್ಯಾಸ ಕಾಣಬಹುದು. ಹಾಗಾಗಿ ಮಾರ್ಚ್ 1ರಂದು ಬೆಲೆಯಲ್ಲಿ ವ್ಯತ್ಯಾಸವುಂಟಾಗುವ ಸಾಧ್ಯತೆಗಳಿವೆ.

35
ಎರಡನೇ ಬದಲಾವಣೆ: ರೈಲು ನಿಯಮ

ಮಾರ್ಚ್ 1ರಿಂದ UTS App ಬಂದ್ ಆಗಲಿದ್ದು, ಅದರ ಬದಲಾಗಿ RailOne ಜಾರಿಗೆ ಬರಲಿದೆ. ಇನ್ಮುಂದೆ ಕಾಯ್ಡಿರಿಸಿದ, ಜನರಲ್ ಮತ್ತು ಪ್ಲಾಟ್‌ಫಾರಂ ಟಿಕೆಟ್‌ಗಳನ್ನು RailOne ಆಪ್ ಮೂಲಕ ಖರೀದಿ ಮಾಡಬೇಕಾಗುತ್ತದೆ. ಹಾಗಾಗಿ ರೈಲ್ವೆ ಪ್ರಯಾಣಿಕರು ಹೊಸ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.

45
ಮೂರನೇ ಬದಲಾವಣೆ: ಸಿಮ್

ಮೂರನೇ ಬದಲಾವಣೆ ಸಿಮ್‌ಗೆ ಸಂಬಂಧಿಸಿದ್ದಾಗಿದೆ. ಟಿಲಿಕಾಂ ವಿಭಾಗ SIM-Binding ನಿಯಮವನ್ನು ಕಡ್ಡಾಯಗೊಳಿಸಿದೆ. ಈ ನಿಯಮದಡಿಯಲ್ಲಿ ಪ್ರತಿಯೊಂದು WhatsApp ಮತ್ತು ಇತರ ಮೆಸೇಜಿಂಗ್ ಅಪ್ಲಿಕೇಶನ್ ಖಾತೆಯನ್ನು ಸಕ್ರಿಯ ಸಿಮ್‌ಗೆ ಲಿಂಕ್ ಮಾಡಬೇಕು. ಅಂದರೆ ನಿಮ್ಮ ಖಾತೆಯನ್ನು ರಚಿಸಲು ಬಳಸುವ ಸಿಮ್ ಕಾರ್ಡ್ ಸಂಖ್ಯೆ ನಿಮ್ಮ ಮೊಬೈಲ್‌ನಲ್ಲಿರಬೇಕು.

ಇದನ್ನೂ ಓದಿ: ಹಣವೋ ಹಣ, 2 ವರ್ಷದಲ್ಲಿ 700% ರಿಟರ್ನ್; ಕುಸಿತದಲ್ಲೂ ಜಿಗಿತ ಕಂಡ ಮಲ್ಟಿಬ್ಯಾಗರ್ ಸ್ಟಾಕ್

55
ನಾಲ್ಕನೇ ಬದಲಾವಣೆ: ಲಾಗಿನ್

ಇದೆಲ್ಲದರ ಜೊತೆ ವೆಬ್ ಅಥವಾ ಡೆಸ್ಕ್‌ಟಾಪ್ ಲಾಗಿನ್‌ಗಳಿಗೆ ಆರು ಗಂಟೆಗಳ ಸ್ವಯಂ-ಲಾಗ್‌ಔಟ್ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ನಿಯಮದ ಪ್ರಕಾರ, ಆರು ಗಂಟೆಗಳ ಬಳಿಕ ವೆಬ್ ಅಥವಾ ಡೆಸ್ಕ್‌ಟಾಪ್ ಲಾಗಿನ್ ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತದೆ. ಈ ಮೂಲಕ ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ: ಹೇಗಿದೆ ಗೊತ್ತಾ ಅನಿಲ್‌ ಅಂಬಾನಿ ಅರಮನೆ: ಹೆಲಿಪ್ಯಾಡ್, ಈಜುಕೊಳವಿರುವ 17 ಮಹಡಿಗಳ ಸ್ವರ್ಗ Abode

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories