Bengaluru love jihad case: ಬೆಂಗಳೂರಿನಲ್ಲಿ ಯುವತಿಯೊಬ್ಬಳು ಮೊಹಮ್ಮದ್ ಇಶಾಕ್ ಎಂಬಾತನ ವಿರುದ್ಧ ಮದುವೆ ವಂಚನೆ ದೂರು ದಾಖಲಿಸಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ನಂತರ ಮತಾಂತರವಾಗುವಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ.
ರಾಜಧಾನಿ ಬೆಂಗಳೂರಿನ ಹೆಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ಲವ್, ಸೆ*, ದೋಖಾ (ಲವ್ ಜಿಹಾದ್) ಆರೋಪದ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಇಶಾಕ್ ಎಂಬಾತನ ವಿರುದ್ದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಮದುವೆ ಬಗ್ಗೆ ಪ್ರಸ್ತಾಪಿಸಿದ್ರೆ ಮತಾಂತರವಾಗುವಂತೆ ಒತ್ತಡ ಹಾಕಲಾಯ್ತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
27
ಮದುವೆಯಾಗೋದಾಗಿ ನಂಬಿಸಿ ಮೋಸ
2024ರ ಅಕ್ಟೋಬರ್ 17ರಂದು ಯುವತಿಗೆ ಮೊಹಮ್ಮದ್ ಇಶಾಕ್‌ನ ಪರಿಚಯವಾಗಿತ್ತು. ಈ ಪರಿಚಯ ಸ್ನೇಹ ಮತ್ತು ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಬೇಕಿರಲಿಲ್ಲ. 2024ರ ಅಕ್ಟೋಬರ್ 30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಭೇಟಿಯಾಗಿದ್ದರು. ನಂತರ ಯುವತಿ ಜೊತೆ ಇಶಾಕ್ ಸಲುಗೆ ಬೆಳೆಸಿಕೊಂಡಿದ್ದನು. ಮದುವೆ ಸಂಬಂಧ ಮನೆಯವರೊಂದಿಗೆ ಮಾತನಾಡೋದಾಗಿ ಇಶಾಕ್ ನಂಬಿಸಿದ್ದನು.
37
ಖಾಸಗಿ ಹೋಟೆಲ್‌ಗೆ ಕರೆಸಿಕೊಂಡ!
ಒಂದು ದಿನ ದಾಸರಹಳ್ಳಿ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದ ಇಶಾಕ್, ಯುವತಿಯನ್ನು ಕರೆಸಿಕೊಂಡಿದ್ದನು. ಈ ವೇಳೆ ಮದುವೆಯ ಭರವಸೆ ನೀಡಿ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ನಂತರ ಹಲವು ಬಾರಿ ಸಂಪರ್ಕ ಬೆಳೆಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆಲವು ದಿನಗಳ ನಂತರ ಬೇರೆ ಯುವತಿಯರ ಜೊತೆ ಇಶಾಕ್ ಸಂಪರ್ಕ ಹೊಂದಿರುವ ವಿಷಯ ಗೊತ್ತಾಗಿದೆ.
2025ರ ಸೆ.14ರಂದು ಮುಸ್ಲಿಂ ಯುವತಿ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿದು ಪ್ರಶ್ನೆ ಮಾಡಿದಾಗ, ನಿನ್ನ ದಾರಿಯನ್ನು ನೀನು ನೋಡಿಕೋ ಎಂದು ಇಶಾಕ್ ಹೇಳಿದ್ದಾನೆ. ಇಷ್ಟು ಮಾತ್ರವಲ್ಲ ಪದೇ ಪದೇ ಕರೆ ಮಾಡಿದ್ರೆ ಕೊ*ಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
57
ಇಶಾಕ್ ಕುಟುಂಬಸ್ಥರೊಂದಿಗೆ ಸಂತ್ರಸ್ತೆ ಮಾತು
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಸಂತ್ರಸ್ತೆ, ಒಮ್ಮೆ ನಾನು ಆತ್ಮ*ಹತ್ಯೆಗೆ ಯತ್ನಿಸಿದಾಗ ಇಶಾಕ್ ಕುಟುಂಬದವರು ಕರೆ ಮಾಡಿ ಕರೆಸಿಕೊಂಡಿದ್ದರು. ಯಾವ ಕಾರಣಕ್ಕೆ ಸೂ*ಸೈಡ್ ಮಾಡಿಕೊಳ್ತೀಯಾ? ಕೇಸ್ ಅಂತೆಲ್ಲಾ ಹೋಗಬೇಡ. ಅವನೊಂದಿಗೆ ಮಾತನಾಡಿ ಒಂದು ನಿರ್ಧಾರ ಮಾಡು. ಏನಾದರೂ ಇದ್ರು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದರು. ನನ್ನ ವಿಷಯವನ್ನು ಕುಟುಂಬಸ್ಥರಿಗೆ ಹೇಳಿರಲಿಲ್ಲ ಎಂದಿದ್ದಾರೆ.
67
ಮತಾಂತರಕ್ಕೆ ಒತ್ತಡದ ಆರೋಪ
ಒಂದು ದಿನ ಇಶಾಕ್‌ನ ಸೋದರ ಮತ್ತು ಬಾವ ಬಂದು ನನ್ನೊಂದಿಗೆ ಮಾತನಾಡಿ ಮತಾಂತರ ಆಗುವಂತೆ ಹೇಳಿದ್ದರು. ಮತಾಂತರವಾಗಲು 40 ದಿನ ಸಮಯ ಇರುತ್ತೆ. ನಮಾಜ್ ಮಾಡಲು ಕಲಿತುಕೊಳ್ಳಬೇಕು. ಮೊದಲು ಮತಾಂತರ ಆಗು, ಆನಂತರ ಮದುವೆ ಬಗ್ಗೆ ಮಾತನಾಡೋಣ ಎಂದಿದ್ದರು ಅಂತ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಸಂತ್ರಸ್ತೆ ಹೆಚ್ಎಸ್‌ಆರ್ ಲೇಔಟ್‌ನಲ್ಲಿ ದೂರು ದಾಖಲಿಸಿದ್ದರು. ಈ ಎಲ್ಲಾ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋದರಿಂದ ಪ್ರಕರಣ ವರ್ಗಾಯಿಸಲಾಗಿದೆ. ಸದ್ಯ ಪ್ರಕರಣ ಅಮೃತಹಳ್ಳಿ ಠಾಣೆಗೆ ವರ್ಗಾವಣೆಯಾಗಿದೆ. ನ್ಯಾಯ ಕೊಡಿಸುವಂತೆ ಸಂತ್ರಸ್ತೆ ಮನವಿ ಮಾಡಿಕೊಂಡಿದ್ದಾರೆ.