
ಜ್ಯೋತಿಷ್ಯದಲ್ಲಿ ನವಗ್ರಹಗಳ ನಾಯಕ ಸೂರ್ಯ ಪ್ರತಿ ತಿಂಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಜಾಗ ಬದಲಾಯಿಸುತ್ತಾನೆ. ಸೂರ್ಯನ ಈ ಸಂಚಾರ ನಮ್ಮ ವೃತ್ತಿ, ಹಣಕಾಸು, ಅಧಿಕಾರ, ಆತ್ಮವಿಶ್ವಾಸ ಹಾಗೂ ಸಮಾಜದಲ್ಲಿನ ಸ್ಥಾನಮಾನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 2026ರ ನವೆಂಬರ್ ತಿಂಗಳಲ್ಲಿ ಸೂರ್ಯನು ಶನಿ ಭಗವಂತನ ಆಳ್ವಿಕೆಯಲ್ಲಿರುವ ಅನುರಾಧಾ ನಕ್ಷತ್ರಕ್ಕೆ ಎಂಟ್ರಿ ಕೊಡಲಿದ್ದಾನೆ.
ಸೂರ್ಯ ಮತ್ತು ಶನಿ ಇಬ್ಬರೂ ಜ್ಯೋತಿಷ್ಯದಲ್ಲಿ ಬದ್ಧ ವೈರಿಗಳು. ಹಾಗಾಗಿ ಈ ನಕ್ಷತ್ರ ಬದಲಾವಣೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಗ್ರಹಗಳ ಸ್ಥಾನ ಹಾಗೂ ಜಾತಕದ ಆಧಾರದ ಮೇಲೆ ಈ ಸಂಚಾರ ಕೆಲವು ರಾಶಿಯವರಿಗೆ ಹೊಸ ಅವಕಾಶಗಳನ್ನು ತಂದುಕೊಡಲಿದೆ.
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2026ರ ನವೆಂಬರ್ 20ರಂದು ಸೂರ್ಯ ವೃಶ್ಚಿಕ ರಾಶಿಯಲ್ಲಿರುವ ಅನುರಾಧಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಡಿಸೆಂಬರ್ 3ರವರೆಗೆ ಇದೇ ನಕ್ಷತ್ರದಲ್ಲಿ ಇರುತ್ತಾನೆ. ಶನಿಯ ನಕ್ಷತ್ರದಲ್ಲಿ ಸೂರ್ಯ ಇರುವ ಈ ಸಮಯದಲ್ಲಿ 5 ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್, ಕೈತುಂಬಾ ಸಂಪಾದನೆ ಹಾಗೂ ವೈಯಕ್ತಿಕ ಜೀವನದಲ್ಲಿ ಖುಷಿ ಸಿಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಅಂತ ಇಲ್ಲಿ ನೋಡೋಣ.
ಕರ್ಕಾಟಕ ರಾಶಿಯವರಿಗೆ ಸೂರ್ಯನ ಈ ನಕ್ಷತ್ರ ಬದಲಾವಣೆ ಆಫೀಸ್‌ನಲ್ಲಿ ಅನಿರೀಕ್ಷಿತ ಬೆಳವಣಿಗೆಗಳನ್ನು ತರಲಿದೆ. ಇಲ್ಲಿಯವರೆಗೆ ನೀವು ಪಟ್ಟ ಕಷ್ಟಕ್ಕೆ ಬಾಸ್ ಕಡೆಯಿಂದ ಮೆಚ್ಚುಗೆ ಹಾಗೂ ಗುರುತಿಸುವಿಕೆ ಸಿಗುತ್ತದೆ.
ಕಂಪನಿಯ ಬೆಳವಣಿಗೆಗೆ ಹೊಸ ಐಡಿಯಾಗಳನ್ನು ಕೊಡುವ ಮೂಲಕ ನೀವು ಮುಖ್ಯ ಜವಾಬ್ದಾರಿಗಳನ್ನು ಪಡೆದುಕೊಳ್ಳಬಹುದು. ಪ್ರಮೋಷನ್ ಅಥವಾ ಕೆಲಸ ಬದಲಾಯಿಸಲು ಕಾಯುತ್ತಿರುವವರಿಗೂ ಒಳ್ಳೆ ಸುದ್ದಿ ಸಿಗಲಿದೆ.
ಕಲಾ ಕ್ಷೇತ್ರದಲ್ಲಿ ಇರುವವರಿಗೆ ಈ ಸಮಯ ಹೊಸ ಸೃಷ್ಟಿಗಳನ್ನು ಮಾಡಲು ಸ್ಫೂರ್ತಿ ನೀಡುತ್ತದೆ. ಸಂಗೀತ, ಚಿತ್ರಕಲೆ, ನಾಟಕದಂತಹ ರಂಗದಲ್ಲಿ ಇರುವವರು ತಮ್ಮ ಟ್ಯಾಲೆಂಟ್ ತೋರಿಸಲು ಒಳ್ಳೆ ವೇದಿಕೆ ಸಿಗುತ್ತದೆ.
ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಕಾಣಲಿದ್ದು, ಉನ್ನತ ಶಿಕ್ಷಣದ ಕನಸು ನನಸಾಗಬಹುದು. ವೃತ್ತಿಜೀವನದಲ್ಲಿ ಸಿಗುವ ಈ ಮನ್ನಣೆ ನಿಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಕುಂಭ ರಾಶಿಯವರಿಗೆ ಸೂರ್ಯನ ಈ ಅನುರಾಧಾ ನಕ್ಷತ್ರದ ಸಂಚಾರ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಹೋಗಲು ದಾರಿ ಮಾಡಿಕೊಡುತ್ತದೆ. ಆಫೀಸ್‌ನಲ್ಲಿ ನಿಮ್ಮ ಟ್ಯಾಲೆಂಟ್ ಹಾಗೂ ಲೀಡರ್‌ಶಿಪ್ ಕ್ವಾಲಿಟಿ ಎಲ್ಲರಿಗೂ ಗೊತ್ತಾಗುತ್ತದೆ.
ಸರ್ಕಾರಿ ಕೆಲಸ, ರಾಜಕೀಯ ಹಾಗೂ ಆಡಳಿತ ವಿಭಾಗದಲ್ಲಿ ಇರುವವರಿಗೆ ದೊಡ್ಡ ಜವಾಬ್ದಾರಿಗಳು ಸಿಗಲಿವೆ. ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಮೋಷನ್ ಅಥವಾ ಅಧಿಕಾರ ಸಿಗುವ ಚಾನ್ಸ್ ಇದೆ. ಸಮಾಜದಲ್ಲಿ ನಿಮ್ಮ ಬೆಲೆ ಮತ್ತು ಮರ್ಯಾದೆ ಹೆಚ್ಚಾಗುತ್ತದೆ.
ಬ್ಯುಸಿನೆಸ್ ಮಾಡುವವರು ಹೊಸ ಐಡಿಯಾಗಳನ್ನು ಬಳಸಿ ವ್ಯಾಪಾರವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬಹುದು. ಗ್ರಾಹಕರಿಗೆ ಏನು ಬೇಕು ಅಂತ ಅರ್ಥ ಮಾಡಿಕೊಂಡು ಕೆಲಸ ಮಾಡಿದರೆ ಲಾಭ ಗ್ಯಾರಂಟಿ. ಆದರೆ, ದೊಡ್ಡ ಮೊತ್ತದ ಬಂಡವಾಳ ಹಾಕುವಾಗ ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಮಕರ ರಾಶಿಯವರಿಗೆ ಸೂರ್ಯನ ಈ ಅನುರಾಧಾ ನಕ್ಷತ್ರದ ಸಂಚಾರ ಜೀವನದಲ್ಲಿ ಹೊಸ ಪ್ರಗತಿಯ ಬಾಗಿಲುಗಳನ್ನು ತೆರೆಯಲಿದೆ. ಮುಖ್ಯವಾಗಿ ನಿಮ್ಮ ಆದಾಯ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ. ಬಹಳ ದಿನಗಳಿಂದ ಮನಸ್ಸಿನಲ್ಲಿದ್ದ ಆಸೆಗಳನ್ನು ಈಡೇರಿಸಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗುತ್ತದೆ.
ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳ ಪರಿಚಯ ಆಗುತ್ತದೆ, ಅವರ ಮೂಲಕ ನಿಮ್ಮ ಮುಖ್ಯ ಕೆಲಸಗಳನ್ನು ಸುಲಭವಾಗಿ ಮುಗಿಸಿಕೊಳ್ಳಬಹುದು. ಹೊಸ ಮನೆ ಅಥವಾ ವಾಹನ ಖರೀದಿಸುವ ಪ್ಲಾನ್ ಇದ್ದರೆ ಅದಕ್ಕೂ ಇದು ಒಳ್ಳೆ ಸಮಯ.
ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಬೇಕಾದ ಕಡೆಗೆ ಟ್ರಾನ್ಸ್‌ಫರ್ ಅಥವಾ ಕೆಲಸದ ವಾತಾವರಣದಲ್ಲಿ ಬದಲಾವಣೆ ಸಿಗುವ ಚಾನ್ಸ್ ಇದೆ. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆ ಆಫರ್ ಬರಬಹುದು. ಸ್ವಂತ ಬ್ಯುಸಿನೆಸ್ ಶುರು ಮಾಡಬೇಕು ಅಂದುಕೊಂಡವರಿಗೂ ಕಾಲ ಕೂಡಿಬರಲಿದೆ.
