ಬೆಂಗಳೂರಿನ ನವವಿವಾಹಿತರಾದ ಗಾನವಿ ಮತ್ತು ಸೂರಜ್ ಅವರ ಆತ್ಮ*ಹತ್ಯೆ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಂಡಿದೆ. ಹನಿಮೂನ್‌ನಿಂದ ಅರ್ಧಕ್ಕೆ ಮರಳಿದ ನಂತರ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಗಾನವಿ ಮತ್ತು ಸೂರಜ್ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಬ್ಬರ ಕುಟುಂಬಸ್ಥರು ದೂರು-ಪ್ರತಿದೂರು ದಾಖಲಿಸಿದ್ದಾರೆ. ಗಾನವಿ ಪೋಷಕರು ಅಳಿಯ ಸೂರಜ್ ಹಾಗೂ ಆತನ ತಾಯಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅದ್ಧೂರಿ ಮದುವೆ ಬಳಿಕ ಸೂರಜ್ ಮತ್ತು ಗಾನವಿ ಹನಿಮೂನ್‌ಗಾಗಿ ಶ್ರೀಲಂಕಾಗೆ ತೆರಳಿದ್ದರು. ಆದ್ರೆ ಇಬ್ಬರು ಅರ್ಧದಲ್ಲಿಯೇ ಹಿಂದಿರುಗಿದ್ದರು.
25
10 ದಿನದ ಹನಿಮೂನ್ ಪ್ಲಾನ್
10 ದಿನದ ಹನಿಮೂನ್ ಪ್ಲಾನ್ ಮಾಡಿಕೊಂಡಿದ್ದ ಜೋಡಿ ಐದನೇ ದಿನಕ್ಕೆ ವಾಪಸ್ ಆಗಿದ್ದರು. ಅರ್ಧದಲ್ಲಿಯೇ ಪ್ರವಾಸ ಮೊಟಕುಗೊಳಿಸಿ ಬಂದಿದ್ದು ಯಾಕೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಹನಿಮೂನ್‌ನಿಂದ ಬರುತ್ತಿದ್ದಂತೆ ಗಾನವಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಇದಾದ ಎರಡು ದಿನದ ನಂತರ ಸೂರಜ್ ಸಹ ನೇಣು ಬಿಗಿದುಕೊಂಡು ಮೃತರಾಗಿದ್ದಾರೆ.
35
ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ?
ಖಾಸಗಿ ವಾಹಿನಿಯ ವರದಿ ಪ್ರಕಾರ, ಪೋಷಕರ ಒತ್ತಡಕ್ಕೆ ಮಣಿದು ಗಾನವಿ ಮದುವೆಗೆ ಒಪ್ಪಿಕೊಂಡಿದ್ದರಂತೆ. ಹನಿಮೂನ್‌ಗೆ ತೆರಳಿದ್ದ ವೇಳೆ ಪತಿ ಸೂರಜ್ ಮುಂದೆ ಗಾನವಿ ತನ್ನ ಲವ್ ಸ್ಟೋರಿಯನ್ನು ಹೇಳಿಕೊಂಡಿದ್ದಳಂತೆ.
ಈ ವಿಷಯ ಕೇಳಿ ಶಾಕ್ ಆದ ಹರ್ಷ, ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಿದ್ದರು. ಶ್ರೀಲಂಕಾದಿಂದ ಬರುತ್ತಿದ್ದಂತೆ ಗಾನವಿ ತವರು ಮನೆಗೆ ಹೋಗಿದ್ದಳು.
ಗಾನವಿ ಮದುವೆಗೂ ಮುನ್ನ ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದರಂತೆ. ಅವನನ್ನೇ ಮದುವೆಯಾಗಬೇಕೆಂದು ಗಾನವಿ ನಿರ್ಧರಿಸಿದ್ದರು ಎಂದು ವರದಿಯಾಗಿದೆ. ಇದೀಗ ಈ ಹರ್ಷ ಯಾರು ಎಂಬುವುದು ತಿಳಿದು ಬಂದಿಲ್ಲ. ರಾಮಮೂರ್ತಿ ನಗರದಲ್ಲಿ ಗಾನವಿ ಪೋಷಕರು, ವಿದ್ಯಾರಣ್ಯಪುರದಲ್ಲಿ ಸೂರಜ್ ಕುಟುಂಬ ದೂರು ದಾಖಲಿಸಿದೆ.
ಸೂರಜ್ ಕುಟುಂಬಸ್ಥರು ದಾಖಲಿಸಿರುವ ದೂರಿನಲ್ಲಿ, ಗಾನವಿ ಮನೆಯಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮದುವೆಗೆ ಮೊದಲು ಮಗಳು ಗಾನವಿ ಯಾರನ್ನು ಪ್ರೀತಿ ಮಾಡುತ್ತಿರಲಿಲ್ಲ. ಮಗಳ ವ್ಯಕ್ತಿತ್ವದ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ವರದಕ್ಷಿಣೆ ಕಿರುಕುಳ, ಗಂಡ ಸೂರಜ್ ಆಕೆಯನ್ನು ಮುಟ್ಟಿರಲಿಲ್ಲ. ಆದ್ರೂ ಗಂಡನಿಂದ ಮಗಳು ಪ್ರೀತಿಯನ್ನು ಬಯಸಿದ್ದಳು ಎಂದು ಗಾನವಿ ತಾಯಿ ರುಕ್ಷ್ಮಿಣಿ ಹೇಳಿದ್ದಾರೆ.