ಉದ್ಯಮಿ ಸಿಜೆ ರಾಯ್ ಅಂತ್ಯಸಂಸ್ಕಾರಕ್ಕೂ ಮೊದಲು ಪುತ್ರ ರೋಹಿತ್ ಮಹತ್ವದ ಸಂದೇಶ

Published : Jan 31, 2026, 08:25 PM IST

ಉದ್ಯಮಿ ಸಿಜೆ ರಾಯ್ ಅಂತ್ಯಸಂಸ್ಕಾರಕ್ಕೂ ಮೊದಲು ಪುತ್ರ ರೋಹಿತ್ ಮಹತ್ವದ ಸಂದೇಶ ನೀಡಿದ್ದಾರೆ. ತಂದೆ ಅಗಲಿಕೆ ನೋವಿನಲ್ಲಿ ರೋಹಿತ್ ರಾಯ್ ರವಾನಿಸಿದ ಸಂದೇಶವೇನು? ಅಂತ್ಯಸಂಸ್ಕಾರ ಯಾವಾಗ?

PREV
15
ಪುತ್ರ ರೋಹಿತ್ ರಾಯ್ ಸಂದೇಶ

ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್, ಉದ್ಯಮಿ ಸಿಜೆ ರಾಯ್ ಸಾವಿಗೆ ಅಸಲಿ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಸಿಜೆ ರಾಯ್ ಸಾವು ಹಲವು ಅನುಮಾನ, ಚರ್ಚೆಗೆ ಗ್ರಾಸವಾಗಿದೆ. ಸಿಜೆ ರಾಯ್ ನಿನ್ನೆ (ಜ.30) ತಮ್ಮ ಕಚೇರಿಯ ಕೋಣೆಯಲ್ಲಿ ಎದೆಗೆ ಗುಂಡು ಹಾರಿಸಿ ದುರಂತ ಅಂತ್ಯಕಂಡಿದ್ದರು. ಇಂದು ವಿದೇಶದಲ್ಲಿದ್ದ ಸಿಜೆ ರಾಯ್ ಕುಟುಂಬಸ್ಥರು ಆಗಮಿಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಇದರ ನಡುವೆ ಪತ್ರ ಸಿಜೆ ರೋಹಿತ್ ರಾಯ್ ಮಹತ್ವದ ಸಂದೇಶ ರವಾನಿಸಿದ್ದಾರೆ.

25
ಪುತ್ರನಿಂದ ಭಾವನಾತ್ಮಕ ಸಂದೇಶ

ತಂದೆ ಸಾವಿನ ಬಗ್ಗೆ ಪುತ್ರ ರೋಹಿತ್ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ನಮ್ಮ ತಂದೆ ಡಾ. ರಾಯ್ ಸಿ.ಜೆ. ಒಬ್ಬ ದಾರ್ಶನಿಕರಾಗಿದ್ದರು. ಅವರ ಜೀವನವು ಶ್ರೇಷ್ಠತೆ, ಸಹಾನುಭೂತಿಯಿಂದ ಗುರುತಿಸಲ್ಪಟ್ಟಿದೆ. ಅಸಾಧಾರಣ ಮನಸ್ಸು ಮತ್ತು ಅನೇಕರಿಗೆ ಮಾರ್ಗದರ್ಶಕತಾಗಿದ್ದರು ಎಂದು ರೋಹಿತ್ ರಾಯ್ ಸಂದೇಶ ರವಾನಿಸಿದ್ದಾರೆ.

35
ಮುಂದಿನ ಪೀಳಿಗೆಗೆ ಸ್ಪೂರ್ತಿ

ಸಿಜೆ ರಾಯ್ ತಮ್ಮ ಬುದ್ಧಿವಂತಿಕೆಯಿಂದ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದರು. ಪ್ರಪಂಚದಾದ್ಯಂತದ ಯುವಕರಿಗೆ ಸ್ಫೂರ್ತಿಯಾಗಿದ್ದರು.ನಿಜವಾದ ಯಶಸ್ಸು ಇತರರನ್ನು ಮೇಲಕ್ಕೆತ್ತುವುದರಲ್ಲಿ ಅಡಗಿದೆ ಎಂದು ತೋರಿಸಿಕೊಟ್ಟರು. ಶ್ರಮ, ಪ್ರಯತ್ನ, ನಿರಂತರ ಹೋರಾಟಗಳಿಂದ ಹಲವು ಉದ್ಯಮಿಗಳಿಗೆ ದಾರಿ ದೀಪವಾಗಿದ್ದಾರೆ ಎಂದು ರೋಹಿತ್ ರಾಯ್ ಹೇಳಿದ್ದಾರೆ.

45
ನಾಳೆ ಮೃತದೇಹ ಹಸ್ತಾಂತರ

ಸಿಜೆ ರಾಯ್ ಮೃತದೇಹ ಬೌರಿಂಗ್ ಆಸ್ಪತ್ರೆಯಲ್ಲಿದೆ. ನಾಳೆ (ಫೆ.01) ಬೆಳಗ್ಗೆ ಬೌರಿಂಗ್ ಆಸ್ಪತ್ರೆಯಿಂದ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಕಾನ್ಫಿಡೆಂಟ್ ಗ್ರೂಪ್‌ ಮಾಲೀಕತ್ವದ ಬನ್ನೇರುಘಟ್ಟ ರಸ್ತೆಯ ನೇಚರ್ಸ್ ಲಕ್ಸುರಿ ರೆಸಾರ್ಟ್‌ನಲ್ಲಿ ಬೆಳಗ್ಗೆ 10ರಿಂದ 2ರವರೆಗೆ ರಾಯ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

55
ನೇಚರ್ಸ್ ಲಕ್ಸುರಿ ರೆಸಾರ್ಟ್ ನಲ್ಲಿ ಅಂತಿಮ ಸಂಸ್ಕಾರ

ಸ್ನೇಹಿತರು ಮತ್ತು ಕುಟುಂಬದವರಿಗೆ ಗೌರವ ಸಲ್ಲಿಸಲು ಅವಕಾಶ ನೀಡಲಾಗಿದೆ. ನಾಳೆ (ಫೆ.01) ಮಧ್ಯಾಹ್ನ 2 ಗಂಟೆಗೆ ಕಲ್ಕೆರೆಯ ಸೇಂಟ್ ಜೋಸೆಫ್ಸ್ ಸಿರೋ ಮಲಬಾರ್ ಚರ್ಚ್ ನಲ್ಲಿ ಅಂತಿಮ ವಿಧಿವಿಧಾನ ಪಕ್ರಿಯೆ ನಡೆಯಲಿದೆ. ಬಳಿಕ ನೇಚರ್ಸ್ ಲಕ್ಸುರಿ ರೆಸಾರ್ಟ್ ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ನೇಚರ್ಸ್ ಲಕ್ಸುರಿ ರೆಸಾರ್ಟ್ ನಲ್ಲಿ ಅಂತಿಮ ಸಂಸ್ಕಾರ

Read more Photos on
click me!

Recommended Stories