Bengaluru bedroom video case:ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಪತಿಯ ವಿರುದ್ಧ ಪತ್ನಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತನ್ನ ಪತಿ ಸೆಕ್ಸುಯಲಿ ಹೈಪರ್ ಆಕ್ಟಿವ್ ಆಗಿದ್ದು, ಹೆಸೋಸ್ಪರ್ಮಿಯಾ ಸಮಸ್ಯೆಯಿಂದ ಮಕ್ಕಳಾಗುವುದಿಲ್ಲ ಎಂದು ವೈದ್ಯಕೀಯ ವರದಿಯ ಸಮೇತ ಹೇಳಿದ್ದಾರೆ.
ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಂಡ ಸೈಯದ್ ಇನಾಮುಲ್ ಹಕ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದನು. ಪತ್ನಿಯಿಂದಲೇ ನನಗೆ ಕಿರುಕುಳ ಆಗಿದೆ. ಆಕೆ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದನು. ಇದೀಗ ಗಂಡನ ವಿಡಿಯೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ, ಗಂಡ ಸೆಕ್ಸುಯಲ್ಲಿ ಹೈಪರ್ ಆಕ್ಟಿವ್, ಅವನಿಗೆ ಮಕ್ಕಳಾಗಲ್ಲ. ಗಂಡ ಹೆಸೋಸ್ಪರ್ಮಿಯಾ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಸಂಬಂಧ ನನ್ನ ಬಳಿ ಮೆಡಿಕಲ್ ರಿಪೋರ್ಟ್ ಇದೆ ಎಂದು ಹೇಳಿದ್ದಾರೆ.
27
ನಮಗೆ ಏನು ಗೊತ್ತಿರಲಿಲ್ಲ
ಮದುವೆಗೂ ಮುಂಚೆ ಸೈಯದ್ ಇನಾಮುಲ್ ಹಕ್ ಬಗ್ಗೆ ನಮಗೆ ಏನು ಗೊತ್ತಿರಲಿಲ್ಲ. ನಮ್ಮ ತಂದೆ ಮತ್ತು ತಾಯಿ ಹಾರ್ಟ್ ಪೇಷೆಂಟ್‌ಗಳು. ಮದುವೆ ಸಮಯದಲ್ಲಿ ಮಹರ್ ರೂಪದಲ್ಲಿ ಚಿನ್ನಾಭರಣ ನೀಡಿದ್ದು ನಿಜ. ಮಹರ್‌ನಲ್ಲಿ (ಮುಸ್ಲಿಂ ಸಂಪ್ರದಾಯದಲ್ಲಿ ಗಂಡ ಹೆಂಡ್ತಿಗೆ ಕೊಡುವ ಒಡವೆ) ಏನು ಕೊಡಲಾಗಿದೆ ಎಂಬುದಕ್ಕೆ ದಾಖಲೆಗಳಿವೆ. ಗಂಡ ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ್ದು ನಿಜ. ಸೈಯದ್ ಮೊದಲನೇ ಹೆಂಡ್ತಿ ಜೊತೆಯಲ್ಲಿಯೂ ಮಾತನಾಡಿದ್ದೇನೆ. ಮದುವೆ ಬಳಿಕ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
37
ಸಂತ್ರಸ್ತೆ ಪ್ರಶ್ನೆ
ಗಂಡನ ಗೆಳೆಯ ಸೈಯದ್ ಬುಕಾರಿ ವಸೀಂ ಎಂಬಾತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸೈಯದ್ ಬುಕಾರಿ ವಾಸೀಂ ಹೆಂಡತಿ ಹೀನಾ ಕೌಸರ್ ಗರ್ಭಿಣಿಯಾಗಿದ್ದಾಳೆ ಅಂತ ನನ್ನನ್ನು ಲೈಂಗಿ*ಕವಾಗಿ ಬಳಸಿಕೊಳ್ಳಲಾಗಿದೆ. ಇವರಿಬ್ಬರು ನನಗೆ ಕಿರುಕುಳ ನೀಡಿದ್ದಾರೆ. ನಾನು ಕೆಟ್ಟವಳಾದ್ರೆ ಮೊದಲನೇ ಹೆಂಡ್ತಿಯೂ ಕೆಟ್ಟವಳಾ? ಈ ಮೊದಲಿಗಿದ್ದ 19 ಹುಡುಗಿಯರು ಕೆಟ್ಟವರಾ ಎಂದು ಸಂತ್ರಸ್ತೆ ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ಗಂಡ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೂ ಅಸಭ್ಯವಾಗಿ ವರ್ತನೆ ಮಾಡಿದ್ದರಿಂದಲೇ ಆತನ ಪ್ರಾಜೆಕ್ಟ್ ಚೇಂಜ್ ಮಾಡಲಾಗಿತ್ತು. ಕೆಲಸ ಮಾಡುವ ಸ್ಥಳದಲ್ಲಿಯೂ ಮಹಿಳಾ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ವಾಸವಾಗಿರುವ ಏರಿಯಾದಲ್ಲಿಯೂ ಅನೇಕರೊಂದಿಗೆ ಸಂಬಂಧ ಹೊಂದಿದ್ದಾನೆ. ಇಬ್ಬರು ಮಕ್ಕಳಿರುವ ಮಹಿಳೆ ಜೊತೆಯಲ್ಲಿಯೂ ಗಂಡ ಅಕ್ರಮ ಸಂಬಂಧ ಹೊಂದಿದ್ದನು. ಈ ಸಂಬಂಧ ವಿದ್ಯಾರಣ್ಯಪುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೇಕಿದ್ರೆ ಪರಿಶೀಲಿಸಬಹುದು ಎಂದು ಸಂತ್ರಸ್ತೆ ಹೇಳಿದ್ದಾರೆ.
57
ಅವನಿಗೆ ಮಕ್ಕಳಾಗಲ್ಲ
ನಮ್ಮ ಮನೆಗೆಲಸಕ್ಕೆ ಬರುವ ಹುಡುಗಿಗೂ ಲೈಂ*ಗಿಕ ಕಿರುಕುಳ ನೀಡಿದ್ದರಿಂದ ಆಕೆ ನಮ್ಮ ಮನೆಗೂ ಬರೋದನ್ನು ನಿಲ್ಲಿಸಿದಳು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಹುಡುಗಿಯೊಬ್ಬಳನ್ನು ಗರ್ಭಿಣಿ ಮಾಡಿದ್ದನು. ಆಮೇಲೆ ಏನಾಯ್ತು ಅಂತ ನನಗೆ ಗೊತ್ತಿಲ್ಲ. ಸೆಕ್ಸುಯಲ್ಲಿ ಹೈಪರ್ ಆಕ್ಟಿವ್‌ನಿಂದ ಹೆಸೋಸ್ಪರ್ಮಿಯಾ ಆಗಿದೆ. ಈಗ ಅವನಿಗೆ ಮಕ್ಕಳಾಗಲ್ಲ. ಆತ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. ಈತನಿಂದ ಮೋಸಕ್ಕೊಳಗಾದವರು ಮುಂದೆ ಬರಬೇಕು ಎಂದು ಸಂತ್ರಸ್ತೆ ಕರೆ ನೀಡಿದ್ದಾರೆ.
67
210 ಗ್ರಾಂ ಚಿನ್ನದ ಹಾರ
ನನ್ನ ಅಕ್ಕನಿಗೆ ಡಿವೋರ್ಸ್ ಆಗಿರೋದು ನಿಜ. ವಯಸ್ಸು 30ರ ನಂತರ ಮದುವೆಯಾಗಿದ್ದರಿಂದ ಎಲ್ಲವನ್ನು ಸಹಿಸಿಕೊಂಡಿದ್ದೆ. ನಾನು ಫೋರ್ಸ್ ಮಾಡಿ ಮದುವೆಯಾಗಿಲ್ಲ. ಜಿಮ್ ಓಪನ್ ಮಾಡಬೇಕೆಂದು ತಾಯಿ ಬಳಿಯಲ್ಲಿದ್ದ 210 ಗ್ರಾಂ ಚಿನ್ನದ ಹಾರವನ್ನು ತೆಗೆದುಕೊಂಡು ಹೋಗಿದ್ದಾನೆ. ಆ ಬಗ್ಗೆ ಕೇಳಿದ್ರೆ ಜಗಳ ಮಾಡುತ್ತಾನೆ.
ನನ್ನ ತಂದೆ ಮತ್ತು ಅಜ್ಜ ಇಬ್ಬರು ಕೇಂದ್ರ ಸರ್ಕಾರಿ ನೌಕರರು. ನಾನು ಸಹ ಎರಡು ಬಾರಿ UPSC ಬರೆದಿದ್ದೆ. ಆದ್ರೆ 3ನೇ ಬಾರಿ ಪರೀಕ್ಷೆ ಬರೆಯಲು ಬಿಡಲಿಲ್ಲ. ಗಂಡ ಮತ್ತು ಸೈಯದ್ ಬುಕಾರಿ ವಸೀಂ ಇಬ್ಬರ ಮೊಬೈಲ್ ಪರಿಶೀಲಿಸಿದ್ರೆ ಎಲ್ಲಾ ಸತ್ಯ ಹೊರಬರುತ್ತದೆ. ಇಬ್ಬರ ಮೊಬೈಲ್‌ನಲ್ಲಿ ಹಲವು ಯುವತಿಯರ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.