Bengaluru: ಗಾನವಿ ಕುಟುಂಬಸ್ಥರ ವಿರುದ್ಧ ದಾಖಲಾಯ್ತು ದೂರು; ಕಂಪ್ಲೇಂಟ್ ಕೊಟ್ಟೋರು ಯಾರು?

Published : Dec 28, 2025, 08:26 AM IST

ಪತ್ನಿ ಗಾನವಿ ಆತ್ಮ*ಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪತಿ ಸೂರಜ್ ಕೂಡ ನಾಗ್ಪುರದಲ್ಲಿ ನೇಣಿಗೆ ಶರಣಾಗಿದ್ದಾನೆ. ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾದ ಬಳಿಕ ಈ ಘಟನೆ ನಡೆದಿದ್ದು, ಇದೀಗ ಸೂರಜ್ ಸೋದರ, ಗಾನವಿ ಕುಟುಂಬಸ್ಥರ ವಿರುದ್ಧವೇ ದೂರು ದಾಖಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

PREV
15
ಗಾನವಿ ಕುಟುಂಬಸ್ಥರ ವಿರುದ್ಧ ದೂರು

ಮಹಾರಾಷ್ಟ್ರದ ನಾಗ್ಪುರದ ಸೋನೆಗಾವ್ ಪೊಲೀಸ್ ಠಾಣೆಯಲ್ಲಿ ಮೃತ ಗಾನವಿ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ. ಪತ್ನಿ ಆತ್ಮ*ಹತ್ಯೆ ಬಳಿಕ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಸೂರಜ್ ಸೋದರ ಸಂಜಯ್ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

25
ಮಹಾರಾಷ್ಟ್ರದ ನಾಗ್ಪುರ

ಗಾನವಿ ಆತ್ಮ*ಹತ್ಯೆ ಬಳಿಕ ಸೂರಜ್ ತಾಯಿ ಜಯಂತಿ, ಸೋದರ ಸಂಜಯ್ ಜೊತೆಯಲ್ಲಿ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದ್ದರು. ಈ ವೇಳೆ ಹೋಟೆಲ್ ರೂಮ್‌ನಲ್ಲಿ ಸೂರಜ್ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಸೂರಜ್ ತಾಯಿ ಜಯಂತಿ ಸಹ ಆತ್ಮ*ಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಗ್ಪುರದ ಆಸ್ಪತ್ರೆಯಲ್ಲಿ ಜಯಂತಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

35
ತನಿಖೆ ಆರಂಭ

ಸೋದರನ ನಿಧನದ ಬಳಿಕ ಸಂಜಯ್ ಸೋನೆಗಾವ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೂರಜ್ ಆತ್ಮ*ಹತ್ಯೆ ಬಗ್ಗೆ ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಸಹ ಮಾಹಿತಿ ಪಡೆದುಕೊಂಡಿದ್ದಾರೆ. ಅತ್ತ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸೋನೆಗವ್ ಪೊಲೀಸರು ಸಹ ತನಿಖೆ ಆರಂಭಿಸಿದ್ದಾರೆ.

45
ಸೂರಜ್ ಪತ್ನಿ ಗಾನವಿ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸೂರಜ್ ಪತ್ನಿ ಗಾನವಿ (24) ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಸಂಬಂಧ ಸೂರಜ್, ಆತನ ತಾಯಿ ಜಯಂತಿ ಹಾಗೂ ಅಣ್ಣ ಸಂಜಯ್‌ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ದೌರ್ಜನ್ಯ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.

ಇದನ್ನೂ ಓದಿ: ಹನಿಮೂನ್‌ ಮೊಟಕುಗೊಳಿಸಿ ನವವಿವಾಹಿತೆ ನೇಣಿಗೆ ಶರಣು, ಪೊಲೀಸರು ಬರದಂತೆ ಗೇಟ್‌ ಗೆ ನಾಯಿ ಕಟ್ಟಿ ಲಾಕ್ ಮಾಡಿಕೊಂಡ ಆರೋಪಿಗಳು!

55
ಸೂರಜ್‌ ನಲ್ಲಿದ್ದ ವೈಯಕ್ತಿಕ ಸಮಸ್ಯೆ ಕಾರಣ

ಈ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಮೃತ ಸೂರಜ್ ಹಾಗೂ ಆತನ ಕುಟುಂಬದವರಿಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಈ ನಡುವೆ ತಮ್ಮ ಮಗಳು ಗಾನವಿಗೆ ಸಾವಿಗೆ ಸೂರಜ್‌ ನಲ್ಲಿದ್ದ ವೈಯಕ್ತಿಕ ಸಮಸ್ಯೆ ಕಾರಣವಾಗಿದೆ ಎಂದು ಆಕೆಯ ಸಂಬಂಧಿಕರು ದೂರಿದ್ದರು. ಈ ಬೆಳವಣಿಗೆಯಿಂದ ಬೇಸತ್ತು ಆತ ಆತ್ಮ*ಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ₹40 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ ಮಗಳು 1 ತಿಂಗಳು ಸಂಸಾರ ಮಾಡಲಿಲ್ಲ; ಹನಿಮೂನ್ ಪೂರ್ಣಗೊಳಿಸದೇ ಪ್ರಾಣಬಿಟ್ಟಳು!

Read more Photos on
click me!

Recommended Stories