ED Attaches Anil Ambani's ₹3,716 Cr Mumbai House ‘Abode’ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ₹3,716 ಕೋಟಿ ಮೌಲ್ಯದ ಮುಂಬೈ ನಿವಾಸ 'ಅಬೋಡ್' ಅನ್ನು ಜಪ್ತಿ ಮಾಡಿದೆ.
ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಮುಂಬೈನ ₹3,716 ಕೋಟಿ ಮೌಲ್ಯದ 17 ಅಂತಸ್ತಿನ ಐಷಾರಾಮಿ ಮನೆ 'ಅಬೋಡ್' ಅನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಬುಧವಾರ ಜಪ್ತಿ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಇದೇ ಆಸ್ತಿಯ ₹473.17 ಕೋಟಿ ಮೌಲ್ಯದ ಭಾಗವನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು.
25
ಬ್ಯಾಂಕ್ ಸಾಲ ವಂಚನೆ ಪ್ರಕರಣ
ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಗೆ ಸಂಬಂಧಿಸಿದ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ 66 ವರ್ಷದ ಅನಿಲ್ ಅಂಬಾನಿ ಅವರನ್ನು ಕೇಂದ್ರ ತನಿಖಾ ಸಂಸ್ಥೆಯು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
35
17 ಅಂತಸ್ತಿನ ಸ್ವರ್ಗದಂಥ ಮನೆ
ಮುಂಬೈನ ಅತ್ಯಂತ ದುಬಾರಿ ಪ್ರದೇಶವಾದ 'ಪಾಲಿ ಹಿಲ್'ನಲ್ಲಿರುವ ಈ ನಿವಾಸವು 66 ಮೀಟರ್ ಎತ್ತರವಿದ್ದು, ಒಟ್ಟು 17 ಅಂತಸ್ತುಗಳನ್ನು ಹೊಂದಿದೆ. ಅನಿಲ್ ಅಂಬಾನಿ ಕುಟುಂಬದ ಸದಸ್ಯರು ಇಲ್ಲಿ ವಾಸವಾಗಿದ್ದರು.
ಈ ನಿವಾಸವು ಅದ್ಭುತವಾದ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ಹೆಲಿಪ್ಯಾಡ್, ಸುಸಜ್ಜಿತ ಈಜುಕೊಳ, ಜಿಮ್ ಮತ್ತು ವಾಹನಗಳ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ಪ್ರದೇಶವಿದೆ.
55
ಐಷಾರಾಮಿ ಕಾರುಗಳ ಸಂಗ್ರಹ
ಮನೆಯಲ್ಲಿ ಪ್ರತ್ಯೇಕ ಲೌಂಜ್ ಇದ್ದು, ಅಲ್ಲಿ ಅಂಬಾನಿ ಅವರ ದುಬಾರಿ ಕಾರುಗಳನ್ನು ಇರಿಸಲಾಗಿದೆ. ಅವರ ಬಳಿ ರೋಲ್ಸ್ ರಾಯ್ಸ್, ಲೆಕ್ಸಸ್, ಪೋರ್ಷೆ, ಆಡಿ ಮತ್ತು ಮರ್ಸಿಡಿಸ್ ಬೆಂಜ್ ನಂತಹ ಹೈ-ಎಂಡ್ ಕಾರುಗಳಿವೆ ಎಂದು ವರದಿಯಾಗಿದೆ. ಆದರೆ, ತಮಗೆ ಕೇವಲ ಒಂದು ಕಾರು ಮಾತ್ರ ಇದೆ ಎಂದು ಅನಿಲ್ ಅಂಬಾನಿ ಈ ಹಿಂದೆ ಬ್ರಿಟನ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.