ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯು ಅಕ್ರಮವಾಗಿ ಭೂಮಿ ಮಾರಾಟ ಮಾಡಿದೆ ಎಂಬ ಆರೋಪ ಎದುರಿಸುತ್ತಿದೆ. ಈ ₹250 ಕೋಟಿ ಮೌಲ್ಯದ ವ್ಯವಹಾರದ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ್ದು, ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಇನ್ಫೋಸಿಸ್ ನಿಯಮಾನುಸಾರ ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ವಿರುದ್ಧ ಅಕ್ರಮವಾಗಿ ಭೂಮಿ ಮಾರಾಟ ಆರೋಪ ಕೇಳಿ ಬಂದಿದೆ. ಈಗಾಗಲೇ ಇನ್ಫೋಸಿಸ್ ಸಂಸ್ಥೆ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದೀಗ ರಾಜ್ಯ ಸರ್ಕಾರ ಇನ್ಫೋಸಿಸ್ ಸಂಸ್ಥೆಗೆ ಬಿಗ್ ಶಾಕ್ ನೀಡಿದೆ.
25
ಸುಮಾರು 250 ಕೋಟಿ ರೂಪಾಯಿ ಮೌಲ್ಯದ ವಹಿವಾಟು
ಈ ಅಕ್ರಮದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದಾರೆ. ಇನ್ಫೋಸಿಸ್ ಸಂಸ್ಥೆಗೆ ಸೇರಿದ ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇನ್ಫೋಸಿಸ್ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ವಹಿವಾಟಿನಲ್ಲಿ 53.5 ಎಕರೆ ಭೂಮಿಯನ್ನು ಮಾರಾಟ ಮಾಡಿದೆ.
35
ಇನ್ಫೋಸಿಸ್ ಹೇಳಿದ್ದೇನು?
ತನಿಖಾ ವರದಿ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಜರುಗಿಸಲಾವುದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇತ್ತ ಹೇಳಿಕೆ ಬಿಡುಗಡೆ ಮಾಡಿರುವ ಇನ್ಫೋಸಿಸ್, ನಿಯಮಗಳ ಪ್ರಕಾರವಾಗಿ ಭೂಮಿಯನ್ನು ಮಾರಾಟ ಮಾಡಲಾಗಿದೆ. ಇದು ಸರ್ಕಾರದಿಂದ ಭೂಮಿಯನ್ನು ಹಂಚಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಾರುಕಟ್ಟೆ ಮೌಲ್ಯದಲ್ಲಿ ವಾಣಿಜ್ಯೇತರ ಮತ್ತು ಕೈಗಾರಿಕೇತರ ಭೂಮಿಯನ್ನಾಗಿ ಖರೀದಿ ಮಾಡಲಾಗಿತ್ತು ಎಂದು ಇನ್ಪೋಸಿಸ್ ಕೇಳಿಕೊಂಡಿದೆ. ಆದ್ರೆ ಈ ಭೂಮಿಯನ್ನು ಉದ್ಯಮ ಸ್ಥಾಪನೆಗೆಂದು ಕೆಐಎಡಿಬಿಯಿಂದ ಇನ್ಫೋಸಿಸ್ ಪಡೆದುಕೊಂಡಿತ್ತು ಎಂದು ಹೇಳಲಾಗುತ್ತಿದೆ.
ಅತ್ತಿಬೆಲೆ ಹೋಬಳಿಯಲ್ಲಿರುವ ಭೂಮಿ ಪ್ರಮುಖ ಸ್ಥಳದಲ್ಲಿದ್ದು, 6.4 ಮಿಲಿಯನ್ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಒಟ್ಟು ಅಭಿವೃದ್ಧಿ ಮೌಲ್ಯ (ಜಿಡಿವಿ) 4,800 ಕೋಟಿ ರೂ.ಗಳಿಗಿಂತ ಹೆಚ್ಚಿದೆ. ಈಗಾಗಲೇ ಸರ್ಜಾಪುರ ನೋಂದಣಿ ಕಚೇರಿಯಲ್ಲಿನ ಐವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.