ಯಾವ ರಾಶಿಯವರಿಗೆ ವಾರದ ಯಾವ ದಿನ ಶುಭ?

Published : May 17, 2025, 02:09 PM ISTUpdated : May 19, 2025, 12:23 PM IST

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ ಎನ್ನುತ್ತಾರೆ ವರಕವಿ ಬೇಂದ್ರೆ. ದಿನವೂ ನಿತ್ಯನೂತನ. ಯಾವ ಬೆಳಗೂ, ರಾತ್ರಿಯೂ ಒಂದೇ ಆಗಿರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ದಿನ ಶುಭ ತರುತ್ತದೆ. ವಾರದ ಏಳು ದಿನಗಳೂ ಒಬ್ಬೊಬ್ಬರಿಗೆ ಒಂದೊಂದು ದಿನ ಅದೃಷ್ಟ ತರುತ್ತದೆ . ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರಿಗೆ ವಾರದ ಯಾವ ದಿನ ಶುಭ? ನಿಮ್ಮ ರಾಶಿಯವರಿಗೆ ಅದೃಷ್ಟ ತರೋ ದಿನವನ್ನು ನೋಡಿಕೊಂಡು ಶುಭ ಕಾರ್ಯಕ್ಕೆ ಕೈ ಹಾಕಿ.    ಹಾಗಾಗಿ ರಾಶಿಯ ಅನುಸಾರವಾಗಿ ಯಾವ ರಾಶಿಯವರಿಗೆ ಯಾವ ದಿನ ಶುಭ? ಎಂದು ತಿಳಿದುಕೊಂಡರೆ ಆ ದಿನದಂದೇ ಹೊಸ ಕೆಲಸಕ್ಕೆ ಕೈ ಹಾಕಬಹುದು. ಆ ದಿನ ಆರಂಭಿಸಿದಲ್ಲಿ ಕೆಲಸದಲ್ಲಿ ಯಶಸ್ಸು (Victory) ಸಿಗುತ್ತದೆ ಎಂಬ ಬಗ್ಗೆ ಶಾಸ್ತ್ರ ಹೇಳುತ್ತದೆ. 

PREV
112
ಯಾವ ರಾಶಿಯವರಿಗೆ ವಾರದ ಯಾವ ದಿನ ಶುಭ?
ಮೇಷ

ತುಂಬಾ ಚುರುಕಾಗಿರುವುದಲ್ಲದೇ, ಸದಾ ಕ್ರೀಯಾಶೀಲರಾಗಿರುತ್ತಾರೆ ಮೇಷ ರಾಶಿಯವರು. ಉತ್ಸಾಹವೇ ಇವರ ಶಕ್ತಿ ಮತ್ತು ಸ್ಪೂರ್ತಿ. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ಇವರಿಗೆ ಮಂಗಳವಾರವೇ ಶುಭವೆಂದು ಪರಿಗಣಿಸಲಾಗುತ್ತದೆ.   

212
ವೃಷಭ

ಈ ರಾಶಿಯ ಅಧಿಪತಿ ಗ್ರಹ ಶುಕ್ರ. ವೃಷಭ ರಾಶಿಯವರು ಹುಟ್ಟಿನಿಂದಲೂ ಹಠವಾದಿಗಳು ಮತ್ತು ಗುರಿ ತಲುಪುವ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಯಾವುದನ್ನಾದರೂ ಮಾಡಬೇಕೆಂದು ನಿರ್ಧರಿಸಿದರೆ, ಅದನ್ನು ಮುಗಿಸುವ ತನಕ ಇವರಿಗೆ ಸಮಾಧಾನವೇ ವಿರುವುದಿಲ್ಲ. ಈ ರಾಶಿಯವರಿಗೆ ಶುಭದಿನ ಬುಧವಾರ ಮತ್ತು ಶುಕ್ರವಾರ. ಈ ದಿನಗಳಂದು ಇವರು ಕೈ ಹಿಡಿದ ಕೆಲಸ ಕೈ ಹಿಡಿಯುತ್ತದೆ. 

312
ಮಿಥುನ

ಈ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯವರ ಗ್ರಹಿಕೆ (Grasping Power) ಮತ್ತು ಸ್ಮರಣಾ ಶಕ್ತಿ (Memory Power) ತುಂಬಾ ಚೆನ್ನಾಗಿರುತ್ತದೆ. ಕ್ಷಣದಲ್ಲಿಯೇ ಎಂಥವರನ್ನೂ ಸೆಳೆಯುವಂಥ ವ್ಯಕ್ತಿತ್ವ, ಕ್ಷಮತೆ ಇವರದ್ದು. ವಾರದ ಏಳು ದಿನಗಳಲ್ಲಿ ಬುಧವಾರ ಇವರಿಗೆ ಶ್ರೇಯಸ್ಸು ತರುತ್ತದೆ. ಈ ರಾಶಿಯವರ ಹೆಚ್ಚು ಕೆಲಸಗಳು ಈ ದಿನದಂದೇ ಪೂರ್ಣವಾಗುತ್ತವೆ.

412
ಕರ್ಕಾಟಕ

ಈ ರಾಶಿಯ ಅಧಿಪತಿ ಚಂದ್ರ ಈ ರಾಶಿಯವರು ಉತ್ತಮ ವಿಚಾರ ಮತ್ತು ಕಲ್ಪನಾ ಶಕ್ತಿಗೆ ಹೆಸರುವಾಸಿ. ಸೋಮವಾರ  ಕರ್ಕಾಟಕ ರಾಶಿಯವರಿಗೆ ಅದೃಷ್ಟದ ದಿನವೆನ್ನಬಹುದು. ಸೋಮವಾರದಂದು ಮಾಡಿದ ಕೆಲಸಗಳು ಇವರಿಗೆ ಶುಭಫಲ ನೀಡುತ್ತವೆ. ಶುಭವಾರ್ತೆಯನ್ನು ಸೋಮವಾರದಂದೇ ಕೇಳುವಂಥಾಗುತ್ತದೆ.

512
ಸಿಂಹ

ಈ ರಾಶಿಯವರ ಅಧಿಪತಿ ಗ್ರಹ ಸೂರ್ಯ ಮತ್ತು ಲಕ್ಕಿ ಡೇ ಭಾನುವಾರ. ಸೂರ್ಯ ಗ್ರಹದ ಅಧಿಪತ್ಯದಲ್ಲಿರುವ ಸಿಂಹ ರಾಶಿಯವರಿಗೆ ಭಾನುವಾರ ಅತ್ಯಂತ ಮಹತ್ವಪೂರ್ಣ ಮತ್ತು ಪ್ರಭಾವದ ದಿನ. ಸಿಂಹ ರಾಶಿಯವರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಈ ದಿನವೇ ಪ್ರಶಸ್ತವಾಗಿರುತ್ತದೆ.

612
ಕನ್ಯಾ

ಈ ರಾಶಿಯವರ ಅಧಿಪತಿ ಗ್ರಹ ಬುಧ.  ತಮ್ಮ ಪ್ರತಿಭೆಯನ್ನು ಎಲ್ಲಿ ತೋರಿಸಬೇಕೆಂಬ ಬಗ್ಗೆ ಈ ರಾಶಿಯವರಿಗೆ ಸ್ಪಷ್ಟ ಚಿತ್ರಣವಿರುತ್ತದೆ. ಕನ್ಯಾ ರಾಶಿಯವರ ಪರಿಪೂರ್ಣತೆ ಇತರರನ್ನು ಮೆಚ್ಚಿಸುವಂತಿರುತ್ತದೆ. ಈ ರಾಶಿಯವರಿಗೆ ಬುಧವಾರ ಶುಭ ವಾರ ಹಾಗೂ ಶುಭ ದಿನ. 

712
ತುಲಾ

ತುಲಾ ರಾಶಿಯವರ ಅಧಿಪತಿ ಗ್ರಹ ಶುಕ್ರ. ಮನೆ ಮತ್ತು ಕಚೇರಿ ಎರಡನ್ನು ಅತ್ಯಂತ ಚೆನ್ನಾಗಿ ನಿಭಾಯಿಸುವ ಚಾಕಚಕ್ಯತೆ ಇವರಲ್ಲಿರುತ್ತದೆ. ಬೇರೆ ದಿನಗಳಿಗೆ ಹೋಲಿಸಿದರೆ ಶುಕ್ರವಾರ ಇವರಿಗೆ ಅತ್ಯಂತ ಖುಷಿ ಕೊಡುವ ವಾರವಲ್ಲದೇ ಉತ್ತಮ ಅನುಭವಗಳಾಗುವ ದಿನವಾಗಿರುತ್ತದೆ.

812
ವೃಶ್ಚಿಕ

ಈ ರಾಶಿಯವರ ಅಧಿಪತಿ ಗ್ರಹ ಮಂಗಳ. ಎಲ್ಲ ಕ್ಷೇತ್ರಗಳಲ್ಲೂ ಉತ್ತಮರೆಂದು ಸಾಬೀತು ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನವನ್ನು ಚಾಚೂ ತಪ್ಪದೇ ಫಾಲೋ ಮಾಡುತ್ತಾರೆ. ಈ ರಾಶಿಯವರಿಗೆ ಮಂಗಳವಾರದಷ್ಟು ಉತ್ತಮ ದಿನ ಮತ್ಯಾವುದೂ ಆಗಲು ಸಾಧ್ಯವಿಲ್ಲ. ಈ ದಿನ ವೃಶ್ಚಿಕ ರಾಶಿಯವರಿಗೆ ಅದೃಷ್ಟದ ದಿನ.

912
ಧನು

ಈ ರಾಶಿಯವರ ಅಧಿಪತಿ ಗ್ರಹ ಗುರು. ಹಾಗಾಗಿ ಈ ರಾಶಿಯವರಿಗೆ ಗುರುವಾರ ಅತ್ಯಂತ ಶುಭ. ಗುರುವಿನಿಂದ ಆಳಲ್ಪಡುವ ಈ ರಾಶಿಯವರು ಉತ್ತಮ ವ್ಯಕ್ತಿತ್ವಕ್ಕೆ, ಉದಾರತೆಗೆ ಸಾಮಾನ್ಯವಾಗಿ ಹೆಸರುವಾಸಿ. ಗುರುವಾರದಂದು ಮಾಡುವ ಕೆಲಸಗಳು ಇವರಿಗೆ ಯಶಸ್ಸು ತಂದು ಕೊಡಲಿದೆ.

1012
ಮಕರ

ಈ ರಾಶಿಯ ಅಧಿಪತಿ ಶನಿ. ಭಿನ್ನವಾದ ಕಾರ್ಯಗಳನ್ನು ಮಾಡಿ ಎಲ್ಲರ ನಡುವೆ ಎದ್ದು ಕಾಣಲು ಬಯಸುವ ಗುಣ ಈ ರಾಶಿಯವರದ್ದು. ಇವರಿಗೆ ಶುಭ ದಿನ ಶನಿವಾರ. ಶನಿವಾರದಂದು ಮಾಡುವ ಕಾರ್ಯಗಳು ಇವರಿಗೆ ಸಫಲತೆ ತಂದುಕೊಡುತ್ತದೆ.

1112
ಕುಂಭ

ಈ ರಾಶಿಯವರಿಗೂ ಅಧಿಪತಿ ಗ್ರಹ ಶನಿ ದೇವ. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಈ ರಾಶಿಯವರು ಬದಲಾವಣೆಗಳಿಗೆ ವಿಚಲಿತರಾಗುವುದಿಲ್ಲ, ಇವರಿಗೆ ಶನಿವಾರವು ಶುಭ ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ. 

1212
ಮೀನ

ಈ ರಾಶಿಗೆ ಅಧಿಪತಿ ಗ್ರಹ ಗುರು. ಇವರಿಗೆ ಉತ್ತಮ ದಿನ ಗುರುವಾರವಾಗಿರುತ್ತದೆ.  ಗುರುವಾರದಂದು ಹೆಚ್ಚು ಉತ್ಸುಕರಾಗಿರುವ ಈ ರಾಶಿಯವರು, ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಗುರುವಾರದಂದು.

Read more Photos on
click me!

Recommended Stories