Cj roy ಜೊತೆ ಸದಾ ಇರುತ್ತಿತ್ತು ಬ್ರೀಫ್‌ಕೇಸ್, ಪಿಸ್ತೂಲ್; ಅಕಸ್ಮಾತ್ ಮರೆತ್ರೂ.. ಆಪ್ತ ಸಹಾಯಕ ಹೇಳಿದ್ದಿಷ್ಟು

Published : Jan 31, 2026, 12:51 PM IST

Confident Group chairman C J Roy: ಇದಾಗಿ ಕೆಲವು ನಿಮಿಷಗಳ ನಂತರ ಗುಂಡೇಟಿನ ಶಬ್ದ ಕೇಳಿಸಿದೆ. ಆದರೆ ಕ್ಯಾಬಿನ್ ಸಿಸಿಟಿವಿ ಕಣ್ಣಾವಲಿನಲ್ಲಿದೆಯೇ ಎಂದು ಪೊಲೀಸರು ಖಚಿತಪಡಿಸಿಲ್ಲ. ಅಂದಹಾಗೆ ರಾಯ್ ಯಾವಾಗಲೂ ಪಿಸ್ತೂಲ್ ಮತ್ತು ಬ್ರೀಫ್‌ಕೇಸ್ ಅನ್ನು ತಮ್ಮ ಹತ್ತಿರ ಇಟ್ಟುಕೊಂಡಿರುತ್ತಿದ್ದರು. 

PREV
17
ಕಾನ್ಸಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ

ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಕಾನ್ಫಿಡೆಂಟ್ ಗ್ರೂಪ್‌ ಚೇರ್ಮನ್ (Confident Group Chairman) ಸಿ.ಜೆ. ರಾಯ್ ಅವರು ನಿನ್ನೆ ಐಟಿ ದಾಳಿಗೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಕೊಚ್ಚಿಯ ಆದಾಯ ತೆರಿಗೆ (ಐಟಿ) ಅಧಿಕಾರಿಗಳ ತಂಡವು ಬೆಂಗಳೂರಿನ ಅಧಿಕಾರಿಗಳ ಜೊತೆ ಸೇರಿ ಕಳೆದ ಮೂರು ದಿನಗಳಿಂದ ಕಾನ್ಸಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ನಡೆಸುತ್ತಿತ್ತು. 

27
ಕ್ಯಾಬಿನ್‌ನಲ್ಲಿ ದಾಖಲೆಗಳಿವೆ ಎಂದು ತಿಳಿಸಿದ ಸಿಜೆ ರಾಯ್

ಈ ದಾಳಿಯಲ್ಲಿ ಐಟಿ ಅಧಿಕಾರಿಗಳು ಕೆಲವು ದಾಖಲೆಗಳನ್ನು ಪರಿಶೀಲಿಸಿ ವಶಪಡಿಸಿಕೊಂಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನಲ್ಲಿರುವ ಕಾನ್ಸಿಡೆಂಟ್ ಗ್ರೂಪ್ ಕಚೇರಿಗೆ ಐಟಿ ಅಧಿಕಾರಿಗಳು ಆಗಮಿಸಿದ್ದಾರೆ. 2 ಗಂಟೆಗೆ ಸಿಜೆ ರಾಯ್ ಕಚೇರಿಗೆ ಬಂದಿದ್ದಾರೆ. ನಂತರ ಅಧಿಕಾರಿಗಳು ಶೋಧನ ಕಾರ್ಯ ಮುಂದುವರೆಸಿದ್ದರೆ, 3 ಗಂಟೆ ಸುಮಾರಿಗೆ ರಾಯ್ ತನ್ನ ಕ್ಯಾಬಿನ್‌ನಲ್ಲಿ ಕೆಲವು ದಾಖಲೆಗಳಿವೆ ಎಂದು ಐಟಿ ಅಧಿಕಾರಿಗಳಿಗೆ ತಿಳಿಸಿ ಒಳಗೆ ಹೋದರು ಎಂದು ವರದಿಯಾಗಿದೆ.

37
ಪಿಸ್ತೂಲ್ ಮತ್ತು ಬ್ರೀಫ್‌ಕೇಸ್ ಇರುತ್ತಿತ್ತು

ಇದಾಗಿ ಕೆಲವು ನಿಮಿಷಗಳ ನಂತರ ಗುಂಡೇಟಿನ ಶಬ್ದ ಕೇಳಿಸಿದೆ. ಆದರೆ ಕ್ಯಾಬಿನ್ ಸಿಸಿಟಿವಿ ಕಣ್ಣಾವಲಿನಲ್ಲಿದೆಯೇ ಎಂದು ಪೊಲೀಸರು ಖಚಿತಪಡಿಸಿಲ್ಲ. ಅಂದಹಾಗೆ ರಾಯ್ ಯಾವಾಗಲೂ ಪಿಸ್ತೂಲ್ ಮತ್ತು ಬ್ರೀಫ್‌ಕೇಸ್ ಅನ್ನು ತಮ್ಮ ಹತ್ತಿರ ಇಟ್ಟುಕೊಂಡಿರುತ್ತಿದ್ದರು.

47
ಹತ್ತಿರದಲ್ಲೇ ಇಟ್ಟುಕೊಳ್ಳುತ್ತಿದ್ದರು ಏಕೆಂದರೆ...

ರಾಯ್ ಯಾವಾಗಲೂ ತಮ್ಮ ಬ್ರೀಫ್‌ಕೇಸ್ ಅನ್ನು ತಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳುತ್ತಿದ್ದರು. ಏಕೆಂದರೆ ಅದರಲ್ಲಿ ಅವರ ಪಿಸ್ತೂಲ್, ದಾಖಲೆಗಳು ಇತ್ತು ಎಂದು ಆಪ್ತ ಸಹಾಯಕರೊಬ್ಬರು ತಿಳಿಸಿದ್ದಾರೆ. "ಅಪರೂಪದ ಸಂದರ್ಭಗಳಲ್ಲಿ ಅವರು ಅದನ್ನು ಬಿಟ್ಟುಹೋದಾಗ, ಅವರು ತಕ್ಷಣ ತಮ್ಮ ಅಂಗರಕ್ಷಕರನ್ನು ಅದನ್ನು ತರಲು ಕಳುಹಿಸುತ್ತಿದ್ದರು" ಎಂದು ಅವರು ತಿಳಿಸಿದ್ದಾರೆ. 

57
ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ

3.10 ಸಮಯಕ್ಕೆ ಪಿಸ್ತೂಲು ಹೊರತೆಗೆದು, ಎದೆಗೆ ಗುಂಡು ಹಾರಿಸಿಕೊಂಡು ಕುಸಿದು ಬಿದ್ದಾಗ ನೌಕರರು ಮತ್ತು ಅಧಿಕಾರಿಗಳು ರಾಯ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಎಚ್‌ಎಸ್‌ಆ‌ರ್ ಲೇಔಟ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಿದರು. ಆದರೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆಂದು ತಿಳಿಸಲಾಗಿದೆ. 

67
ಸಹೋದರ ಸಿಜೆ ಬಾಬು ಹೇಳಿದ್ದೇನು?

ಇನ್ನು ವೈಟ್‌ಗೋಲ್ಡ್ ಮಾಲೀಕ, ರಾಯ್ ಅವರ ಸಹೋದರ ಸಿಜೆ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳದ ಆದಾಯ ತೆರಿಗೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದರು. ಒತ್ತಡದಿಂದಾಗಿ ರಾಯ್ ಪಿಸ್ತೂಲ್ ಬಳಸಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಐಟಿ ತಂಡವೇ ಕಾರಣ ಎಂದು ಆರೋಪಿಸಿದ್ದಾರೆ.

77
ಅವರ ಸಾವು ಆಘಾತಕಾರಿಯಾಗಿದೆ

ರಾಯ್ ಅವರ ಕುಟುಂಬ ದುಬೈನಲ್ಲಿ ವಾಸಿಸುತ್ತಿದ್ದರೂ, ಐಟಿ ಅಧಿಕಾರಿಗಳು ನಗರದಲ್ಲಿಯೇ ಇರುವಂತೆ ನಿರ್ದೇಶಿಸಿದ ನಂತರ ರಾಯ್ ಬೆಂಗಳೂರಿಗೆ ಮರಳಿದ್ದರು. "ರಾಯ್ ಅವರೊಂದಿಗೆ ಕೆಲಸ ಮಾಡಿದ ಇಷ್ಟು ವರ್ಷಗಳಲ್ಲಿ, ಅವರು ಎಂದಿಗೂ ದುರ್ಬಲ ಹೃದಯಿಯಾಗಿ ಕಾಣಿಸಿಕೊಂಡಿಲ್ಲ. ಅವರ ಸಾವು ಆಘಾತಕಾರಿಯಾಗಿದೆ" ಎಂದು ಸಹಾಯಕರೊಬ್ಬರು ಹೇಳಿದ್ದಾರೆ.

Read more Photos on
click me!

Recommended Stories