TVS Star City Plus Discontinued: TVS Star City Plus Discontinued: ಜನಸಾಮಾನ್ಯರ ನೆಚ್ಚಿನ ಬೈಕ್ ಆಗಿದ್ದ ಟಿವಿಎಸ್ ಸ್ಟಾರ್ ಪ್ಲಸ್ ಸ್ಥಗಿತಗೊಂಡಿದೆಯೇ? ಟಿವಿಎಸ್ ಮೋಟರ್ ಕಂಪನಿಯ ಅಧಿಕೃತ ವೆಬ್‌ಸೈಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು? ತಿಳಿಯಿರಿ.
ಸಾಮಾನ್ಯರ ಜನರು, ರೈತರು, ಸಣ್ಣಪುಟ್ಟ ವ್ಯಾಪಾರಿಗಳ ನೆಚ್ಚಿನ ಬೈಕ್ ಆಗಿದ್ದ TVS ಮೋಟಾರ್ ತನ್ನ 'ಸ್ಟಾರ್ ಸಿಟಿ ಪ್ಲಸ್' (Star City Plus) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಿಂದ ಸ್ಥಗಿತಗೊಳಿಸಲು ನಿರ್ಧರಿಸಿದಂತೆ ತೋರುತ್ತಿದೆ. ಏಕೆಂದರೆ, 110cc ಸಾಮರ್ಥ್ಯದ ಈ ಕಮ್ಯೂಟರ್ ಮೋಟಾರ್‌ಸೈಕಲ್ ಈಗ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸುತ್ತಿಲ್ಲ. ಈ ಮಾದರಿಯ ಬೈಕ್ ಮಾರಾಟ ನಿಲ್ಲಿಸುತ್ತಿರುವುದಾಗಿ ಕಂಪನಿಯು ಅಧಿಕೃತವಾಗಿ ಘೋಷಿಸದಿದ್ದರೂ, ವೆಬ್‌ಸೈಟ್‌ನಲ್ಲಿ ಕಾಣಿಸದಿರುವುದು ಸ್ಥಗಿತಗೊಳಿಸುವ ಸೂಚನೆ ನೀಡಿದಂತಾಗಿಗದೆ.
ಟಿವಿಎಸ್ ಸ್ಟಾರ್ ಬೈಕ್(TVS Star City Plus) ಅನ್ನು ಟಿವಿಎಸ್ ಮೋಟರ್ಸ್(TVS Motor) ಕಂಪನಿ ಸ್ಥಗಿತಗೊಳಿಸಿದ ಬಗ್ಗೆ ಹಲವು ವರದಿಯಾಗಿದೆ. ಅಂದರೆ ಇನ್ನುಮುಂದೆ ಈ ಬೈಕ್ ಮಾರಾಟ ಪಟ್ಟಿಯಲ್ಲಿ ಕಾಣಿಸಿಕೊಳ್ಳದೆ ಇರಬಹುದು. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಅನ್ನು 2014ರಲ್ಲಿ ಕಂಪನಿ ಬಿಡುಗಡೆ ಮಾಡಿತ್ತು. ಅಂದಿನಿಂದ ಸುಮಾರು ಹನ್ನೆರಡು ವರ್ಷಗಳವರೆಗೆ ಮಾರುಕಟ್ಟೆಯಲ್ಲಿತ್ತು. ಇದೀಗ ಕಂಪನಿ ಸ್ಥಗಿತಗೊಳಿಸಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಜನಸಾಮಾನ್ಯರ ನೆಚ್ಚಿನ ಬೈಕ್ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್
ನಗರಪ್ರದೇಶಗಳಿಗಿಂತ ಗ್ರಾಮೀಣ ಜನಸಾಮಾನ್ಯರ ಜನಪ್ರಿಯ ಬೈಕ್ ಆಗಿತ್ತು. ಕಡಿಮೆ ಬಜೆಟ್, ದೈನಂದಿನ ಬಳಕೆಗೆ ಹೆಸರಾಗಿದ್ದ ಬೈಕ್ ಇದು. ಟಿವಿಎಸ್ 110 ಸಿಸಿ ಎಂಜಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಮೂರು ಬೈಕ್‌ಗಳ ಪೈಕಿ ಸ್ಟಾರ್ ಸಿಟಿ ಪ್ಲಸ್ ಒಂದಾಗಿತ್ತು. ಆದರೆ ಉಳಿದೆರಡು ಬೈಕ್‌ಗಳಿಗೆ ಹೋಲಿಸಿದರೆ ಸ್ಟಾರ್ ಸಿಟಿ ಪ್ಲಸ್ ಹೆಚ್ಚು ಜನಪ್ರಿಯವಾಗಿತ್ತು. ಟಿವಿಎಸ್ ಸ್ಪೋರ್ಟ್. ಸ್ಟಾರ್ ಸಿಟಿ ಪ್ಲಸ್ ಸ್ಥಗಿತಗೊಂಡಿದ್ದರೂ, ರೇಡಿಯನ್ ಮತ್ತು ಸ್ಪೋರ್ಟ್ ಬೈಕ್‌ಗಳ ಮಾರಾಟ ಮುಂದುವರಿಯುತ್ತದೆ ಎಂದು ತಿಳಿಸಿದೆ.
35
109.7cc ಎಂಜಿನ್.. 4 ಸ್ಪೀಡ್ ಗೇರ್‌ಬಾಕ್ಸ್
109.7cc ಎಂಜಿನ್.. 4 ಸ್ಪೀಡ್ ಗೇರ್‌ಬಾಕ್ಸ್
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 109.7 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಹೊಂದಿದ್ದ ಈ ಬೈಕ್. ಎಂಜಿನ್ 7,350 ಆರ್‌ಪಿಎಂನಲ್ಲಿ 8.2 ಎಚ್‌ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಸಾಮರ್ಥ್ಯದ ಜೊತೆ 4-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ ಬೈಕ್ ಆಗಿತ್ತು. ಟಿವಿಎಸ್ ಸ್ಟಾರ್ ಸಿಟಿ ಬೈಕ್ ಒಂದು ಆರಂಭಿಕ ಹಂತದ ಬೈಕ್ ಆಗಿದ್ದರೂ ಇದರ ಉಪಯುಕ್ತ, ವೈಶಿಷ್ಟ್ಯಗಳಿಗೆ ಜನರು ಮಾರುಹೋಗಿದ್ದರು. ಈ ಬೈಕ್‌ಗೆ LED ಹೆಡ್‌ಲ್ಯಾಂಪ್, USB ಚಾರ್ಜರ್ ಹಲವು ಫೀಚರ್ಸ್ ಹೊಂದಿದ್ದರಿಂದ ಸಾಮಾನ್ಯ ವ್ಯಕ್ತಿಗಳಿಗೆ ಕೈಗೆಟುಕುವ ಬೆಲೆಯ ಬೈಕ್‌ಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿತ್ತು.
ಎರಡು ವರಿಯೆಂಟ್‌ನಲ್ಲಿ ಲಭ್ಯವಿದ್ದ ಬೈಕ್, ಬೆಲೆ ಎಷ್ಟಿತ್ತು?
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಅನ್ನು ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ವರಿಯೆಂಟ್‌ನಲ್ಲಿ ಮಾರಾಟ ಮಾಡಲಾಯಿತು. ಇದರ ಎಕ್ಸ್-ಶೋರೂಂ ಬೆಲೆಗಳು ಕ್ರಮವಾಗಿ ರೂ.72,500 ರಿಂದ ರೂ.75,200 ವರೆಗೆ ಇದ್ದವು. ಈ ಬೈಕ್ ಅನ್ನು ಕೊನೆಯದಾಗಿ ಐದು ವರ್ಷಗಳ ಹಿಂದೆ ಅಪ್ಡೇಟ್ ಮಾಡಲಾಗಿತ್ತು. ಆ ಸಮಯದಲ್ಲಿ, ಬಿಎಸ್ 6 ಹೊರಸೂಸುವಿಕೆ ಮಾನದಂಡಗಳಿಗೆ ಅನುಗುಣವಾಗಿ ಎಂಜಿನ್ ಅನ್ನು ಬದಲಾಯಿಸಲಾಯಿತು. ಅಂದಿನಿಂದ, ಯಾವುದೇ ಪ್ರಮುಖ ವಿನ್ಯಾಸ ಬದಲಾವಣೆಗಳು ಅಥವಾ ವೈಶಿಷ್ಟ್ಯ ಅಪ್ಡೇಟ್ ಕಾಣಿಸಿಕೊಂಡಿರಲಿಲ್ಲ.
55
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಸ್ಥಗಿತಕ್ಕೆ ಕಾರಣವೇನು?
ರೇಡಿಯನ್ ನಿಂದಾಗಿ ಸ್ಟಾರ್ ಸಿಟಿ ಪ್ಲಸ್ ಸ್ಥಗಿತ?
ಸ್ಟಾರ್ ಸಿಟಿ ಪ್ಲಸ್ ಅನ್ನು ಸ್ಥಗಿತಗೊಳಿಸಲು ಕಾರಣವೇನೆಂದು ಟಿವಿಎಸ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಅದೇ 110 ಸಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಮಾರುಕಟ್ಟೆಗೆ ಬಂದಿರುವ ರೇಡಿಯನ್ ಬೈಕ್ ಕೂಡ ಅದೆ ಸಾಮಾನ್ಯ ಗ್ರಾಹಕರನ್ನ ಗಮನದಲ್ಲಿಟ್ಟುಕೊಂಡೇ ಮಾರುಕಟ್ಟೆಗೆ ಬಂದಿದೆ. ಆದರೆ ಸ್ಟಾರ್ ಸಿಟಿ ಪ್ಲಸ್‌ಗೆ ಹೋಲಿಸಿದರೆ ರೇಡಿಯನ್ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವುದರಿಂದ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಕೆಲವು ವರದಿಗಳು ಹೇಳುತ್ತವೆ.