Published : Jul 22, 2025, 07:07 PM ISTUpdated : Jul 22, 2025, 07:08 PM IST
ವಾರಕ್ಕೊಮ್ಮೆಯಾದರೂ ಬಹುತೇಕ ಎಲ್ಲರೂ ತಲೆಸ್ನಾನ ಮಾಡಿಯೇ ಮಾಡುತ್ತಾರೆ. ಆದರೆ ತಲೆಸ್ನಾನ ಮಾಡುವಾಗ ಕೆಲವೊಂದು ವಾರಗಳನ್ನು ನಿಷೇಧಿಸಿದರೆ ಒಳ್ಳೆಯದು. ತಲೆಸ್ನಾನಕ್ಕೆ ಯಾವ ದಿನ ಶುಭ, ಯಾವ ದಿನ ಅಶುಭ? ಇಲ್ಲಿದೆ ಮಾಹಿತಿ...
ಸಾಮಾನ್ಯವಾಗಿ ಉದ್ಯೋಗಸ್ಥರು ಸೇರಿದಂತೆ ಬಹುತೇಕ ಮಂದಿ ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ದಿನಗಳು ತಲೆ ಸ್ನಾನ ಮಾಡುವುದು ರೂಢಿ. ಅದರಲ್ಲಿಯೂ ಸಾಮಾನ್ಯವಾಗಿ ಭಾನುವಾರವೇ ತಲೆ ಸ್ನಾನ ಮಾಡುತ್ತಾರೆ. ಆದರೆ ತಲೆಸ್ನಾನ ಮಾಡುವ ಹಿಂದೆಯೂ ಶುಭ-ಅಶುಭಗಳು ಇವೆ ಎಂದು ಹೇಳಿದರೆ ಹಲವರು ನಗಬಹುದು.
28
ತಲೆ ಸ್ನಾನಕ್ಕೆ ಯಾವ ದಿನ ಒಳ್ಳೆಯದು?
ಆದರೆ ಕೆಲವು ಶಾಸ್ತ್ರಗಳ ಪ್ರಕಾರ, ಇಂತಿಂಥ ದಿನ ತಲೆ ಸ್ನಾನ ಮಾಡುವುದು ಶ್ರೇಷ್ಠ, ಇಂತಿಂಥ ದಿನ ತಲೆಸ್ನಾನ ಮಾಡಲೇಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ದಿನ ತಲೆಸ್ನಾನ ಮಾಡಿದರೆ ಒಳ್ಳೆಯದು, ಯಾವ ದಿನ ತಲೆಸ್ನಾನ ಮಾಡಲೇಬಾರದು ಎನ್ನುವುದನ್ನು ನೋಡೋಣ.
38
ತಲೆ ಸ್ನಾನಕ್ಕೆ ಯಾವ ದಿನ ಒಳ್ಳೆಯದು?
ಸಾಮಾನ್ಯವಾಗಿ ಎಲ್ಲರೂ ಭಾನುವಾರ ರಜಾ ದಿನವಾಗಿರುವ ಕಾರಣ ತಲೆಸ್ನಾನ ಮಾಡುತ್ತಾರೆ. ಇನ್ನು ಮಹಿಳೆಯರು ಮುಟ್ಟಾದ ಸಂದರ್ಭಗಳಲ್ಲಿ ತಲೆಸ್ನಾನ ಮಾಡುತ್ತಾರೆ. ಹಲವು ಪುರುಷರು ದಿನನಿತ್ಯವೂ ತಲೆಸ್ನಾನ ಮಾಡುತ್ತಾರೆ. ಕೇರಳ ಸೇರಿದಂತೆ ಕೆಲವು ಪ್ರದೇಶಗಳಲ್ಲಿಯೂ ಹೆಣ್ಣುಮಕ್ಕಳು ಕೂಡ ಪ್ರತಿದಿನವೂ ತಲೆಸ್ನಾನ ಮಾಡುವುದು ಇದೆ.
ಆದರೆ, ಶಾಸ್ತ್ರದ ಪ್ರಕಾರ ಕೆಲವೊಂದು ದಿನಗಳಲ್ಲಿ ತಲೆಸ್ನಾನ ನಿಷಿದ್ಧವಾಗಿದ್ದು, ಮತ್ತೆ ಕೆಲವು ದಿನಗಳಲ್ಲಿ ಸುಖ ಸಮೃದ್ಧಿ ತರುತ್ತದೆ ಎನ್ನಲಾಗಿದೆ. ಅವುಗಳನ್ನು ಇಲ್ಲಿ ನೋಡೋಣ. ಮಂಗಳವಾರ ಮತ್ತು ಶನಿವಾರಗಳಂದು ತಲೆಸ್ನಾನ ಮಾಡಲೇಬಾರದು ಎನ್ನಲಾಗುತ್ತದೆ. ಹೀಗೆ ಮಾಡಿದರೆ ದಿನನಿತ್ಯದ ಕೆಲಸದಲ್ಲಿ ವಿಳಂಬ ಆಗುವುದೂ ಅಲ್ಲದೇ ಇದು ಅಶುಭ ಫಲವನ್ನು ತಂದುಕೊಡುತ್ತದೆ ಎನ್ನಲಾಗಿದೆ.
58
ತಲೆ ಸ್ನಾನಕ್ಕೆ ಯಾವ ದಿನ ಒಳ್ಳೆಯದು?
ಇನ್ನು ಸಾಮಾನ್ಯವಾಗಿ ಎಲ್ಲರೂ ಮಾಡುವ ಭಾನುವಾರ ಕೂಡ ತಲೆಸ್ನಾನಕ್ಕೆ ಅಷ್ಟೊಂದು ಸೂಕ್ತ ಅಲ್ಲ ಎನ್ನಲಾಗಿದೆ. ಅದರಂತೆ ಗುರುವಾರ ಕೂಡ ತಲೆಸ್ನಾನ ಮಾಡುವುದನ್ನು ಅವಾಯ್ಡ್ ಮಾಡಿದರೆ ತುಂಬಾ ಉತ್ತಮ.
68
ತಲೆ ಸ್ನಾನಕ್ಕೆ ಯಾವ ದಿನ ಒಳ್ಳೆಯದು?
ಭಾನುವಾರ ಮತ್ತು ಗುರುವಾರ ತಲೆಸ್ನಾನಮಾಡಿದರೆ ಹೆಚ್ಚುವರಿ ಖರ್ಚು ಹಾಗೂ ಹೆಚ್ಚಿನ ಅನಗತ್ಯ ಕೆಲಸಗಳ ಹೊರೆ ಬರುವುದಾಗಿ ಹೇಳಲಾಗುತ್ತದೆ.
78
ತಲೆ ಸ್ನಾನಕ್ಕೆ ಯಾವ ದಿನ ಒಳ್ಳೆಯದು?
ಇನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರ ತಲೆಸ್ನಾನ ಬಹಳ ಶುಭಫಲವನ್ನು ನೀಡುತ್ತದೆ. ಇದು ಂಪತ್ತನ್ನು ಆಕರ್ಷಿಸುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಸಂಗಾತಿಯ ಜೊತೆ ಉತ್ತಮ ಬಾಂಧವ್ಯ ಹೊಂದಲು ಇದು ಸಹಕಾರಿಯಾಗಿದೆ.
88
ತಲೆ ಸ್ನಾನಕ್ಕೆ ಯಾವ ದಿನ ಒಳ್ಳೆಯದು?
ಆದ್ದರಿಂದ ನೀವು ತಲೆಸ್ನಾನ ಮಾಡುವಾಗ ಇನ್ನುಮುಂದೆ ವಾರಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇದು ಅದೃಷ್ಟ, ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ.