ಬೆಡ್‌ರೂಮ್‌ನಲ್ಲಿ ಹೆಂಡತಿ ವಿಡಿಯೋ ಶೂಟ್ ಮಾಡಿದ ಗಂಡನ ಪ್ರಕರಣಕ್ಕೆ ಟ್ವಿಸ್ಟ್

Published : Oct 05, 2025, 09:14 AM IST

Bengaluru News: ಬೆಂಗಳೂರಿನ ಬೆಡ್‌ರೂಮ್‌ ವಿಡಿಯೋ ಪ್ರಕರಣದಲ್ಲಿ, ಆರೋಪಿ ಪತಿ ಸೈಯದ್ ಇನಾಮುಲ್ ಹಕ್ ವಿಡಿಯೋ ಬಿಡುಗಡೆ ಮಾಡಿ ಪತ್ನಿಯ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾನೆ. ತನ್ನ ಪತ್ನಿಯೇ ಸೈಕೋ ರೀತಿ ವರ್ತಿಸಿ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಿದ್ದಾನೆ .

PREV
15
ಬಿಗ್‌ ಟ್ವಿಸ್ಟ್

ಬೆಂಗಳೂರು: ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಮಹಿಳೆಯ ಗಂಡ ಸೈಯದ್ ಇನಾಮುಲ್ ಹಕ್ ವಿಡಿಯೋ ಬಿಡುಗಡೆ ಮಾಡಿದ್ದು, ತಮ್ಮ ಮೇಲಿನ ಆರೋಪಗಳ ಸಂಬಂಧ ಪ್ರತಿಕ್ರಿಯೆ ನೀಡಿದ್ದಾನೆ. ಸೈಯದ್ ಇನಾಮುಲ್ ಹಕ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25
21 ಮದುವೆಯ ಆರೋಪ

ಪತಿ ಸೈಯದ್ ಇನಾಮುಲ್ ಹಕ್ 21 ಮದುವೆಯಾಗಿದ್ದಾನೆ ಎಂದು ಮಹಿಳೆ ಅರೋಪಿಸಿದ್ದರು. ಪತ್ನಿಯ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಸೈಯದ್ ಇನಾಮುಲ್ ಹಕ್, ಮದುವೆ ಮುಂಚೆಯೇ ಆಕೆಯೊಂದಿಗೆ ಸಂಬಂಧ ಹೊಂದಿದ್ದು ನಿಜ. ಆಕೆಯೇ ಲೈಂ*ಗಿಕ ಕ್ರಿಯೆಗೆ ಒತ್ತಾಯಿಸಿದ್ದರಿಂದ ಸಂಬಂಧ ಬೆಳೆಯಿತು. ಆ ಒಂದು ಕಾರಣಕ್ಕಾಗಿಯೇ ಆಕೆಯನ್ನು ಮದುವೆಯಾದೆ.

35
ಪತ್ನಿಯಿಂದ ಕಿರುಕುಳ ಎಂದ ಗಂಡ

ಪತ್ನಿ ಸೈಕೋ ರೀತಿ ವರ್ತಿಸಿ ನನಗೆ ಟಾರ್ಚರ್ ಕೊಡುತ್ತಿದ್ದಳು. ಇದಕ್ಕೂ ಮೊದಲು ನನಗೆ ಮದುವೆಯಾಗಿತ್ತು. ಆ ವಿಷಯ ಆಕೆಗೂ ಗೊತ್ತಿತ್ತು. ಇದೆಲ್ಲಾ ವಿಷಯ ತಿಳಿದೇ ಆಕೆಯ ಪೋಷಕರು ಮದುವೆ ಮಾಡಿಸಿದ್ದಾರೆ. ಪತ್ನಿಯ ಕುಟುಂಬಸ್ಥರು ನನ್ನಿಂದ 17 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಪತ್ನಿಗೆ 13 ಲಕ್ಷ ಮೌಲ್ಯದ ಒಡವೆಗಳನ್ನು ಕೊಡಿಸಿದ್ದೇನೆ ಎಂದು ಸೈಯದ್ ಇನಾಮುಲ್ ಹಕ್ ವಿಡಿಯೋದಲ್ಲಿ ಹೇಳಿದ್ದಾನೆ.

45
ಸೈಯದ್ ಇನಾಮುಲ್ ಹಕ್ ಪ್ರಶ್ನೆ

ಪತ್ನಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಪತ್ನಿಯ ಅಕ್ಕಳಿಗೂ ಎರಡು ಬಾರಿ ಡಿವೋರ್ಸ್ ಆಗಿದೆ. ಆಕೆಯೂ ಮಾಜಿ ಪತಿಗಳಿಂದ ಹಣ ವಸೂಲಿ ಮಾಡಿದ್ದಾರೆ. ನಾನು ಆಕೆಯನ್ನು ಲವ್ ಮಾಡಿ ಮದುವೆಯಾಗಿದ್ದೇನೆ. ಯಾವ ವ್ಯಕ್ತಿ ತನ್ನ ಹೆಂಡತಿ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸುತ್ತಾನೆ ಹೇಳಿ ಎಂದು ಆರೋಪಿ ಸೈಯದ್ ಇನಾಮುಲ್ ಹಕ್ ಪ್ರಶ್ನೆ ಮಾಡುತ್ತಾನೆ.

ಇದನ್ನೂ ಓದಿ: ದಾಂಪತ್ಯ ಕಲಹದ ಭಯಾನಕ ತಿರುವು: ಗಂಡನ ಖಾಸಗಿ ಭಾಗಕ್ಕೆ ಬ್ಲೇಡ್ ಹಾಕಿದ ಹೆಂಡ್ತಿ

55
ಪತ್ನಿ ವಿರುದ್ಧ ಸಾಲು ಸಾಲು ಆರೋಪ

ಪತ್ನಿ ನನ್ನ ತಂದೆ ತಾಯಿಗೆ ಪ್ರತಿ ನಿತ್ಯ ಅವಳು ಹೊಡೆಯುತ್ತಿದ್ದಳು. ಆಗಲೂ ಸಹ ನಾನು ಸಿಸಿಟಿವಿ ಹಾಕಿಸಿಲ್ಲ. ನಾನು ಯಾವುದೇ ವಿಡಿಯೋ ಶೂಟ್ ಮಾಡಿಲ್ಲ ಎಂದು ಸೈಯದ್ ಇನಾಮುಲ್ ಹಕ್ ತನ್ನ ಅಳಲು ತೋಡಿಕೊಂಡಿದ್ದಾನೆ. ಪತ್ನಿಯ ಈ ಆರೋಪಗಳಿಂದ ನೊಂದಿದ್ದೇನೆ ಅಂತಾನೂ ಹೇಳಿಕೊಂಡಿದ್ದಾನೆ. ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡುತ್ತಿರುವ ಕೆಲವೊಂದು ವಿಡಿಯೋಗಳನ್ನು ಆರೋಪಿ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ; ಗೃಹಿಣಿ ನೇ*ಣಿಗೆ ಶರಣು!

Read more Photos on
click me!

Recommended Stories