ಉದ್ಯಮಿ ಸಿ.ಜೆ.ರಾಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಅವರು ಉಳಿದುಕೊಳ್ಳುತ್ತಿದ್ದ ಬೆಂಗಳೂರಿನ ಕಾನ್ರಾಡ್ ಹೋಟೆಲ್‌ನ ಖಾಯಂ ಕೋಣೆಯನ್ನು ಪರಿಶೀಲಿಸಿದ್ದಾರೆ. ಈ ತನಿಖೆಯಲ್ಲಿ, ರಾಯ್ ಅವರ ಐಷಾರಾಮಿ ಜೀವನ ಮತ್ತು ಸಾವಿನ ಹಿಂದಿನ ಸಂಭಾವ್ಯ ಕಾರಣಗಳನ್ನು ಶೋಧಿಸಲಾಗುತ್ತಿದೆ.
ಆಗರ್ಭ ಶ್ರೀಮಂತರು ಇಂತಹದ್ದೇ ಸಂಖ್ಯೆಯ ಕೋಣೆಯಲ್ಲಿ ಉಳಿದುಕೊಳ್ಳಬೇಕೆಂದು ಬಯಸುತ್ತಾರೆ. ಹೆಚ್ಚಾಗಿ ಭೇಟಿ ನೀಡುವ ನಗರಗಳ ಪ್ರಮುಖ ಹೋಟೆಲ್‌ಗಳಲ್ಲಿ ತಮಗಾಗಿಯೇ ಕೋಣೆಯೊಂದನ್ನು ಯಾವಾಗಲೂ ಕಾಯ್ದಿರಿಸಿಕೊಂಡಿರುತ್ತಾರೆ. ಉದ್ಯಮಿ ಸಿ.ಜೆ.ರಾಯ್ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಹೊಂದಿದ್ರೂ ಖಾಸಗಿ ಹೋಟೆಲ್‌ನಲ್ಲಿ ರೂಮ್ ಕಾಯ್ದಿರಿಸಿಕೊಂಡಿದ್ದರು.
25
ಕೋಣೆಯ ಪರಿಶೀಲನೆ
ಶುಕ್ರವಾರ ಪ್ರಾಣ ಕಳೆದುಕೊಂಡಿರುವ ಸಿ.ಜೆ.ರಾಯ್ ಪ್ರಕರಣದ ತನಿಖೆಗೆ ಇಳಿದಿರುವ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ. ಸಿ.ಜೆ.ರಾಯ್ ಉಳಿದುಕೊಳ್ಳತ್ತಿದ್ದ ಹೋಟೆಲ್‌ಗೆ ಭೇಟಿ ನೀಡಿರುವ ಪೊಲೀಸರು, ಅವರ ಕೋಣೆಯನ್ನು ಜಾಲಾಡಿದ್ದಾರೆ. ಈ ಕೋಣೆಯನ್ನು ರಾಯ್ ಅವರು ಅದೃಷ್ಟ ಎಂದು ಭಾವಿಸುತ್ತಿದ್ದರಂತೆ.
35
ಕಾನ್ರಾಡ್ ಹೋಟೆಲ್
ಬೆಂಗಳೂರಿನ ಹಲಸೂರು ಬಳಿಯ ಕಾನ್ರಾಡ್ ಹೋಟೆಲ್‌ನಲ್ಲಿ ರಾಯ್ ಉಳಿದುಕೊಳ್ಳುತ್ತಿದ್ದರು. ಹೋಟೆಲ್‌ನ 24ನೇ ಮಹಡಿಯಲ್ಲಿನ ಒಂದು ಕೋಣೆಯನ್ನು ರಾಯ್ ತಮಗಾಗಿ ಫಿಕ್ಸ್ ಮಾಡಿಕೊಂಡಿದ್ದರು. ಹೀಗಾಗಿ ಯಾವುದೇ ಸಂದರ್ಭದಲ್ಲಿ ಇಲ್ಲಿಗೆ ಬಂದ್ರೆ ಇದೇ ಕೋಣೆಗೆ ರಾಯ್ ಬರುತ್ತಿದ್ದರು. ಆತ್ಮ*ಹತ್ಯೆಗೂ ಮುನ್ನ ಸಹ ಸಿ.ಜೆ.ರಾಯ್ ಇಲ್ಲಿಯೇ ಉಳಿದುಕೊಂಡಿದ್ರಂತೆ.
ಈ ಹಿನ್ನೆಲೆ ಇಂದು ಇದೇ ರೂಮ್‌ಗೆ ಎಫ್‌ಎಸ್‌ಎಲ್ ತಂಡದ ಜೊತೆ ಭೇಟಿ ನೀಡಿರುವ ಪೊಲೀಸರು ಇಂಚಿಂಚು ಪರಿಶೀಲನೆ ನಡೆಸಿ ಒಂದಷ್ಟು ಫಿಂಗರ್ ಪ್ರಿಂಟ್ ಕಲೆ ಹಾಕಿರುವ ಬಗ್ಗೆ ತಿಳಿದು ಬಂದಿದೆ. ರಾಯ್ ಕುಟುಂಬಸ್ಥರ ಮುಂದೆಯೇ ಕೋಣೆಯ ಬಾಗಿಲು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸಿಜೆ ರಾಯ್ ಐಷಾರಾಮಿ ಜೀವನ ನಡೆಸುತ್ತಿದ್ದ ವ್ಯಕ್ತಿಯಾಗಿದ್ದರು. ಸಾಮಾನ್ಯ ಇವೆಂಟ್‌ಗಳಿಗೂ 3-4 ಕೋಟಿ ರೂ. ಖರ್ಚು ಮಾಡುತ್ತಿದ್ದರು. ತಮ್ಮ ಅತಿಥಿಗಳೆಲ್ಲರನ್ನೂ ಐಷಾರಾಮಿ ಹೋಟೆಲ್‌ಗಳಲ್ಲಿ ಸೂಟ್ ರೂಮ್‌ಗಳ ವ್ಯವಸ್ಥೆ ಮಾಡುತ್ತಿದ್ದರು. ಅತಿಥಿಗಳನ್ನು ಪಿಕಪ್ ಆಂಡ್ ಡ್ರಾಪ್ ಮಾಡಲು ಸಹ ಐಷಾರಾಮಿ ವಾಹನಗಳನ್ನು ಬುಕ್ ಮಾಡುತ್ತಿದ್ದರು. ಈ ಮೂಲಕ ತಮ್ಮ ಶ್ರೀಮಂತಿಕೆಯನ್ನು ರಾಯ್ ಪ್ರದರ್ಶನ ಮಾಡುತ್ತಿದ್ದರು.