ಹಿಂದಿನ ಹಳೆಯ ಪಲ್ಸರ್ ಬೈಕ್‌ಗಳಲ್ಲಿ ಈ ಫೀಚರ್ಸ್ ಹೊಂದಿರಲಿಲ್ಲ. ಆದರೆ ಹೊಸ ಪಲ್ಸರ್ RS200 ಬೈಕ್‌ಗಳಲ್ಲಿ ಹೊಸ ಬದಲಾವಣೆ ಎಂದರೆ ಗೂಗಲ್ ಮ್ಯಾಪ್. ಹಳೆಯ LCD ಕನ್ಸೋಲ್ ಅನ್ನು ತೆಗೆದು ಹೊಸ 5-ಇಂಚಿನ ಬಣ್ಣದ TFT ಡಿಸ್ಪ್ಲೇ ಅಳವಡಿಸಲಾಗಿದೆ. ಇದರಿಂದಾಗಿ ಪ್ರಯಾಣಿಸುವಾಗ ಪ್ರತ್ಯೇಕವಾಗಿ ಮೊಬೈಲ್‌ನಲ್ಲಿ ಮ್ಯಾಪ್ ನೋಡಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಬೈಕ್ ರೈಡ್ ಮಾಡುವಾಗ ನೇರವಾಗಿ ಡಿಸ್ಪಲೇ ಮೇಲೆ ನ್ಯಾವಿಗೇಷನ್ ನೋಡಿಕೊಳ್ಳಬಹುದು. ದಿನನಿತ್ಯದ ಡ್ರೈವ್ ಸುಲಭಗೊಳಿಸಲು, ದೂರದ ಪ್ರಯಾಣವನ್ನು ಕಂಫರ್ಟ್ ಆಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿನ ಹ್ಯಾಂಡ್ ಲಿವರ್‌ಗಳು, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಎಮರ್ಜೆನ್ಸಿ ಲೈಟ್ ಸ್ವಿಚ್, ಪ್ಯಾನಿಕ್ ಬ್ರೇಕ್ ಅಲರ್ಟ್‌ನಂತಹ ಫೀಚರ್ಸ್ ಸೇರಿವೆ.
ರೈಡಿಂಗ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್ ಮತ್ತು ಸ್ಪೋರ್ಟ್ಸ್ ಶಿಫ್ಟರ್
ಹೊಸ ಬಜಾಜ್ ಸ್ಫೋರ್ಟ್ಸ್ ಬೈಕ್‌ನಲ್ಲಿ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಅನ್ನು ಎಲೆಕ್ಟ್ರಾನಿಕ್ ಥ್ರೊಟಲ್ ಬಾಡಿಯೊಂದಿಗೆ ಅಪ್‌ಗ್ರೇಡ್ ಮಾಡಿದೆ, ಇದು ಈಗ ಐದು ರೈಡಿಂಗ್ ಮೋಡ್‌ಗಳನ್ನು ನೀಡುತ್ತದೆ. ಅಂದರೆ ಇಳಿಜಾರಿನ ರಸ್ತೆಗಳಲ್ಲಿ, ಜಾರುವಂತಹ ರಸ್ತೆಗಳಿಗೆ ಉತ್ತಮವಾಗಿ ಗ್ರಿಪ್ ಮಾಡಲು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಇದರಲ್ಲಿದೆ. ಇದರೊಂದಿಗೆ ವೇಗವಾದ ಗೇರ್ ಶಿಫ್ಟಿಂಗ್‌ಗಾಗಿ ಹೊಸ ಸ್ಪೋರ್ಟ್ಸ್ ಶಿಫ್ಟರ್ ಅನ್ನು ಕೂಡ ನೀಡಲಾಗಿದೆ. ಇದರ ಇಂಜಿನ್ ಮಾತ್ರ ಪವರ್ ಫುಲ್ ಆಗಿದೆ.
ಈ ಬೈಕ್ ಅದೇ 199.5cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದರೂ, ಪವರ್ ಅನ್ನು 1 PS ನಿಂದ 25.5 PS ಗೆ ಹೆಚ್ಚಿಸಲಾಗಿದೆ, ಆದರೆ ಟಾರ್ಕ್ 18.74 Nm ನಲ್ಲಿ ಬದಲಾಗದೆ ಉಳಿದಿದೆ.
ಹೆಚ್ಚುವರಿಯಾಗಿ, ಹಳೆಯ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅನ್ನು 37mm ಅಪ್‌ಸೈಡ್-ಡೌನ್ (USD) ಮುಂಭಾಗದ ಫೋರ್ಕ್‌ಗಳು ಮತ್ತು ಸುಧಾರಿತ ಕಾರ್ನರಿಂಗ್ ಮತ್ತು ಬ್ರೇಕ್ ಹಾಕುವಾಗ ಜಾರದಂತಹ ಅಗಲವಾದ 140/70-R17 ರೇಡಿಯಲ್ ಹಿಂಭಾಗದ ಟೈರ್‌ಗಳಿವೆ. ಹೀಗಾಗಿ ಈ ಬಜಾಜ್ ಪಲ್ಸರ್ ಹೊಸ ಬೈಕ್ ಯಮಹಾ R15 V4, KTM RC 200, ಹೀರೋ ಕರಿಜ್ಮಾ XMR ಮತ್ತು ಸುಜುಕಿ ಗಿಕ್ಸರ್ SF 250 ಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ.