ಬೆಳಗಾವಿ ಮತ್ತು ಬೆಂಗಳೂರಿನ SMVT ನಿಲ್ದಾಣದ ನಡುವೆ ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು

Published : Oct 05, 2025, 11:06 AM IST

Train number 06211/06222 schedule: ಪ್ರಯಾಣಿಕರ ದಟ್ಟಣೆ ನಿವಾರಿಸಲು, ಬೆಳಗಾವಿ ಮತ್ತು ಬೆಂಗಳೂರಿನ SMVT ನಿಲ್ದಾಣದ ನಡುವೆ ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು (06211/06222) ಸಂಚಾರವನ್ನು ಆರಂಭಿಸಲಾಗಿದೆ.

PREV
14
ರೈಲು ಸಂಖ್ಯೆ 06211

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲು ಸೇವೆ ಅರಂಭಿಸಲಾಗಿದೆ. ಬೆಳಗಾವಿ ಮತ್ತು ಬೆಂಗಳೂರು ನಡುವೆ ಚಲಿಸಲಿರುವ ರೈಲು ಸಂಖ್ಯೆ 06211 ಆಗಿದೆ. ಅಕ್ಟೋಬರ್ 05, ರ ರಾತ್ರಿ 8ಕ್ಕೆ ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 08:30 ಕ್ಕೆ SMVT ಬೆಂಗಳೂರಿಗೆ ತಲುಪಲಿದೆ.

24
ರೈಲು ಸಂಖ್ಯೆ 06222 SMVT ಬೆಂಗಳೂರು - ಬೆಳಗಾವಿ ಎಕ್ಸ್‌ಪ್ರೆಸ್ ವಿಶೇಷ ರೈಲು

SMVT ಬೆಂಗಳೂರಿನಿಂದ ರಾತ್ರಿ 09:00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 08:30 ಕ್ಕೆ ಬೆಳಗಾವಿಗೆ ತಲುಪಲಿದೆ. ಮಾರ್ಗಮಧ್ಯೆ, ರೈಲುಗಳು ಲೋಂಡಾ, ಅಲ್ನಾವರ, ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರದಲ್ಲಿ ನಿಲುಗಡೆಯಾಗಲಿದೆ

34
ರೈಲಿನ ಕೋಚ್ ಮಾಹಿತಿ

22 ಬೋಗಿಗಳು, 20 ಸ್ಲೀಪರ್ ಕ್ಲಾಸ್ ಕೋಚ್‌ಗಳು, 02 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಮತ್ತು ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟನ್ನ ಈ ರೈಲು ಹೊಂದಿದೆ.

ಇದನ್ನೂ ಓದಿ: ಬೆಂಗಳೂರು ಹೈದರಾಬಾದ್ ಪ್ರಯಾಣ ಇನ್ನು 2 ಗಂಟೆ ಮಾತ್ರ, ಬುಲೆಟ್ ರೈಲು ಡಿಪಿಆರ್ ಸಿದ್ಧತೆ

ಇದನ್ನೂ ಓದಿ: ಅ.1 ರಿಂದ ಹೊಸ ನಿಯಮ: ಇಂದಿನಿಂದ ರೈಲ್ವೆ, ಅಂಚೆ, ಬ್ಯಾಂಕಲ್ಲಿ ಹಲವು ಬದಲಾವಣೆ

44
ಬೆಂಗಳೂರು-ಬೆಳಗಾವಿ ನಡುವೆ ಸಂಚರಿಸುವ ರೈಲುಗಳು

ರೈಲು ಸಂಖ್ಯೆ: 20653 (ಬೆಂಳೂರು-ಬೆಳಗಾವಿ ಎಕ್ಸ್‌ಪ್ರೆಸ್)

ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಡು ಮರುದಿನ ಬೆಳಗ್ಗೆ 6.50ಕ್ಕೆ ಬೆಳಗಾವಿ ತಲುಪುತ್ತದೆ.

ರೈಲು ಸಂಖ್ಯೆ: 16589 (ರಾಣಿ ಚೆನ್ನಮ್ಮಾ ಎಕ್ಸ್‌ಪ್ರೆಸ್)

ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.50ಕ್ಕೆ ಬೆಳಗಾವಿಯನ್ನು ತಲಪುತ್ತದೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು: 30 ವರ್ಷಗಳ ಕಾಯುವಿಕೆಗೆ ತೆರೆ ಎಂದ ಸಂಸದ ತೇಜಸ್ವಿ ಸೂರ್ಯ!

Read more Photos on
click me!

Recommended Stories