ಪತಿ ಮಂಜುನಾಥ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮೇಘಶ್ರೀ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ಮೇಘಶ್ರೀಗೆ ಇದು ಮೂರನೇ ಮದುವೆ, ಹಣಕ್ಕಾಗಿ ಆಕೆ ಮೋಸ ಮಾಡುತ್ತಿದ್ದಾಳೆ ಎಂದು ಪತಿ ಮಂಜುನಾಥ್ ಇದೀಗ 12 ಗಂಭೀರ ಆರೋಪಗಳನ್ನು ಮಾಡಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ನನ್ನ ಗಂಡ ಸೈಕೋ, ವಿಚಿತ್ರವಾಗಿ ವರ್ತನೆ ಮಾಡುತ್ತಾನೆ. ಮನೆಯಲ್ಲಿ ನನ್ನ ತಂದೆ-ತಾಯಿ ಮುಂದೆಯೇ ಬೆತ್ತಲೆಯಾಗಿ ಓಡಾಡ್ತಾನೆ. ವಿಡಿಯೋ ತೋರಿಸಿ ಅದರಂತೆ ಲೈಂಗಿಕ ಕ್ರಿಯೆ ಮಾಡು ಎಂದು ಒತ್ತಾಯ ಮಾಡ್ತಾನೆ. ಪೀರಿಯಡ್ಸ್ ಟೈಮ್‌ನಲ್ಲೂ ಬಿಡೋದಿಲ್ಲ ಎಂದು ಆರೋಪಿಸಿ ಪತಿ ಮಂಜುನಾಥ್ ವಿರುದ್ಧ ದೂರು ನೀಡಿದ್ದ ಮೇಘಶ್ರೀ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
210
ಕಾನೂನು ಹೋರಾಟಕ್ಕೆ ಮುಂದಾದ ಮಂಜುನಾಥ್
ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಮೇಘಶ್ರೀ ನೀಡಿದ ದೂರಿಗೆ ಪ್ರತಿಯಾಗಿ ಪತಿ ಮಂಜುನಾಥ್ ಕೂಡ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ. ತಾನು ಮೇಘಶ್ರೀಗೆ ಮೂರನೇ ಗಂಡ ಎಂದಿರುವ ಮಂಜುನಾಥ್, ಹಣಕ್ಕಾಗಿ ಮದುವೆ ಆಗೋದೇ ಆಕೆಯ ಕೆಲಸ. ಮೂರು ಮದುವೆ ಆಗಿರುವ ಈಕೆಗೆ ಈಗ ನಾಲ್ಕನೇ ಗಂಡ ಬೇಕಾಗಿದೆ. ಪೊಲೀಸರು ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
310
ಒಟ್ಟು 12 ಆರೋಪ
ಮೇಘಶ್ರೀ ವಿರುದ್ಧ ಮಂಜುನಾಥ್ ಒಟ್ಟು 12 ಆರೋಪಗಳನ್ನು ಮಾಡಿದ್ದಾರೆ. ನಾಲ್ಕನೇ ಗಂಡ ಬೇಕಾಗಿರೋದು ಮಾತ್ರವಲ್ಲದೆ, ಮೊದಲ ಹಾಗೂ ಎರಡನೇ ಗಂಡನ ವಿರುದ್ಧವೂ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಆಕೆ ದೂರು ನೀಡಿದ್ದಾರೆ. ಮದುವೆಯ ಬಗ್ಗೆ ದಾಖಲಾತಿ ಕೇಳಿದಾಗ ಸಂತ್ರಸ್ಥೆ ದಾಖಲಾತಿ ನೀಡಿಲ್ಲ ಎಂದು ಮಂಜುನಾಥ್ ಆರೋಪಿಸಿದ್ದಾರೆ. ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಅಂತ ದೂರು ನೀಡಿದ್ದಾಳೆ. ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆ ಲೀಸ್‌ಗೆ ಕೊಡಿಸಿದ್ದೆ ಎಂದು ಮಂಜುನಾಥ್ ಹೇಳಿದ್ದಾರೆ.
ನಾನು ಅವರ ಮನೆಗೆ ಬಂದಾಗ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದಿದ್ದಾಳೆ. ಫೇಕ್ ದಾಖಲೆಗಳನ್ನ ನೀಡಿ ಟೆಕ್ ಮಹೇಂದ್ರದಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಆಕೆ ಕಲಿತಿರೋದೇ ಎಸ್ಸೆಸ್ಸೆಲ್ಸಿ. ಫೇಕ್ ದಾಖಲೆ ನೀಡಿ ಕೆಲಸ ಪಡೆದುಕೊಂಡಿದ್ದಾಳೆ. ಕುಟ್ಟಿ ಅಲಿಯಾಸ್ ಕುಮಾರ್ ಎಂಬ ರೌಡಿಯಿಂದ ಧಮಕಿ ಹಾಕಿದ್ದಾಳೆ. ಅಣ್ಣ ಅಂತ ರೌಡಿಶೀಟರ್ ಮೂಲಕ ಧಮಕಿ ಹಾಕಿದ್ದಾಳೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
510
ಶೋಕಿ ಮಾಡೋದಷ್ಟೇ ಕೆಲಸ..
ಬರೀ ಶೋಕಿ ಮಾಡೋದಷ್ಟೇ ಆಕೆಯ ಕೆಲಸ. ಗಂಡಸರ ಹಣ ಬಳಸಿಕೊಂಡು ಮೋಸ ಮಾಡೋದು. ಮೊದಲ ಪತಿಯನ್ನು ಚೆನ್ನಾಗಿ ಬಳಸಿಕೊಂಡಳು. ಕೊನೆಗೆ ಆತ ಷಂಡ ಅಂತ ಬಿಟ್ಟಿದ್ದಳು. 2ನೇ ವ್ಯಕ್ತಿಯ ಮದುವೆಯಾಗಿ ಜಾಲಿ ಟ್ರಿಪ್ ಮಾಡಿದ್ದಾಳೆ. ಕೊನೆಗೆ ಇವರಿಬ್ಬರ ಮೇಲೂ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಿಸಿದಳು ಎಂದಿದ್ದಾರೆ.
610
ಕೇಸ್ ಬಾಕಿ ಇರುವಾಗಲೇ ಮದುವೆ..
ಈ ಎರಡು ಕೇಸ್ ಬಾಕಿ ಇರುವಾಗಲೇ ಮದುವೆಯಾಗಿ ಮೂರನೇ ತಿಂಗಳಿಗೆ ನನಗೆ ಮೋಸ ಮಾಡಲು ಹೊರಟಿದ್ದಾಳೆ. ಈಕೆಯ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಬಂದು ಮದುವೆ ಎಂದಾಗ, ಆಕೆಯ ಹಿಂದಿನ ಮದುವೆಯ ದಾಖಲೆಗಳನ್ನ ಕೇಳಿದ್ದೆ. ಆದರೆ ಆಕೆ ನೀಡಲಿಲ್ಲ ಎಂದಿದ್ದಾರೆ.
710
ಮದುವೆ ರಿಜಿಸ್ಟರ್ ಮಾಡಿಸಬೇಕು ಎಂದಿದ್ದೆ..
ನಾವು ಕೇವಲ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದೆವು. ಆದರೆ, ಮದುವೆಯನ್ನು ರಿಜಿಸ್ಟರ್ ಮಾಡಬೇಕು ಎಂದಿದ್ದೆ. ಆಕೆಯ ಮನೆಯವರು ಯಾವುದೇ ದಾಖಲಾತಿ ನೀಡಿಲ್ಲ. ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆಯನ್ನು ಲೀಸ್‌ಗೆ ಕೊಡಿಸಿದೆ. ನನ್ನಿಂದ 30 ಲಕ್ಷ ಹಣ, 50 ಗ್ರಾಮ್ ಚಿನ್ನ, ಐಫೋನ್, ಐಪ್ಯಾಡ್, ಟ್ಯಾಬ್‌ಗಳನ್ನು ಪಡೆದುಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
810
ಉತ್ತರ ನೀಡಿದ ಮೇಘಶ್ರೀ..
ಈ ಆರೋಪಕ್ಕೂ ಮೇಘಶ್ರೀ ತಿರುಗೇಟು ನೀಡಿದ್ದು, ನಾನು ಮಂಜುನಾಥ್‌ನಿಂದ 1 ರೂಪಾಯಿ ಕೂಡ ಪಡೆದಿಲ್ಲ. ನನಗೆ ಎರಡು ಮದುವೆಯಾಗಿ ಡಿವೋರ್ಸ್ ಆಗಿರುವುದು ನಿಜ. ಇದು ಮಂಜುನಾಥ್‌ಗೂ ಗೊತ್ತಿದೆ. ಡಿವೋರ್ಸ್ ಆದ ಬಳಿಕವೇ ನಾವು ಮದುವೆಯಾಗಿದ್ದೆವು ಎಂದಿದ್ದಾರೆ.
910
ಬೇರೊಬ್ಬನ ಜೊತೆ ಮಲಗುವಂತೆ ಒತ್ತಾಯ..
ಆದರೆ, ಮದುವೆ ಆದ ಕೆಲವೇ ದಿನದಲ್ಲಿ ಅವನ ನಿಜಬಣ್ಣ ಬಯಲಾಯ್ತು. ಬೇರೊಬ್ಬರೊಂದಿಗೆ ಮಲಗುವಂತೆ ಒತ್ತಾಯ ಮಾಡುತ್ತಾನೆ. ಪತ್ನಿಯ ಫೋಟೋಗಳನ್ನು ಮತ್ತೊಬ್ಬನೊಂದಿಗೆ ಹಂಚಿಕೊಳ್ಳುತ್ತಾನೆ. ಇವರೊಂದಿಗೆ ಹೇಗೆ ನಾನು ಜೀವನ ಮಾಡಲಿ? ಎಂದು ಪ್ರಶ್ನೆ ಮಾಡಿದ್ದಾರೆ.
1010
ದೂರು ಸ್ವೀಕರಿಸದ ಪೊಲೀಸ್..
ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಮಂಜುನಾಥ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸದೇ ಇದ್ದ ಕಾರಣ ಇದೀಗ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.