ನಿಮ್ಮ ಪ್ರತಿಯೊಂದು ಪ್ರಯತ್ನಕ್ಕೂ ಮನೆಯವರ ಸಪೋರ್ಟ್ ಸಿಗುತ್ತದೆ. ಸಂಬಂಧಿಕರ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಮನೆಯಲ್ಲಿ ಖುಷಿ ಹೆಚ್ಚಾಗುತ್ತದೆ.
ಕನ್ಯಾ ರಾಶಿಯವರಿಗೆ ನವೆಂಬರ್ 20ರಿಂದ ಡಿಸೆಂಬರ್ 3ರವರೆಗಿನ ಸಮಯ ಸಾಕಷ್ಟು ಹೊಸ ಅವಕಾಶಗಳನ್ನು ಸೃಷ್ಟಿ ಮಾಡಲಿದೆ. ಸೂರ್ಯ ನಿಮ್ಮ ರಾಶಿಯ ಮೂರನೇ ಮನೆಯಲ್ಲಿ ಇರುವುದರಿಂದ, ನಿಮ್ಮ ಪ್ರಯತ್ನ ಹಾಗೂ ಆತ್ಮವಿಶ್ವಾಸದಲ್ಲಿ ದೊಡ್ಡ ಮಟ್ಟದ ಏರಿಕೆ ಕಾಣಬಹುದು.
ಬ್ಯುಸಿನೆಸ್‌ನಲ್ಲಿ ಬಹಳ ದಿನಗಳಿಂದ ಇದ್ದ ಅಡೆತಡೆಗಳನ್ನು ನಿವಾರಿಸಲು ದಾರಿ ಸಿಗುತ್ತದೆ. ಹೊಸ ಜನರ ಪರಿಚಯ ಹಾಗೂ ಸ್ನೇಹದಿಂದ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವ ಅವಕಾಶ ಒದಗಿಬರುತ್ತದೆ.
ಪಾಲುದಾರಿಕೆ (ಪಾರ್ಟ್ನರ್‌ಶಿಪ್) ಬ್ಯುಸಿನೆಸ್ ಮಾಡುವವರಿಗೆ ಹೊಸ ಒಪ್ಪಂದಗಳು ಲಾಭ ತಂದುಕೊಡಲಿವೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ, ಜೊತೆಗೆ ಮನೆಯಲ್ಲೂ ಖುಷಿಯ ವಾತಾವರಣ ಇರುತ್ತದೆ.
ನಿಮ್ಮ ಭವಿಷ್ಯದ ಪ್ಲಾನ್‌ಗಳಿಗೆ ಸಂಗಾತಿಯ ಬೆಂಬಲ ಸಿಗುತ್ತದೆ. ಇಬ್ಬರ ನಡುವೆ ಅಂಡರ್‌ಸ್ಟ್ಯಾಂಡಿಂಗ್ ಚೆನ್ನಾಗಿರುವುದರಿಂದ ಫ್ಯಾಮಿಲಿ ಹಾಗೂ ಕೆಲಸ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬಹುದು.
ಮಿಥುನ ರಾಶಿಯವರಿಗೆ ಸೂರ್ಯನ ಈ ನಕ್ಷತ್ರ ಬದಲಾವಣೆ ಓದು ಮತ್ತು ವೃತ್ತಿಜೀವನದಲ್ಲಿ ಒಳ್ಳೆ ಪ್ರಗತಿ ತಂದುಕೊಡುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುವುದರ ಜೊತೆಗೆ ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವವರು ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣುತ್ತಾರೆ. ಬಹಳ ದಿನಗಳಿಂದ ಪೆಂಡಿಂಗ್ ಇದ್ದ ಪ್ರಾಜೆಕ್ಟ್‌ಗಳನ್ನು ಮತ್ತೆ ಶುರು ಮಾಡಲು ಇದು ಒಳ್ಳೆ ಸಮಯ.
ಕೆಲಸ ಮಾಡುವ ಕಡೆ ನಿಮ್ಮ ಮಾತಿಗೂ ಬೆಲೆ ಸಿಗುತ್ತದೆ, ಜೊತೆಗೆ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸುವ ಅವಕಾಶ ಒದಗಿಬರುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಫಾರಿನ್ ಟ್ರಿಪ್ ಅಥವಾ ಹೊಸ ಅವಕಾಶಗಳು ಸಿಗಬಹುದು.
ಹಳೇ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ಅವರ ಮೂಲಕ ಹೊಸ ಬ್ಯುಸಿನೆಸ್ ಪ್ಲಾನ್‌ಗಳು ಶುರುವಾಗಬಹುದು. ನೀವು ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಇದು.