'ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾದ್ದು ಕೊ*ಲೆ..' ಪೊಲೀಸರಿಗೆ ಈ ಅನುಮಾನ ಬಂದಿದ್ದಕ್ಕೆ ಇದೇ ಕಾರಣ..

Published : Jan 11, 2026, 08:39 PM IST

Sharmila Kushalappa Murder: How Bengaluru Police Cracked the Techie’s Death Case ಬೆಂಗಳೂರಿನಲ್ಲಿ ಟೆಕ್ಕಿ ಶರ್ಮಿಳಾ ಕುಶಾಲಪ್ಪ ಅವರ ಸಾವು ಶಾರ್ಟ್ ಸರ್ಕ್ಯೂಟ್‌ನಿಂದಲ್ಲ, ಅದೊಂದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. 

PREV
112

ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಕುಶಾಲಪ್ಪ ಅವರ ಸಾವು ಶಾರ್ಟ್‌ ಸರ್ಕ್ಯೂಟ್‌ನಿಂದ ಉಸಿರುಗಟ್ಟಿ ಆಗಿದ್ದಲ್ಲ ಎಂದು ಪೊಲೀಸರು ತನಿಖೆಯ ಬಳಿಕ ಖಚಿತಪಡಿಸಿದ್ದಾರೆ. ಆಕೆಯದ್ದು, ಕೊಲೆ ಎಂದು ಹೇಳಿದ್ದು, ಕೊಲೆಗಾರನನ್ನು ಬಂಧಿಸುವಲ್ಲೂ ಪೊಲೀಸರು ಯಶಸ್ವಿಯಾಗಿದ್ದಾರೆ.

212

35 ವರ್ಷದ ಶರ್ಮಿಳಾರನ್ನು 18 ವರ್ಷದ ಕಾಲೇಜು ಹುಡುಗ ಕೇರಳ ಮೂಲದ ಕರ್ನಲ್‌ ಕುರೈ ಒನ್‌ಸೈಡ್‌ ಪ್ರೀತಿ ಮಾಡ್ತಿದ್ದ. ಇದೇ ಕಾರಣಕ್ಕಾಗಿ ಆಕೆಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ ಪೊಲೀಸರಿಗೆ ಟೆಕ್ಕಿಯ ಸಾವಿನ ಬಗ್ಗೆ ಅನುಮಾನ ಮೂಡಿದ್ದಕ್ಕೂ ಕಾರಣವಿದೆ.

312

ಪೊಲೀಸರಿಗೆ ಅನುಮಾನ ಮೂಡಿಸಿದ ಅಂಶಗಳೇನು ಅನ್ನೋದನ್ನು ನೋಡೋದಾದರೆ, ಬೆಡ್‌ರೂಮ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದರೆ, ಟೆಕ್ಕಿಯ ಶವ ಸಿಕ್ಕಿದ್ದು ಕಿಚನ್‌ನಲ್ಲಿ. ಎರಡು ಬೆಡ್‌ ರೂಮ್‌ನ ಫ್ಲಾಟ್‌ ಇದಾಗಿದ್ರೂ, ಒಂದು ಬೆಡ್‌ರೂಮ್‌ ಮಾತ್ರ ಸಂಪೂರ್ಣ ಅಗ್ನಿಗೆ ಆಹುತಿಯಾಗಿತ್ತು.

412

ಹಾಲ್‌ ಹಾಗೂ ಕಿಚನ್‌ನಲ್ಲಿ ಯಾವುದೇ ಬೆಂಕಿ ಹೊತ್ತಿದ್ದ ಕುರುಹು ಪೊಲೀಸರಿಗೆ ಕಂಡಿರಲಿಲ್ಲ. ಶಾರ್ಟ್‌ ಸರ್ಕ್ಯೂಟ್‌ ಆದರೆ, ಇಡೀ ಮನೆಗೆ ಆಗಬೇಕಿತ್ತು ಆದರೆ, ಇಲ್ಲಿ ಅಂಥ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ.

512

ಇದೇ ಅನುಮಾನದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಇಡೀ ಬೆಡ್ ರೂಂ ಹೊತ್ತಿ ಉರಿದರೂ, ಮೃತ ಟೆಕ್ಕಿ ಮೈ ಮೇಲೆ ಯಾವುದೇ ಸುಟ್ಟಗಾಯವಿರಲಿಲ್ಲ. ಮೃತ ಶರ್ಮಿಳಾ ಧರಿಸಿದ್ದ ಬಟ್ಟೆ ಕೂಡ ಸುಟ್ಟಿರಲಿಲ್ಲ ಎಂದು ಪೊಲೀಸರು ಗಮನಿಸಿದ್ದರು.

612

ಫ್ಲಾಟ್ ನಲ್ಲಿ ಮದ್ಯದ ಬಾಟಲಿ ಪತ್ತೆಯಾಗುತ್ತು. ಆದರೆ ಘಟನೆ ನಡೆದ ದಿನ ಪಾರ್ಟಿ ಮಾಡಿದ್ದಕ್ಕೆ ಯಾವುದೇ ಸಾಕ್ಷಿ ಕೂಡ ಪೊಲೀಸರಿಗೆ ಸಿಕ್ಕಿರಲಿಲ್ಲ. ಕಳೆದ ಶನಿವಾರ ಸಂಜೆ ಎಂದಿನಂತೆ ಟೆಕ್ಕಿ ಶರ್ಮಿಳಾ ತನ್ನ ಫ್ಲಾಟ್‌ಗೆ ಬಂದಿದ್ದರು ಎನ್ನುವುದು ಗೊತ್ತಾಗಿದೆ.

712

ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಸುಬ್ರಹ್ಮಣ್ಯ ಲೇಔಟ್ ನ ಖಾಸಗಿ ಅಪಾರ್ಟ್‌ಮೆಂಟ್‌ನ ಬಾಡಿಗೆ ಮನೆಯಲ್ಲಿ ಶರ್ಮಿಳಾ ವಾಸವಿದ್ದರು. ಆಕೆಯ ಸ್ನೇಹಿತೆ ಶಬರೀನ್‌ ಕೂಡ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರು.

812

ಕಳೆದ ಹದಿನೈದು ದಿನಗಳ ಹಿಂದೆ ಕೆಲಸದ ನಿಮಿತ್ತ ಸ್ನೇಹಿತೆ ಶಬರೀನ್ ದೆಹಲಿಗೆ ತೆರಳಿದ್ದರು. ಇದರಿಂದಾಗಿ ಶರ್ಮಿಳಾ ಒಬ್ಬರೇ ಮನೆಯಲ್ಲಿ ವಾಸವಿದ್ದರು. ಕಳೆದ ಶನಿವಾರ ಎಂದಿನಂತೆ ತಮ್ಮ ಮನೆಗೆ ಬಂದಿದ್ದರು.

912

ಮೈನ್ ಡೋರ್ ಮುಂದಿನ ಕಬ್ಬಿಣದ ಗೇಟ್‌ ಜೊತೆ ಮೈನ್ ಡೋರ್ ಕೂಡ ಟೆಕ್ಕಿ ಲಾಕ್‌ ಮಾಡಿ ಮಲಗಿದ್ದರು. ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ ಡಬಲ್‌ ಬೆಡ್‌ರೂಮ್‌. ಶಬರೀನ್‌ ವಾಸವಿದ್ದ ಬೆಡ್‌ರೂಮ್‌ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು.

1012

ಸ್ನೇಹಿತೆ ಶಬರೀನ್ ವಾಸವಿದ್ದ ಬೆಡ್ ರೂಮ್‌ನಲ್ಲಿ ಮಾತ್ರ ಬೆಂಕಿ ಬಿದ್ದಿದ್ದು ಅನುಮಾನಕ್ಕೆ ಕಾರಣವಾಗಿತ್ತು. ದಟ್ಟ ಹೊಗೆ ಆವರಿಸುತ್ತಿದ್ದಂತೆ ಕೆಳಗಿನ ಮನೆಯವರು ಶರ್ಮಿಳಾಗೆ ಕರೆ ಮಾಡಿದ್ದಾರೆ. ಶರ್ಮಿಳಾ ಕರೆ ಸ್ವೀಕರಿಸದಿದ್ದಾಗ ಶಬರೀನ್‌ಗೆ ಅಕ್ಕಪಕ್ಕದ ಮನೆಯವರು ಕರೆ ಮಾಡಿದ್ದಾರೆ. ಈ ವೇಳೆ ದೆಹಲಿಯಲ್ಲಿದ್ದ ಶಬರೀನ್ ಬೆಂಗಳೂರಿನ ಸ್ನೇಹಿತರಿಗೆ ವಿಚಾರ ತಿಳಿಸಿದ್ದಾರೆ. ನಂತರ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಶರ್ಮಿಳಾ ಸಾವು ಕಂಡಿದ್ದಳು.

1112

ಜ.3 ರಂದು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೋಣೆಯಲ್ಲಿ ಏಕಾಏಕಿ ದಟ್ಟವಾದ ಹೊಗೆ ಆವರಿಸಿತ್ತು. ಕಾಣಿಸಿಕೊಂಡ ಕೂಡಲೇ ಶರ್ಮಿಳಾ ಆ ಕೋಣೆಯತ್ತ ತೆರಳಲು ಯತ್ನಿಸಿದ್ದಾರೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಮನೆ ಸಂಪೂರ್ಣ ಕತ್ತಲು ಆವರಿಸಿತ್ತು. ಕತ್ತಲೆ ಮತ್ತು ದಟ್ಟ ಹೊಗೆಯ ಕಾರಣದಿಂದಾಗಿ ಕಿಟಕಿ, ಬಾಗಿಲು ತೆರೆಯಲು ಸಾಧ್ಯವಾಗದೇ ಆಕೆ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ಮೊದಲಿಗೆ ವರದಿಯಾಗಿತ್ತು.

1212

ಬೆಡ್ ರೂಂನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಅನ್ನೋದರ ಬಗ್ಗೆ ತನಿಖೆ ಮಾಡಿದ್ದ ಪೊಲೀಸರಿಗೆ ಇದು ಕೊಲೆ ಎನ್ನುವುದು ಗೊತ್ತಾಗಿದೆ. ಬಾಲ್ಕನಿ ಮೂಲಕ ಮನೆಗೆ ಹೋಗಿದ್ದ ಕರ್ನಲ್‌ ಕುರೈ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದಕ್ಕೆ ಶರ್ಮಿಳಾ ಪ್ರತಿರೋಧ ತೋರಿದ್ದಾಳೆ. ಈ ವೇಳೆ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯನಾಶ ಪಡಿಸುವ ಸಲುವಾಗಿ ಬೆಡ್‌ರೂಮ್‌ಗೆ ಬೆಂಕಿ ಹಚ್ಚಿದ್ದ ಎನ್ನಲಾಗಿದೆ.

Read more Photos on
click me!

Recommended Stories